ಹುಲಸೂರ: ತಾಲ್ಲೂಕಿನ ಗೋರ್ಟಾ(ಬಿ) ಗ್ರಾಮದ ಶ್ರೀ ಗುರುಪಾದ ಶಿವಾಚಾರ್ಯ ಪ್ರೌಢಶಾಲೆಯ 1979–80ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ 46 ವರ್ಷಗಳ ನಂತರ ಸ್ನೇಹ ಮಿಲನ ಹಾಗೂ ಗುರುವಂದನಾ ಸಮಾರಂಭ ಗುರುವಾರ ಹಳೆ ವಿದ್ಯಾರ್ಥಿಗಳ ಆತ್ಮೀಯ ಭೇಟಿ, ಗುರುಗಳಿಗೆ ಗೌರವ ನಮನ ಹಾಗೂ ಶಾಲಾ ದಿನಗಳ ನೆನಪುಗಳ ಸಂಭ್ರಮಕ್ಕೆ ಸಾಕ್ಷಿಯಾಯಿತು.

ಗೋರಖನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಡಿವಾಳಪ್ಪ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ,‘ಹಳೆ ವಿದ್ಯಾರ್ಥಿಗಳು ಹಲವು ದಶಕಗಳ ಬಳಿಕ ಒಂದಾಗಿ ಸೇರಿ ಗುರುಗಳನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯ’ ಎಂದರು.

ಸ್ನೇಹ ಮಿಲನ–ಗುರುವಂದನಾ ಒಕ್ಕೂಟದ ಅಧ್ಯಕ್ಷ ಗುರುನಾಥ ಅಕ್ಕಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದ ಸ್ನೇಹ ಹಾಗೂ ಗುರುಗಳ ಮಾರ್ಗದರ್ಶನ ಜೀವನಪೂರ್ತಿ ದಾರಿದೀಪವಾಗಿರುತ್ತದೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಸವರಾಜ ಬಲ್ಲೂರ,‘ಶಾಲೆ ಎಂದರೆ ಕೇವಲ ಶಿಕ್ಷಣ ನೀಡುವ ಕೇಂದ್ರವಲ್ಲ; ಅದು ವ್ಯಕ್ತಿತ್ವ ರೂಪಿಸುವ ಮಂದಿರ. ಗುರುಗಳ ಆಶೀರ್ವಾದ ಮತ್ತು ಶಾಲಾ ದಿನಗಳ ನೆನಪುಗಳು ಬದುಕಿನ ಅಮೂಲ್ಯ ಸಂಪತ್ತು’ ಎಂದು ಹೇಳಿದರು.

ಮಲ್ಲಿಕಾರ್ಜುನ ರಾಜೋಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಶಿಕ್ಷಕ ಪಂಚಾಕ್ಷರಿ ಹಿರೇಮಠ, ನಿವೃತ್ತ ಶಿಕ್ಷಕರಾದ ಬಾಬುರಾವ ರಾಜೋಳೆ, ನಿರಂಜಯ್ಯ ರುದ್ರಮುನಿ ಮಠ, ವಿಶ್ವನಾಥ ಪಾಟೀಲ, ಸುಭಾಷ ಪತಂಗೆ, ವಿಶ್ವನಾಥಯ್ಯ ಮಠಪತಿ ಹಾಗೂ ನಿವೃತ್ತ ಜವಾನ ಬಾಬುರಾವ ಗೌರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಮ್ಮ ಯರನಳ್ಳೆ, ಸೂರ್ಯಕಾಂತ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೀತಾ ಸಂಜೀವಕುಮಾರ ಕೈಕಡಿ, ಶ್ರೀ ಗೋರಖನಾಥ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಭರತ ಪತಂಗೆ ಹಾಗೂ ಕಾರ್ಯದರ್ಶಿ ರಾಜಕುಮಾರ ಮೈನಾಳೆ ಉಪಸ್ಥಿತರಿದ್ದರು.ಪ್ರಭುಶೆಟ್ಟಿ ಬುಳ್ಳಾ ನಿರೂಪಿಸಿದರು. ಬಸವಣ್ಣಪ್ಪ ಮಮ್ಮಾ ಸ್ವಾಗತಿಸಿದರು. ಮಲ್ಲಿಕಾರ್ಜುನ ರಾಜೋಳೆ ಪ್ರಸ್ತಾವನೆ ಸಲ್ಲಿಸಿದರು. ಶಿವರಾಜ ರಟಕಲೆ ವಂದಿಸಿದರು. ಮಹಾದೇವಪ್ಪ ಮಮ್ಮಾ ಸಮನ್ವಯ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-33-286443933

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.