ಹುಣಸೂರು: ‘ಕನ್ನಡ ಕೇವಲ ಭೂಮಿ, ಭಾಷೆ ಮಾತ್ರವಲ್ಲ, ಅದೊಂದು ಸಂಸ್ಕೃತಿ, ಪರಂಪರೆಯಾಗಿದೆ’ ಎಂದು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ವಸಂತಕುಮಾರ್ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ರೋಟರಿ ಭವನದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡತನ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕ. ಈ ಹಿಂದೆ ಸಾವಯವ ಕೃಷಿ ಮಾಡುತ್ತಿದ್ದ ನಾವು ರಾಸಾಯನಿಕ ಕೃಷಿಗೆ ಬದಲಾದೆವು. ಇದೀಗ ಮತ್ತು ಸಾವಯವ ಕೃಷಿಯ ಮಂತ್ರ ಜಪಿಸುತ್ತಿದ್ದೇವೆ. ಈ ಹಿಂದೆ ಪಂಚೆ, ಶಲ್ಯ ನಮ್ಮ ಸಂಸ್ಕೃತಿಯಾಗಿತ್ತು. ಆಧುನಿಕತೆಗೆ ಮರುಳಾಗಿ ಇದೀಗ ಮತ್ತೆ ಪಂಚೆ ಶಲ್ಯದ ಕನಸು ಕಾಣತ್ತಿದ್ದೇವೆ. ಶಾಲೆಯ ಸಂಸ್ಕೃತಿಯನ್ನು ಅಳಿಸಿ ಕಾನ್ವೆಂಟ್ ಸ್ಥಾಪಿಸಿಕೊಂಡು ಪರದಾಡುತ್ತಿದ್ದೇವೆ’ ಎಂದು ಹೇಳಿದರು.

‘ಒಡೆದು ಹೋದ ಮನಸುಗಳನ್ನು ಒಂದುಗೂಡಿಸುವುದೇ ಮಾತೃಭಾಷೆ. ಜಗತ್ತಿನ ಎಲ್ಲ ಜ್ಞಾನಗಳೂ ಕನ್ನಡ ಭಾಷೆಯ ಮೂಲಕ ಕನ್ನಡಿಗನನ್ನು ತಲುಪಿದಲ್ಲಿ ಭಾಷೆ ಮತ್ತು ನೆಲ ಉಳಿಯಲು ಸಾಧ್ಯ, ನ್ಯಾಯಾಧೀಶರು ಕನ್ನಡದಲ್ಲಿ ತೀರ್ಪು ನೀಡಲು ಆರಂಭಿಸಿದ್ದು, ಹಾಗಾಗಿ ಜ್ಞಾನ ನಮ್ಮನ್ನು ಸೇರಲು ಕನ್ನಡ ಭಾಷೆ ಬಳಕೆಯಾಗಲಿ. ವೈದ್ಯಕೀಯ ಮುಂತಾದ ವೃತ್ತಿಪರ ಕೋರ್ಸ್ಗಳು ಕನ್ನಡದೊಂದಿಗೆ ಬೆಸೆಯಲಿ. ಆಗ ಕನ್ನಡದ ಜೊತೆಜೊತೆಗೆ ಕನ್ನಡಿಗರೂ ಮತ್ತು ಕರ್ನಾಟಕವೂ ಅಭಿವೃದ್ದಿ ಹೊಂದಲು ಸಾಧ್ಯ’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಕೆ. ಮಹದೇವ್ ಪ್ರಾಸ್ತಾವಿಕ ನುಡಿಗಳನ್ನಾಡಿ, ‘4 ವರ್ಷಗಳಲ್ಲಿ ತಾಲೂಕಿನಲ್ಲಿ ಕನ್ನಡ ಕಟ್ಟುವ ಕಾರ್ಯದಲ್ಲಿ ಕಸಾಪ ಯಶಸ್ವಿಯಾಗಿದೆ. 650ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದದ 150ಕ್ಕೂ ಹೆಚ್ಚು ಮಂದಿಗೆ ಗೌರವ ಸಮರ್ಪಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷೆ ಅಭಿವೃದ್ಧಿಗಾಗಿ ಕನ್ನಡ ಸಂಘಗಳನ್ನು ತೆರೆದು ಯುವವಿದ್ಯಾರ್ಥಿಗಳನ್ನು ಒಳಗೊಳ್ಳುವಂತೆ ಮಾಡಲಾಗಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಳನಾಯಕ ಮಾತನಾಡಿ, ‘ಕನ್ನಡ ಶಾಲೆಗಳನ್ನು ಉಳಿಸುವತ್ತ ನಾವೆಲ್ಲರೂ ಶ್ರಮವಹಿಸಬೇಕಿದೆ’ ಎಂದರು.

ಎಸಿಡಿಪಿಒ ಸೋಮಣ್ಣ, ಪೌರಾಯುಕ್ತೆ ಎಂ.ಮಾನಸ, ಎಲ್ಐಸಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಕೆ.ಎಚ್.ವೀರಭದ್ರಪ್ಪ, ಅಧ್ಯಕ್ಷತೆವಹಿಸಿದ್ದ ರೋಟರಿ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್ ಮಾತನಾಡಿದರು, ತಾಲೂಕು ಪಂಚಾಯಿತಿ ಇಒ ಕೆ.ಹೊಂಗಯ್ಯ, ಕಸಾಪ ಜಿಲ್ಲಾ ಉಪಾಧ್ಯಕ್ಷ ಎಸ್.ಜಯರಾಂ, ಕಸಾಪ ಕಾರ್ಯದರ್ಶಿ ಟಿ.ಲೋಕೇಶ್, ಉಪಾಧ್ಯಕ್ಷ ಸಿ.ಎಸ್.ಮಹೇಶ್, ಕೆ.ನಂಜುಂಡಸ್ವಾಮಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-38-1139279054

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.