ಹುಣಸೂರು: ‘ಆದಿವಾಸಿ ಸಮುದಾಯದ ಸಮಗ್ರ ಅಭಿವೃದ್ಧಿ, ಮೂಲಭೂತ ಹಕ್ಕುಗಳನ್ನು ಪಡೆಯುವಲ್ಲಿ ಹಾಗೂ ಜಾಗೃತಿ ಮೂಡಿಸುವಲ್ಲಿ ಡೀಡ್ ಸಂಸ್ಥೆಯ ಸಂಸ್ಥಾಪಕ ಜೆರ್ರಿ ಫೈಸ್ ಅವರ ಕೊಡುಗೆ ಅವಿಸ್ಮರಣಿಯ’ ಎಂದು ಕೊಳವಿಗೆ ಹಾಡಿಯ ಸಣ್ಣಯ್ಯ ಹೇಳಿದರು.

ತಾಲ್ಲೂಕಿನ ಹನಗೋಡಿನಲ್ಲಿ ಆದಿವಾಸಿ ಗಿರಿಜನರು ಭಾನುವಾರ ಹಮ್ಮಿಕೊಂಡಿದ್ದ ಡಾ. ಜೆರ್ರಿ ಫೈಸ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

‘1972ರಲ್ಲಿ ಅರಣ್ಯ ಸಂರಕ್ಷಣೆ ಹೆಸರಿನಲ್ಲಿ ಬುಡಕಟ್ಟು ಜನರನ್ನು ಕಾಡಿನಿಂದ ಹೊರ ಹಾಕಿದಾಗ ಅರಣ್ಯ ಇಲಾಖೆಯ ದೌರ್ಜನ್ಯದಿಂದ ಗಿರಿಜನರನ್ನು ಪಾರು ಮಾಡುವ ನಿಟ್ಟಿನಲ್ಲಿ ಆತ್ಮಸ್ಥೈರ್ಯ ತುಂಬಿ ಅವರ ಮೂಲಭೂತ ಹಕ್ಕುಗಳಿಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು’ ಎಂದರು.

ದಾಸನಪುರ ಹಾಡಿಯ ನಿವಾಸಿ ಬಸವಯ್ಯ ಮಾತನಾಡಿ, ‘ಫೈಸ್ ಅವರು ಮೊದಲಿಗೆ ಕೆರೆ ಹಾಡಿಯಲ್ಲಿ ಆದಿವಾಸಿಗಳಿಂದಲೇ ಇಟ್ಟಿಗೆಯನ್ನು ತಯಾರಿಸಿ ಮನೆ ನಿರ್ಮಿಸುವ ಕೌಶಲವನ್ನು ತಿಳಿಸಿದ್ದರು. ಬಳಿಕ ಗಿರಿಜನ ಮಕ್ಕಳಿಗೆ ರಾತ್ರಿ ಶಾಲೆ ಆರಂಭಿಸಿ ಅಕ್ಷರ ಕಲಿಕೆ, ಜೀತ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಿ ಸ್ವಂತ ಬದುಕು ಕಟ್ಟಿಕೊಳ್ಳುವ ಬಗ್ಗೆ ಅರಿವು ಮೂಡಿಸಿದ್ದರು’ ಎಂದು ಸ್ಮರಿಸಿದರು.

ಮುಖಂಡ ಅಯ್ಯನಕೆರೆ ಹಾಡಿ ಶಿವಣ್ಣ ಮಾತನಾಡಿ, ‘ಬುಡಕಟ್ಟು ಜನರ ಘನತೆ, ಹಿರಿಮೆ, ಸ್ವಾಭಿಮಾನ ಹಾಗೂ ಜನರಲ್ಲಿ ಶಕ್ತಿ ತುಂಬಿಸುವ ದಿಕ್ಕಿನಲ್ಲಿ ಆಂದೋಲನ ರೂಪಿಸಿದ ವ್ಯಕ್ತಿ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಹಲವು ಕೌಶಲ ತರಬೇತಿ ಕೊಡಿಸಿದ್ದರು’ ಎಂದರು.

ಕೂಡ್ಲೂರು ಚರ್ಚ್ ಫಾದರ್ ಸ್ಟ್ಯಾನ್ಲಿ ಡಿ ಆಮ್ಲೆಡ್, ಡೀಡ್ ಸಂಸ್ಥೆಯ ನಿವೃತ್ತ ಕಾರ್ಯಕರ್ತೆ ಕಮಲಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡೀಡ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ ಗಂಗಮ್ಮ, ಅಚ್ಚುತರಾವ್, ಪೆಸಿಲ್ಲಾ, ಚಂದ್ರಮ್ಮ, ನಿಂಗರಾಜಪ್ಪ, ಯೋಗೇಶ್, ಜಗದೀಶ್, ಬಿ.ಎಂ. ಇಂಡಿಯಾ ಸಂಸ್ಥೆಯ ಕಾರ್ಯದರ್ಶಿ ಬಸವರಾಜು ಮಾತನಾಡಿದರು.

ಸಭೆಯಲ್ಲಿ ಗಿಡಮೂಲಿಕೆ ತಜ್ಞೆ ಮಾಸ್ತಮ್ಮ, ಚಂದನಗಿರಿ ಹಾಡಿಯ ಮಾದಯ್ಯ, ಹೆಮ್ಮಿಗೆ ಹಾಡಿ ಶಂಕರಯ್ಯ, ಮಣಿ, ಪೂವಯ್ಯ, ಕಾಂತರಾಜು, ಜೋಸೆಫ್ ಮರಿ ಸೇರಿದಂತೆ ವಿವಿಧ ಹಾಡಿಗಳ ಗಿರಿಜನರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-38-1423732854

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.