ವಿದ್ಯಾರ್ಥಿ ವೇತನ: ಐಇಟಿ ಇಂಡಿಯಾ ಸ್ಕಾಲರ್‌ಶಿಪ್ ಅವಾರ್ಡ್ 2021

ಐಇಟಿ ಇಂಡಿಯಾ ಸ್ಕಾಲರ್‌ಶಿಪ್ ಅವಾರ್ಡ್ 2021
ವಿವರ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ದಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಹತೆ: 1, 2, 3 ಮತ್ತು 4ನೇ ವರ್ಷದ ಎಂಜಿನಿಯರಿಂಗ್ ಓದುತ್ತಿರುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಲ್ಲಾ ಸೆಮಿಸ್ಟರ್‌ಗಳಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಪಡೆದಿರಬೇಕು. ಪಿಯುಸಿಯಲ್ಲೂ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.
ಆರ್ಥಿಕ ಸಹಾಯ: ₹ 5 ಲಕ್ಷ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 15 ಆಗಸ್ಟ್, 2021
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಅರ್ಜಿಗಳು ಮಾತ್ರ
ಹೆಚ್ಚಿನ ಮಾಹಿತಿಗೆ: www.b4s.in/praja/IET1
***
ಐಎಸ್‌ಇಸಿ ಬೆಂಗಳೂರು ಪೋಸ್ಟ್ ಡಾಕ್ಟರಲ್ ರಿಸರ್ಚ್ ಪ್ರೋಗ್ರಾಮ್ 2021
ವಿವರ: ಪಿಎಚ್‌ಡಿ ಮುಗಿಸಿರುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಫೆಲೋಶಿಪ್ ಅನ್ನು ಗರಿಷ್ಠ 5 ವರ್ಷಗಳವರೆಗೆ ನೀಡಲಾಗುತ್ತದೆ.
ಅರ್ಹತೆ: ಕಳೆದ 10 ವರ್ಷಗಳಲ್ಲಿ ಪಿಎಚ್‌ಡಿ ಮುಗಿಸಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಕನಿಷ್ಠ ಎರಡು ಬರಹಗಳು ಪ್ರಕಟವಾಗಿರುವುದು ಕಡ್ಡಾಯ.
ಆರ್ಥಿಕ ಸಹಾಯ: ಪ್ರಮಾಣ ಪತ್ರ (Certificate of completion of the PDR Programme)
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 31 ಜುಲೈ, 2021
ಅರ್ಜಿ ಸಲ್ಲಿಕೆ ವಿಧಾನ: ಅಂಚೆ ಮೂಲಕ
ಹೆಚ್ಚಿನ ಮಾಹಿತಿಗೆ: www.b4s.in/praja/ISEC1
ಕೃಪೆ:buddy4study.com
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.