ಹೂವಿನಹಡಗಲಿ: ಕೃಷಿ ಪದವಿ ಕೋರ್ಸ್ಗಳ ಪ್ರಾಯೋಗಿಕ ಪರೀಕ್ಷೆ ಮೇ 10 ರಂದು ನಡೆಯಲಿದ್ದು ಪ್ರವೇಶ ಪತ್ರ ಬಾರದೇ ಪಟ್ಟಣದ ವಿದ್ಯಾರ್ಥಿಯೊಬ್ಬ ತನ್ನದಲ್ಲದ ತಪ್ಪಿಗಾಗಿ ಪರದಾಡುವಂತಾಗಿದೆ.

ಪಟ್ಟಣದ ವಿದ್ಯಾರ್ಥಿ ಪಿ.ಎಂ. ಶ್ರೇಯಸ್ ಅವರನ್ನು ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯ ‘ಪರೀಕ್ಷೆಗೆ ಅರ್ಹ’ ಎಂದು ಪರಿಗಣಿಸಿದ್ದರೂ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪಟ್ಟಿಯಲ್ಲಿ ‘ಅನರ್ಹ’ ಎಂದು ಪ್ರಕಟಿಸಿದೆ. ಹೀಗಾಗಿ ಪ್ರವೇಶ ಪತ್ರ ಲಭ್ಯವಾಗದೇ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತನಾಗಿದ್ದಾನೆ.

‘ಅರ್ಜಿ ಸಲ್ಲಿಕೆ ವೇಳೆ ಕೃಷಿಕ ಪ್ರಮಾಣ ಪತ್ರ ಸಲ್ಲಿಸದ ಕಾರಣ ಮೊದಲ ಸುತ್ತಿನ ದಾಖಲೆ ಪರೀಶೀಲನೆ ವೇಳೆ ವಿದ್ಯಾರ್ಥಿಯನ್ನು ಅನರ್ಹಗೊಳಿಸಲಾಗಿತ್ತು. ಖುದ್ದಾಗಿ ದಾಖಲೆ ಸಲ್ಲಿಸುವಂತೆ ಸಂದೇಶ ಬಂದ ನಂತರ ಮಹಾವಿದ್ಯಾಲಯಕ್ಕೆ ದಾಖಲೆ ಸಲ್ಲಿಸಲಾಗಿದೆ. ಎಲ್ಲ ದಾಖಲೆಗಳು ಸರಿಯಾಗಿದ್ದು, ವಿದ್ಯಾರ್ಥಿ ಅರ್ಹನಿದ್ದಾನೆ ಎಂದು ಮಹಾವಿದ್ಯಾಲಯ ಪ್ರಾಚಾರ್ಯರು ವಿಶ್ವ ವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ.

‘ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆ ವಿಶ್ವವಿದ್ಯಾಲಯಕ್ಕೆ ಇ-ಮೇಲ್ ಮಾಡಿದ್ದೇವೆ. ಪ್ರವೇಶ ಪತ್ರ ಕೊಡಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯ ಪ್ರಾಚಾರ್ಯ ಪ್ರಭುಲಿಂಗ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-25-570953696

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.