ಹುನಗುಂದ: ಮಾಜಿ ಸಚಿವ ಎಸ್. ಆರ್. ಕಾಶಪ್ಪನವರ ಜನ್ಮ ಅಮೃತ ಮಹೋತ್ಸವದ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಸ್ವರಚಿತ ಕವನ ಸ್ಪರ್ಧೆಯಲ್ಲಿ ಇಳಕಲ್ ತಾಲ್ಲೂಕಿನ ಹಿರೇಸಿಂಗನಗುತ್ತಿಯ ಬಸವರಾಜ ಹೂಗಾರ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇಳಕಲ್ನ ಮಹಾಂತೇಶ ಅಂಗಡಿ ಮತ್ತು ಹುನಗುಂದದ ಶ್ರೀಶೈಲ ಹೊಸೂರ–ದ್ವಿತೀಯ, ಶರಣಪ್ಪ ಹೂಲಗೇರಿ ತೃತೀಯ, ಧನ್ನೂರಿನ ನಿಂಗಪ್ಪ ಧನ್ನೂರ, ಇಳಕಲ್ನ ಕೆ.ಎಚ್. ಸೋಲಾಪುರ ಮತ್ತು ಹಡಗಲಿಯ ಮುತ್ತಣ್ಣ ಕಠಾಣಿ ಅವರ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ.

ಕವಿಗೋಷ್ಠಿಯನ್ನು ಹುನಗುಂದದಲ್ಲಿ ಶೀಘ್ರದಲ್ಲಿ ನಡೆಸಲಾಗುವುದು. ಬಹುಮಾನಿತ ಕವನಗಳನ್ನು ಎಸ್.ಆರ್.ಕೆ. ಸಂಸ್ಮರಣ ಗ್ರಂಥದಲ್ಲಿ ಪ್ರಕಟಿಸಲಾಗುವುದು. ಎಸ್.ಆರ್.ಕೆ. ಅವರ ಮೊಮ್ಮಗಳು ಪ್ರಿಯಾಂಕಾ ಬಿರಜದಾರ ಅವರು ಈ ಎಲ್ಲ ಕವಿತೆಗಳನ್ನು ಸಂಕಲಿಸಿ ‘ಜನಾನುರಾಗಿ ಕಾಶಪ್ಪನವರ’ ಎಂಬ ಕವನ ಸಂಕಲನ ಪ್ರಕಟಿಸಲಿದ್ದಾರೆ ಎಂದು ಸ್ಪರ್ಧೆಯ ಸಂಯೋಜಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-19-1422840388

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.