ಇಳಕಲ್: ‘ವಿದ್ಯಾರ್ಥಿಗಳಿಗೆ ಸಾಧಿಸುವ ಛಲ, ಸತತ ಪ್ರಯತ್ನ ಬಹಳ ಮುಖ್ಯ’ ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕಾಲೇಜು ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಎಸ್.ಬಿ.ಚಳಗೇರಿ ಹೇಳಿದರು.

ಅವರು ನಗರದ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ನೀವು ಓದಿ ವಿದ್ಯಾವಂತರಾಗಿ, ಉತ್ತಮ ನಾಗರಿಕರಾಗಿ ಬೆಳವಣಿಗೆಯಾಗಬೇಕು ಎನ್ನುವುದು ನಿಮ್ಮ ಪಾಲಕರ, ಸರ್ಕಾರದ ಆಶಯವಾಗಿದೆ. ಹಾಗಾಗಿ ಪಾಲಕರು ತಮ್ಮ ಕಷ್ಟಗಳ ನಡುವೆ ನಿಮ್ಮನ್ನು ಓದಿಸುತ್ತಿದ್ದಾರೆ. ಸರ್ಕಾರ ಸಾಕಷ್ಟು ಸೌಲಭ್ಯ ನೀಡಿದೆ. ಹಾಗಾಗಿ ಚೆನ್ನಾಗಿ ಓದಿ, ಇತರ ವಿದ್ಯಾರ್ಥಿಗಳ ಓದಿಗೆ ನೆರವಾಗಿ ಸಮಾಜದ ಋಣ ತೀರಿಸಬೇಕು’ ಎಂದರು.

ವಿದ್ಯಾರ್ಥಿ ನಿಲಯದ ಅಧೀಕ್ಷಕ ಸಂಗನಗೌಡ ಎನ್. ನಾಡಗೌಡ ಮಾತನಾಡಿ, ‘ನಮ್ಮ ಈ ವಸತಿ ನಿಲಯದಲ್ಲಿದ್ದು ಓದಿದ ಆರು ವಿದ್ಯಾರ್ಥಿಗಳು ಈಚೆಗೆ ಅಗ್ನಿವೀರರಾಗಿ ದೇಶ ಸೇವೆಗೆ ನೇಮಕಗೊಂಡಿದ್ದಾರೆ. ವಿವಿಧ ಕಾಲೇಜುಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಿಸ್ತು, ಸಮರ್ಪಣೆ ಇದ್ದಲ್ಲಿ ಯಶಸ್ಸು ಹಿಂಬಾಲಿಸುತ್ತದೆ. ಇದನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವ ಪ್ರಯತ್ನ ಮಾಡುತ್ತೇವೆ’ ಎಂದರು.

‘ಅಗ್ನಿವೀರ’ನಾಗಿ ಸೈನ್ಯಕ್ಕೆ ನೇಮಕಗೊಂಡಿರುವ ಗುರುರಾಜ ನಾಗೂರ ಅವರನ್ನು ಸನ್ಮಾನಿಸಲಾಯಿತು.

ಶ್ರೀಧರ ಕುಂಬಾರ ಸ್ವಾಗತಿಸಿದರು. ಶಿವಾನಂದ ವಂದಿಸಿದರು. ಶರಣಬಸು ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-19-1337645768

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.