ಹುಣಸೂರು: ಸಾರ್ವಜನಿಕರಿಗೆ ಸರ್ಕಾರ ಚಿಕಿತ್ಸೆ ನೀಡಿ ರೋಗಮುಕ್ತರನ್ನಾಗಿಸುವಲ್ಲಿ ದಾಖಲೆ ಸೃಷ್ಟಿಸಿದ್ದರೂ ರೋಗಬಾಧೆಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ ಎಂದು ಗ್ರಾಮ ಸಂಸ್ಥೆಯ ಕಾರ್ಯನಿರ್ವಹಣ ನಿರ್ದೇಶಕ ಬಸವರಾಜ್ ಆರ್. ಶ್ರೇಷ್ಠ ಹೇಳಿದರು.

‘ಗ್ರಾಮ್’ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ‘ಸ್ವಾಸ್ಥ್ಯ ಸ್ವರಾಜ್ ನಮ್ಮ ಆರೋಗ್ಯ ನಮ್ಮ ಕ್ರಿಯಾ ಯೋಜನೆ’ ಅಭಿಯಾನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರದ ಯೋಜನೆಗಳನ್ನು ಸಮುದಾಯಕ್ಕೆ ತಲುಪಿಸುವ ಜವಾಬ್ದಾರಿ ಸಂಘ ಸಂಸ್ಥೆಗಳ ಹೆಗಲಿಗಿದ್ದು, ಆ ದೃಷ್ಟಿಯಿಂದ ದೇಶದಲ್ಲಿ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಕೇಂದ್ರ ಸರ್ಕಾರ ಆಯುಷ್ಮಾನ್ ಆರೋಗ್ಯ ಕೇಂದ್ರಗಳನ್ನು ಬಲವರ್ಧನೆಗೊಳಿಸಿ ‘ಆರೋಗ್ಯ ಗ್ರಾಮ’ವನ್ನಾಗಿಸುವ ಉದ್ದೇಶ ಹೊಂದಿದೆ. ದೇಶದಲ್ಲಿ ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ ಇದರ ಯಶಸ್ಸು ಮತ್ತು ಸಾಧಕ– ಬಾಧಕಗಳನ್ನು ಗಮನಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿದ ಬಳಿಕ ಯೋಜನೆ ರಾಷ್ಟ್ರದಾದ್ಯಂತ ಅನುಷ್ಠಾನಗೊಳ್ಳಲಿದೆ’ ಎಂದು ಹೇಳಿದರು.

‘ಸ್ವಾಸ್ಥ್ಯ ಸ್ವರಾಜ್ ಯೋಜನೆಯಲ್ಲಿ ಸ್ಥಳಿಯ ಗ್ರಾಮ ಪಂಚಾಯಿತಿ ಹಂತದಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಒಳಗೊಂಡಂತೆ ಪಂಚಾಯತ್ ರಾಜ್ ಅಡಿಯಲ್ಲಿ ಜನಾರೋಗ್ಯ ಸಮಿತಿ ರಚಿಸಿ ಈ ಸಮಿತಿ ಪದಾಧಿಕಾರಿಗಳು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆರೋಗ್ಯ ಸುಧಾರಿಸುವ ದಿಕ್ಕಿನಲ್ಲಿ ಜನರೊಂದಿಗೆ ಕೊಂಡಿಯಾಗಿ ಜಾಗೃತಿ ಮೂಡಿಸಿ ಆರೋಗ್ಯ ಗ್ರಾಮವನ್ನಾಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ’ ಎಂದರು.

