ಹುನಗುಂದ: ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ 6ನೇ ತರಗತಿಯ ಪ್ರವೇಶ ಪರೀಕ್ಷೆಯ ಫಲಿತಾಂಶ ಮೀಸಲಾತಿ ಅನ್ವಯ 120 ಸೀಟುಗಳ ಪಟ್ಟಿ ಇಲಾಖೆ ತಂತ್ರಾಂಶದಲ್ಲಿ ಪ್ರಕಟಿತಗೊಂಡಿದೆ.

ಅದರಂತೆ ಅರ್ಹತೆ ಪಡೆದ ಮೀಸಲಾತಿ ಆಧಾರದ ಮೇಲೆ ಮೊದಲನೇ ಸುತ್ತಿನ ದಾಖಲಾತಿಯು ಜೂನ್ 1 ರಿಂದ 3ರವರೆಗೆ ನಡೆಯಲಿದೆ. ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಸಂಬಂಧಿಸಿದ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯದೊಳಗೆ ದಾಖಲಾತಿ ಮಾಡಿಕೊಳ್ಳಲು ತಿಳಿಸಲಾಗಿದೆ. ಎರಡನೇ ಸುತ್ತಿನ ಪ್ರವೇಶ ದಾಖಲಾತಿಯು ಜೂನ್ 8 ರಿಂದ 10ರ ವರೆಗೆ ಹಾಗೂ ಮೂರನೇ ಸುತ್ತಿನ ಪ್ರವೇಶ ದಾಖಲಾತಿ ಜೂನ್ 15 ರಂದು ನಡೆಯಲಿವೆ ಎಂದು ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕಿ ಶೋಭಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಮೊ: 9986841469/ 9845794008 ಅನ್ನು ಸಂಪರ್ಕಿಸಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-19-1212165041

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.