ಇಂಡಿ: ಆರೋಗ್ಯವೇ ಸಂಪತ್ತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಉತ್ತಮ ಆರೋಗ್ಯವಿಲ್ಲದೇ ನಾವು ಜೀವನವನ್ನು ಆನಂದಿಸಲು ಅಥವಾ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲಎಂದು ಸಹಾಯಕ ಪ್ರಾಧ್ಯಾಪಕ ಜಯಪ್ರಸಾದ.ಡಿ ಹೇಳಿದರು.

ಅವರು ಬುಧವಾರ ಇಂಡಿ ನಗರದ ಜಿ.ಆರ್.ಗಾಂಧಿ ಕಲಾ, ವೈ.ಎ.ಪಾಟೀಲ ವಾಣಿಜ್ಯ ಹಾಗೂ ಎಂ.ಪಿ.ದೋಶಿ ವಿಜ್ಞಾನ ಮಹಾ ವಿದ್ಯಾಲಯದ ಸಭಾ ಭವನದಲ್ಲಿ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘ಇಂದಿನ ವೇಗದ ಜಗತ್ತಿನಲ್ಲಿ, ಜನರು ಕಾರ್ಯನಿರತ ವೇಳಾಪಟ್ಟಿ, ಒತ್ತಡ ಮತ್ತು ಅನಾರೋಗ್ಯಕರ ಅಭ್ಯಾಸಗಳಿಂದಾಗಿ ತಮ್ಮ ಆರೋಗ್ಯವನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಇದು ರೋಗಗಳು ಮತ್ತು ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ವಿಶ್ವ ಆರೋಗ್ಯ ದಿನವು ನಮ್ಮ ಆರೋಗ್ಯಕ್ಕೆ ನಾವು ಆದ್ಯತೆ ನೀಡಬೇಕು ಎಂದು ನೆನಪಿಸುತ್ತದೆ. ಇದು ಸಮತೋಲಿತ ಜೀವನಶೈಲಿ, ಸರಿಯಾದ ಪೋಷಣೆ, ವ್ಯಾಯಾಮ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಸರ್ಕಾರಗಳು ಮತ್ತು ಸಂಸ್ಥೆಗಳು ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವತ್ತ ಗಮನ ಹರಿಸಬೇಕು‘ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶ್ರೀಶೈಲ ಸಣ್ಣಕ್ಕಿ ಮಾತನಾಡಿ, ಆರೋಗ್ಯಕರ ಜೀವನದ ಅಗತ್ಯವನ್ನು ಅರ್ಥಮಾಡಿಕೊಳ್ಳಲು ನಾವು ಈ ದಿನವನ್ನು ಒಂದು ಕ್ಷಣವನ್ನಾಗಿ ಮಾಡಿಕೊಳ್ಳಬೇಕು. ಕೆಲಸ, ಆಹಾರ ಮತ್ತು ನಿದ್ರೆಗೆ ಒತ್ತು ನೀಡುವ ಮೂಲಕ ನಾವು ಆರೋಗ್ಯ ರಕ್ಷಣೆಯ ಮಹತ್ವವನ್ನು ಅರಿಯಬೇಕು ಎಂದರು.

ಪ್ರಾಧ್ಯಾಪಕ ವಿಶ್ವಾಸ ಕೋರವಾರ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಸುರೇಂದ್ರ ಕೆ. ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-26-564800336

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.