ಗ್ರಾಮೀಣ ಪ್ರದೇಶದಿಂದ ನಗರದವರೆಗೆ ಯಾವುದೇ ವಿದ್ಯಾರ್ಥಿಗೆ ಭವಿಷ್ಯದಲ್ಲಿ ನೀನು ಏನಾಗಬೇಕು? ಎಂಬ ಪ್ರಶ್ನೆಯನ್ನು ಮುಂದಿಟ್ಟರೆ, ಬರುವ ಉತ್ತರ ಡಾಕ್ಟರ್ ಅಥವಾ ಎಂಜಿನಿಯರ್. ಈ ಮನಸ್ಥಿತಿ ಇಂದಿಗೂ ಬದಲಾಗಿಲ್ಲ. ಹಾಗಂತ ಈ ಆಸೆ ತಪ್ಪು ಅಂತಲೂ ಅಲ್ಲ. ಆದರೆ, ಈ ಕ್ಷೇತ್ರದಲ್ಲಿ ಅವಕಾಶಗಳು ಸೀಮಿತವಾಗಿರುವುದರಿಂದ ಪ್ರತಿಯೊಬ್ಬರಿಗೂ ವೈದ್ಯರೋ ಅಥವಾ ಎಂಜಿನಿಯರ್ ಆಗಲು ಸಾಧ್ಯವಿಲ್ಲ ಎಂಬುದು ವಾಸ್ತವ. ಆದರೆ ಈ ಎರಡು ಕೋರ್ಸ್ಗಳನ್ನು ಮಾಡಿದ ಮಾತ್ರಕ್ಕೆ ಕೆಲಸ ಸಿಗುವುದೇ ಎಂಬ ವಾದಕ್ಕೂ ಉತ್ತರ ನೀಡುವವರು ವಿರಳ.

ಪ್ರಸ್ತುತ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನೇಕ ಕೋರ್ಸ್ಗಳು ಆರಂಭವಾಗಿವೆ.

ಪಿಯುಸಿ ನಂತರ ಹೆಚ್ಚು ಬೇಡಿಕೆಯಿರುವ ವೃತ್ತಿಪರ ಕೋರ್ಸ್ಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್, ಫಾರ್ಮಸಿ ತಂತ್ರಜ್ಞಾನ, ಪ್ಯಾರಾ ಮೆಡಿಕಲ್, ಆಹಾರ ತಂತ್ರಜ್ಞಾನ, ಡೇಟಾ ಅನಾಲಿಟಿಕ್ಸ್, ಟರ್ನರ್, ಎಲೆಕ್ಟ್ರಿಷಿಯನ್, ಫಿಟ್ಟರ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ನಂತಹ ಐಟಿಐ ಕೋರ್ಸ್ಗಳು ಇವೆ.

ಇದರ ಹೊರತಾಗಿ, ಫಾರ್ಮಸಿ ತಂತ್ರಜ್ಞಾನ, ಲ್ಯಾಬ್ ಟೆಕ್ನೀಷಿಯನ್ನಂತಹ ಕೋರ್ಸ್ಗಳೂ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಆಯ್ಕೆಗಳಾಗಿವೆ. ಆರೋಗ್ಯ ಕ್ಷೇತ್ರದ ಪ್ರಮುಖ ಕೋರ್ಸ್ಗಳ ಮಾಹಿತಿ ಹೀಗಿದೆ.

ಬ್ಯಾಚುಲರ್ ಆಫ್ ಫಿಸಿಯೋಥೆರಪಿ (BPT-Bachelor of Physiotherapy) ಎನ್ನುವುದು 4.5 ವರ್ಷಗಳ ಅವಧಿಯ ಪದವಿಪೂರ್ವ ವೈದ್ಯಕೀಯ ಕೋರ್ಸ್ ಆಗಿದೆ.

ಕೃತಕ ಅಂಗಗಳು ಮತ್ತು ಬೆಂಬಲ ಸಾಧನಗಳ ತಂತ್ರಜ್ಞಾನ (Prosthetic and Orthotic Engineering): ಇದೊಂದು ದೈಹಿಕ ನ್ಯೂನತೆ ಇರುವವರಿಗೆ ಕೃತಕ ಅಂಗಗಳನ್ನು ಮತ್ತು ಆರ್ಥೋಟಿಕ್ ಸಾಧನಗಳನ್ನು ವಿನ್ಯಾಸಗೊಳಿಸಿ, ತಯಾರಿಸುವ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ವಿಭಾಗವಾಗಿದೆ.

ಬಿಎಸ್ಸಿ ಆಡಿಯಾಲಜಿ ಮತ್ತು ಸ್ಪೀಚ್ ಥೆರಪಿ: ಇದು ಧ್ವನಿ, ಮಾತು, ಭಾಷೆ ಮತ್ತು ಶ್ರವಣ ದೋಷದ ಸಮಸ್ಯೆಗಳನ್ನು ಪತ್ತೆಹಚ್ಚಿ, ಅದಕ್ಕೆ ಚಿಕಿತ್ಸೆ ನೀಡುವ ವೈದ್ಯಕೀಯ ಕೋರ್ಸ್.

ಬಿಎಸ್ಸಿ ನೇತ್ರ ತಂತ್ರಜ್ಞಾನ (BSc Ophthalmic Technology): ಇದು ಕಣ್ಣಿನ ಆರೋಗ್ಯ ರಕ್ಷಣೆ ಮತ್ತು ದೃಷ್ಟಿ ತಂತ್ರಜ್ಞಾನದ ಕುರಿತು ವಿಶೇಷ ತರಬೇತಿ ನೀಡುವ 3 ರಿಂದ 4 ವರ್ಷಗಳ ಪದವಿಪೂರ್ವ ಅರೆವೈದ್ಯಕೀಯ ಕೋರ್ಸ್.