ಡಿಜಿಟಲ್ ಜಾಹೀರಾತು: ಹುಣಸೂರು ತಾಲ್ಲೂಕಿನ 41 ಪಂಚಾಯಿತಿಗಳ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರು ಹೆಚ್ಚಿನ ಆಕರ್ಷಣೆಗೆ ಒಳಗಾಗಿರುವ ಡಿಜಿಟಲ್ ಮಾಧ್ಯಮದಲ್ಲಿ ಆರೋಗ್ಯ ಸಂಬಂಧಿಸಿದ ಜಾಹೀರಾತು ಗಳನ್ನು ಅಳವಡಿಸಲಾಗುವುದು’ ಎಂದು ಪಂಚಾಯತ್ ರಾಜ್ ಇಲಾಖೆಯ ಉಪ ನಿರ್ದೇಶಕ ಕೃಷ್ಣಕುಮಾರ್ ಹೇಳಿದರು.

ವಿಸ್ತರಣೆ:‘ಸ್ವಾಸ್ಥ್ಯ ಸ್ವರಾಜ್ ಯೋಜನೆ ಶ್ರೀಸಾಮಾನ್ಯರಿಗೆ ತಲುಪಿಸುವಲ್ಲಿ ಪಂಚಾಯತ್ ರಾಜ್ ಪ್ರಮುಖ ಪಾತ್ರ ನಿರ್ವಹಿಸಬೇಕಿದ್ದು, ಸ್ಥಳೀಯ ಸಂಘ– ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರು ಸಕರಾತ್ಮಕವಾಗಿ ಸ್ಪಂದಿಸಿ’ ಎಂದರು.

ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ, ಆರ್ಥಿಕಾಭಿವೃದ್ಧಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಆರೋಗ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ವಿಪರ್ಯಾಸ. ಭಾರತೀಯ ಸರಾಸರಿ ಅಂಶಕ್ಕಿಂತಲೂ ಕಡಿಮೆ ಇದೆ’ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ಮಾತನಾಡಿ, ‘ಸ್ವಾಸ್ಥ್ಯ ಸ್ವರಾಜ್ ಕ್ರಿಯಾ ಯೋಜನೆ ಸಿದ್ದಪಡಿಸಿ ರಾಜ್ಯದಲ್ಲಿ ಮಾದರಿ ತಾಲ್ಲೂಕಾಗಿ ಹುಣಸೂರು ರಾಜ್ಯದಲ್ಲಿ ಆಯ್ಕೆಗೊಂಡಿದೆ. ಕ್ಷೇತ್ರದ 44 ಆಯುಷ್ಮಾನ್ ಆರೋಗ್ಯ ಕೇಂದ್ರ ಸೇರಿದಂತೆ 210 ಆರೋಗ್ಯ ಉಪಕೇಂದ್ರಗಳಲ್ಲಿ ಈ ಯೋಜನೆ ಅನುಷ್ಟಾನಗೊಳಿಸಿ ಕಾರ್ಯಾಚರಣೆ ತರಲಾಗುತ್ತಿದೆ’ ಎಂದರು.

‘ಆರೋಗ್ಯ ಗ್ರಾಮ ಸೃಷ್ಠಿಸಲು ಕೇಂದ್ರ ಸರ್ಕಾರ ಸ್ವಾಸ್ಥ್ಯ ಸ್ವರಾಜ್ ಎಂಬ ಯೋಜನೆಗೆ ಒತ್ತು ನೀಡಿ ಪ್ರತಿಯೊಬ್ಬ ನಾಗರಿಕರೂ ಆರೋಗ್ಯವಂತರಾಗಿರಬೇಕು ಎಂಬ ಪರಿಕಲ್ಪನೆಯಲ್ಲಿ ಈ ಯೋಜನೆ ರೂಪುಗೊಂಡಿದೆ’ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದರ್ಶನ್, ತಾಲ್ಲೂಕು ಪಂಚಾಯಿತಿ ಇಒ ಹೊಂಗಯ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆ ಹರೀಶ್ ಇದ್ದರು. ಗ್ರಾಮ್ ಸಂಸ್ಥೆಯ ಮಲ್ಲಿಕಾರ್ಜುನ್ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-38-574948886

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.