ಹುಣಸೂರು: ‘ಬಾಲ್ಯ ವಿವಾಹ ಸಾಮಾಜಿಕ ಪಿಡುಗಾಗಿದ್ದು, ಇದನ್ನು ಬೇರು ಸಮೇತ ಕಿತ್ತು ಹಾಕುವ ದಿಕ್ಕಿನಲ್ಲಿ ಸಾರ್ವಜನಿಕರು ಕೈಜೋಡಿಸಿ ಹೆಣ್ಣು ಮಕ್ಕಳ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೋಮಯ್ಯ ಹೇಳಿದರು.

ಜಿಲ್ಲಾ ಮಕ್ಕಳ ಸಹಾಯವಾಣಿ, ಶಿಶು ಅಭಿವೃದ್ಧಿ ಇಲಾಖೆ ಮತ್ತು ಪಂಚಾಯಿತಿ ಸಹಯೋಗದಲ್ಲಿ ತಾಲ್ಲೂಕಿನ ಉಯಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದ ಬಾಲ್ಯವಿವಾಹ ತಡೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಾಲ್ಯವಿವಾಹ ನಿಷೇದ ಕಾಯ್ದೆ ಹಾಗೂ ಪರಿಸ್ಕೃತ 2006 ಪ್ರಕಾರ 18 ವರ್ಷ ತುಂಬದ ಹೆಣ್ಣು ಮಕ್ಕಳು ಹಾಗೂ 21 ವರ್ಷ ದಾಟದ ಗಂಡು ಮಕ್ಕಳಿಗೆ ವಿವಾಹ ಮಾಡುವುದು ಕಾನೂನು ಬಾಹಿರ. ಪೋಷಕರು ಯಾರಿಗೂ ತಿಳಿಯದಂತೆ ವಿವಾಹ ನಿಶ್ಚಿತಾರ್ಥ ಅಥವಾ ಇನ್ಯಾವುದೇ ರೀತಿಯ ಒಪ್ಪಂದಗಳನ್ನು ನಿಗದಿತ ವಯಸ್ಸಿಗೆ ಮುಂಚಿತವಾಗಿ ಮಾಡುವಂತಿಲ್ಲ. ಕಾನೂನು ದೃಷ್ಟಿಯಲ್ಲಿ ಇದು ಅಪರಾಧವಾಗಲಿದ್ದು, ಎಚ್ಚರವಹಿಸಬೇಕು’ ಎಂದರು.

‘ಕೆಲವು ಘಟನೆಗಳಲ್ಲಿ ಈ ರೀತಿಯ ಕಾನೂನುಬಾಹಿರ ವಿವಾಹಗಳು ನಡೆದಿದ್ದರೂ ಸುತ್ತಮುತ್ತಲ ಜನರು ತಮಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲದಂತೆ ದೂರ ಉಳಿಯುವ ಪ್ರಸಂಗಗಳು ಹೆಚ್ಚಾಗಿದೆ. ಈ ರೀತಿ ನಡೆದುಕೊಂಡರೆ ನಾವು ಸಮಾಜಕ್ಕೆ ಮಾಡುವ ದ್ರೋಹ. ಕಾನೂನು ಚೌಕಟ್ಟಿನಲ್ಲಿ ಅಪರಾಧ ಎನ್ನುವ ಪ್ರಕರಣಗಳು ಕಣ್ಮುಂದೆ ನಡೆಯುತ್ತಿದ್ದರೂ ತಮ್ಮದಲ್ಲ ಎಂದು ಮೌನವಹಿಸುವುದು ಪ್ರಥಮ ಅಪರಾಧ’ ಎಂದರು.

‘ಗ್ರಾಮೀಣ ಭಾಗದಲ್ಲಿ ಆಸ್ತಿ ಸಂಪತ್ತಿನ ಆಸೆಗೆ ಚಿಕ್ಕ ಮಕ್ಕಳನ್ನು ಹಿರಿಯ ವಯಸ್ಸಿನ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಡುವ ಪ್ರಕರಣಗಳು ಜೀವಂತವಾಗಿದೆ. ಈ ರೀತಿ ಮಾಡುವುದರಿಂದ ಹೆಣ್ಣು ದೈಹಿಕವಾಗಿ ಸಾಮರ್ಥ್ಯ ಇಲ್ಲದಿದ್ದರೂ ತಾಯಿ ಆಗಿರುತ್ತಾಳೆ. ಇದರಿಂದಾಗಿ ಮಾನಸಿಕ, ದೈಹಿಕ ಒತ್ತಡದಿಂದ ಬಳಲಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ’ ಎಂದರು.

‘ಈ ವಿಷಯದಲ್ಲಿ ನಾಗರಿಕ ಸಮಾಜ ಜವಾಬ್ದಾರಿಯಿಂದ ಹಾಗೂ ಮುನ್ನೆಚ್ಚರಿಕೆಯಿಂದ ಸಮಾಜವನ್ನು ಜಾಗೃತಗೊಳಿಸುವಲ್ಲಿ ಪ್ರಾಮುಖ್ಯತೆ ವಹಿಸಬೇಕು. ಇದರಿಂದ ಹೆಣ್ಣು ಮಕ್ಕಳ ಬದುಕು ಸರಿಯಾದ ದಿಕ್ಕಿನಲ್ಲಿ ಬದುಕು ಕಟ್ಟಿಕೊಳ್ಳಲು ಸಹಕಾರವಾಗಲಿದೆ’ ಎಂದು ಹೇಳಿದರು.

ಜಾಗೃತಿ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿ ಅಂಗನವಾಡಿ ಕಾರ್ಯಕರ್ತರು,ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-38-78815147

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.