ಹುಲಸೂರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಲಸೂರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಪಟ್ಟಣದಲ್ಲಿ ನೆರವೇರಿತು.

ಸಂಘದ ತಾಲ್ಲೂಕು ಅಧ್ಯಕ್ಷರಾಗಿ ರಾಜಪ್ಪ ನಂದೊಡೆ ಎರಡನೇ ಅವಧಿಗೆ ಅವಿರೋಧ ಆಯ್ಕೆಯಾದರು. ನೂತನ ಪದಾಧಿಕಾರಿಗಳಿಗೆ ಚುನಾವಣಾ ಅಧಿಕಾರಿ ಅಶೋಕ್ ರೆಡ್ಡಿ ನಿಂಗಾವರೆ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಮಾಣಿಕಪ್ಪ ಸಂಗನಬಟ್ಟೆ ಪ್ರಮಾಣ ಪತ್ರ ವಿತರಿಸಿ ಸನ್ಮಾನಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ ಮಾಲಿಪಾಟೀಲ್, ಬಸವಕಲ್ಯಾಣ ತಾಲ್ಲೂಕು ಅಧ್ಯಕ್ಷ ಸಂತೋಷ್ ಅಕ್ಕಣ್ಣ, ಜಿಲ್ಲಾ ಉಪಾಧ್ಯಕ್ಷ ಅಲ್ಲಾವುದ್ದೀನ್ ಪಟೇಲ್, ಜಿಲ್ಲಾ ಸಹ ಕಾರ್ಯದರ್ಶಿ ಶರಣಬಸಪ್ಪ ಬಿರಾದಾರ, ಬಸವಕಲ್ಯಾಣ ತಾಲ್ಲೂಕಿನ ಪ್ರಧಾನ ಕಾರ್ಯದರ್ಶಿ ಚೆನ್ನವೀರ ಸಿಂದೆ, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಜ್ ಮಾಶೆಟ್ಟೆ, ಮುಖ್ಯಗುರುಗಳ ಸಂಘದ ಅಧ್ಯಕ್ಷ ಹೇಮರೆಡ್ಡಿ ಉಪಸ್ಥಿತರಿದ್ದರು.

ರೋಹಿದಾಸ್ ಮಾಲೆ, ಮಾಧವ್ ಸೂರ್ಯವಂಶಿ, ಸಂತೋಷ್ ಪಾಟೀಲ್, ವಿಜಯಕುಮಾರ್ ಪಟ್ನೆ, ನವನಾಥ ದೇಶಮುಖ, ಮೀನಾಕ್ಷಿ ಅದೆಪ್ಪ, ಆಶಾ ನಾಗರಾಜ್ ಹಾವಣ್ಣ, ದಿಗರಾಜ ವಕಾರೆ, ರಮೇಶ ತೋಗಾವೆ ಸೇರಿದಂತೆ ಬಸವಕಲ್ಯಾಣ ತಾಲ್ಲೂಕಿನ ಪದಾಧಿಕಾರಿಗಳು, ಹುಲಸೂರ ತಾಲ್ಲೂಕಿನ ಮುಖ್ಯಗುರುಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-33-1196645113

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.