ಮಾನಸಿಕ ಪುನರ್ವಸತಿ ಪದವಿ ( Bachelor Mental Rehabilitation) BMR: ಇದು ವಿಶೇಷ ಚೇತನರು ಮತ್ತು ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಿಗೆ ನೆರವಾಗುವ ಪದವಿ ಕೋರ್ಸ್.

ಮಾನವ ಜೀವಶಾಸ್ತ್ರದಲ್ಲಿ ವಿಜ್ಞಾನ ಪದವಿ (BSc Human Biology): ಇದು ಮಾನವರ ದೇಹದ ರಚನೆ, ಕಾರ್ಯಗಳು, ಮತ್ತು ವಿಕಾಸವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಪದವಿ.

ವೈದ್ಯಕೀಯ ವಿಕಿರಣಶಾಸ್ತ್ರದಲ್ಲಿ ಬಿಎಸ್ಸಿ ಪದವಿ (BSc Radiography): ಇದು ಮೂರು ವರ್ಷಗಳ ವೈದ್ಯಕೀಯ ಪದವಿ ಕೋರ್ಸ್. ಎಕ್ಸ್-ರೇ, ಅಲ್ಟ್ರಾಸೌಂಡ್ ಮತ್ತು ಸಿ.ಟಿ ಸ್ಕ್ಯಾನ್ನಂತಹ ಅತ್ಯಾಧುನಿಕ ವೈದ್ಯಕೀಯ ಯಂತ್ರಗಳನ್ನು ಸುರಕ್ಷಿತವಾಗಿ ನಿರ್ವಹಿಸುವುದರ ತರಬೇತಿ ನೀಡಲಾಗುತ್ತದೆ.

ಬಿ.ಎಸ್ಸಿ. ರೇಡಿಯೊಥೆರಪಿ: ಕ್ಯಾನ್ಸರ್ ಮುಂತಾದ ಗಂಭೀರ ಸ್ವರೂಪದ ಕಾಯಿಲೆಗಳಿಗೆ ವಿಕಿರಣ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡುವ 4 ವರ್ಷಗಳ ವೈದ್ಯಕೀಯ ಪದವಿ ಕೋರ್ಸ್. ಇದು ರೋಗಿಗಳ ಚಿಕಿತ್ಸೆಯಲ್ಲಿ ವೈದ್ಯರಿಗೆ ಸಹಾಯ ಮಾಡುವ ಅತ್ಯಂತ ಮಹತ್ವದ ತಾಂತ್ರಿಕ ಕೋರ್ಸ್.

ಬಿಎಸ್ಸಿ ನ್ಯೂಕ್ಲಿಯರ್ ಮೆಡಿಸಿನ್: ವಿಕಿರಣಶೀಲ ವಸ್ತುಗಳನ್ನು ಬಳಸಿ ರೋಗಗಳನ್ನು ಪತ್ತೆ ಹಚ್ಚುವ ಮತ್ತು ಗುಣಪಡಿಸುವ ವಿಜ್ಞಾನದ ಪದವಿ ಕೋರ್ಸ್. ಇದು ವೈದ್ಯಕೀಯ ವಿಜ್ಞಾನದ ಒಂದು ಶಾಖೆಯಾಗಿದ್ದು, ಕ್ಯಾನ್ಸರ್ ಅಥವಾ ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆಹಚ್ಚಲು ಸುಧಾರಿತ ಸ್ಕ್ಯಾನಿಂಗ್ ಯಂತ್ರಗಳನ್ನು ಮತ್ತು ವಿಕಿರಣಶೀಲ ಐಸೊಟೋಪ್ಗಳನ್ನು ಹೇಗೆ ಬಳಸಬೇಕೆಂದು ಕಲಿಸಲಾಗುತ್ತೆ.

ಬಿ.ಎಸ್ಸಿ ಆಪರೇಷನ್ ಥಿಯೇಟರ್: ಇದು ಆಪರೇಶನ್ ಕೊಠಡಿಯ ನಿರ್ವಹಣಾ ತಂತ್ರಜ್ಞಾನದ ಪದವಿಯಾಗಿದೆ. ವೈದ್ಯಕೀಯ ವಿಭಾಗದ ಒಂದು ಕೋರ್ಸ್ ಆಗಿದ್ದು, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರಿಗೆ ಸಹಾಯ ಮಾಡಲು ಮತ್ತು ಆಪರೇಷನ್ ಥಿಯೇಟರ್ನ ಸಂಪೂರ್ಣ ಸಾಧನಗಳನ್ನು ನಿಭಾಯಿಸಲು ತರಬೇತಿ ನೀಡುವುದಾಗಿದೆ.

ಇದರ ಜೊತೆಗೆ, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಪದವಿ (BSc Medical Laboratory Technology– BMLT), ಬಿ.ಎಸ್ಸಿ ಅಲೈಡ್ ಹೆಲ್ತ್ ಸರ್ವಿಸಸ್, ಬಿಎಸ್ಸಿ ಇನ್ ಬಯೋಮೆಡಿಕಲ್ ಸೈನ್ಸ್, ಬ್ಯಾಚುಲರ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಗ್ ಸೈನ್ಸ್, ಡೆಂಟಲ್ ಹೈಜಿನಿಸ್ಟ್, ಡೆಂಟಲ್ ಮೆಕಾನಿಕ್ಸ್ ಸೇರಿದಂತೆ ಇನ್ನೂ ಅನೇಕ ವೃತ್ತಿ ಪರ ವೈದ್ಯಕೀಯ ಕೋರ್ಸ್ಗಳನ್ನು ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.