ಹುನಗುಂದ: ಪ್ರೀತಿ, ಅಂತಃಕರಣ ಹಾಗೂ ಆತ್ಮೀಯತೆಗೆ ಇಂದಿನ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಇಳಕಲ್ದ ಗುರುಮಹಾಂತ ಸ್ವಾಮೀಜಿ ಹೇಳಿದರು.

ಭಾನುವಾರ ನಗರದ ಬಸವ ಮಂಟಪದಲ್ಲಿ ವಿಜಯ ಮಹಾಂತೇಶ ಪ್ರೌಢಶಾಲೆ ಹಾಗೂ ಬಾಲಕಿಯರ ಪ್ರೌಢಶಾಲೆಯ 1989-90ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸ್ನೇಹಿತರೆಲ್ಲ ಸೇರಿ ಸಂಘಟನೆ ಮಾಡಿ ಕೊಂಡು ಗೆಳೆಯರ ಕಷ್ಟ ಸುಖಗಳಲ್ಲಿ ಪಾಲ್ಗೊಳ್ಳಿ. ನಗರದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವರನ್ನು ಗುರುತಿಸುವ ಕಾರ್ಯ ಆಗಬೇಕು. ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆಗೆ ಶಿಕ್ಷಣ ನೀಡಿ ಹಾಗೂ ನೆಲದ ಸಂಸ್ಕೃತಿ ತಿಳಿಸುವ ಕಾರ್ಯ ಮಾಡಿ ಎಂದರು.

ನಿವೃತ್ತ ಮುಖ್ಯಶಿಕ್ಷಕ ಎ.ಒ.ಬಿರಾದಾರ ಮಾತನಾಡಿ, ವಿದ್ಯೆಗೆ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಶಿಕ್ಷಕರಿಂದ ಪಡೆದ ಜ್ಞಾನದಿಂದ ನಮ್ಮ ವಿಚಾರ ಮತ್ತು ಬದುಕು ಬದಲಾವಣೆಯಾಗುತ್ತದೆ. ಶಿಕ್ಷಕರು ಮಕ್ಕಳ ಮನದಲ್ಲಿ ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡುತ್ತಾರೆ. ಅಂತವ ರನ್ನು ಸ್ಮರಿಸುತ್ತಿರುವುದು ಖುಷಿಯ ವಿಚಾರ ಎಂದರು.

ನಿವೃತ್ತ ಮುಖ್ಯಶಿಕ್ಷಕ ಎಂ.ಎನ್.ತೇನಹಳ್ಳಿ ಮಾತನಾಡಿದರು. ತಮಗೆ ಕಲಿಸಿದ ಶಿಕ್ಷಕರು ಹಾಗೂ ಶಿಕ್ಷಕರೇತರ ಸಬ್ಬಂದಿ ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಮೊದಲು ವಿಜಯ ಮಹಾಂತೇಶ ವೃತ್ತದಲ್ಲಿನ ಮಹಾಂತ ಶ್ರೀಗಳ ಮೂರ್ತಿಗೆ ಮಾಲಾರ್ಪಣೆ ಮಾಡಿ, ಡೊಳ್ಳು ಕುಣಿತದ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತಂದರು. ಬಸವಲಿಂಗ ಸ್ವಾಮೀಜಿ, ಗಚ್ಚಿನ ಮಠದ ಅಮರೇಶ್ವರ ದೇವರು. ಮಲ್ಲಿಕಾ ರ್ಜುನ ಹಿರೇಮಠ, ವಿ.ವಿ.ಪತ್ತಾರ, ಎಸ್.ಎಸ್.ದರಾಗದ, ಬಿ.ಎಂ.ಲೈನದ, ಜಿ.ಕೆ.ಬೂಸಾರೆ, ಎಲ್.ಎಂ.ಹಿರೇಮಠ, ಬಿ.ಸಿ.ಅಂಗಡಿ, ಎಸ್.ಎಂ.ಮೇರಾಕೂರ, ತುಂಬಲಗಡ್ಡಿ, ಕಂದಕೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-19-320765995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.