ಹುಣಸೂರು: ‘ಕಾಲೇಜು ಹಂತದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸುವುದರಿಂದ ದೇಶದ ಗ್ರಾಮೀಣ ಜನ ಜೀವನ ಮತ್ತು ಪ್ರದೇಶ ಸಮಸ್ಯೆ ಕುರಿತು ಅರಿಯಲು ಸಹಕಾರವಾಗಲಿದೆ’ ಎಂದು ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದ ಮುಖಂಡ ಕೂಸಪ್ಪ ಹೇಳಿದರು.

ಗ್ರಾಮದಲ್ಲಿ ಸರ್ಕಾರಿ ಮಹಿಳಾ ಕಾಲೇಜು ವತಿಯಿಂದ ಏ.6ರವರೆಗೆ ಹಮ್ಮಿಕೊಂಡಿರುವ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ‘ಯೂತ್ ಫಾರ್ ಮೈ ಭಾರತ್ ಎಂಬ ಘೋಷವಾಕ್ಯದಲ್ಲಿ ಈ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ನಡೆಸಲಾಗುತ್ತಿದೆ’ ಎಂದರು.

‘ಯುವ ಸಮುದಾಯದ ಸಹಭಾಗಿತ್ವದಿಂದ ಸಮಗ್ರ ಅಭಿವೃದ್ಧಿ ಭಾರತ ನಿರ್ಮಾಣಕ್ಕೆ ಸಹಕಾರವಾಗಲಿದೆ. ಯುವಶಕ್ತಿ ಸಂಘಟಿತರಾಗಿ ಸಮಸ್ಯೆ, ಅಭಿವೃದ್ಧಿ ಬಗ್ಗೆ ಚರ್ಚಿಸಿ ಯೋಜನೆ ರೂಪಿಸುವ ಮನಸ್ಥಿತಿ ಹೊಂದಬೇಕು’ ಎಂದರು.

ಕಾಲೇಜು ಪ್ರಾಂಶುಪಾಲ ಎಸ್.ಮಂಜು, ಶಿಬಿರದ ಕಾರ್ಯಕ್ರಮ ಅಧಿಕಾರಿ ಪ್ರಸನ್ನ ಕೆ.ಪಿ, ಸಂಯೋಜನಾಧಿಕಾರಿ ಸುರೇಶ್ ಎಂ.ಬಿ. ಪ್ರತಾಪ್ ಲಿಂಗಯ್ಯ, ಸಬೀರಾಫಿರ್ಧೋಸ್, ಎಂ.ಸಿ.ಲಕ್ಷ್ಮಯ್ಯ, ಬನ್ನಿಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಪವಿತ್ರಾ, ಗ್ರಾಮದ ಕೆಂಗಯ್ಯ, ರಾಮಚಂದ್ರನಾಯಕ, ತಮ್ಮೇಗೌಡ, ನಿಂಗರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-38-79910650

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.