ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ನಾಗರೀಕ ಸೇವಾ ಪರೀಕ್ಷೆಯನ್ನು ಪೂರ್ಣಗೊಳಿಸುವುದು ಅಷ್ಟು ಸುಲಭದ ವಿಚಾರವಲ್ಲ. ಅನೇಕರು, ತಮ್ಮ ಬಾಲ್ಯದಿಂದಲೆ ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಕಂಡಿರುತ್ತಾರೆ. ಆದರೆ, ಅದರಲ್ಲಿ ಕೆಲವರು ಮಾತ್ರ ನಿರಂತರ ಪ್ರಯತ್ನದ ಫಲವಾಗಿ ಯಶಸ್ವಿಯಾಗುತ್ತಾರೆ.

ಭಾರತದ ಮೊದಲ ಐಎಎಸ್ ಅಧಿಕಾರಿ ಯಾರು ಎಂಬುದನ್ನು ನೋಡುವುದಾದರೆ, ಅವರೇ, ಸತ್ಯೇಂದ್ರನಾಥ ಟ್ಯಾಗೋರ್. ಭಾರತೀಯ ಐಸಿಎಸ್ (Indian Civil Service) ಅಧಿಕಾರಿ ಎಂದು ಪ್ರಸಿದ್ಧರಾಗಿದ್ದಾರೆ. ಇಂದಿನ ಐಎಎಸ್ ಹುದ್ದೆಗೆ ಸಮಾನವಾದ ಐಸಿಎಸ್ ಸೇವೆಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಯಾದ ಮೊದಲ ಭಾರತೀಯ. ಅವರು ರವೀಂದ್ರನಾಥ ಟ್ಯಾಗೋರ್ ಅವರ ಹಿರಿಯ ಸಹೋದರ ಕೂಡ.

1842ರ ಜೂನ್ 1ರಲ್ಲಿ ಕೋಲ್ಕತ್ತದಲ್ಲಿ ಜನಿಸಿದರು. ಅವರ ಟ್ಯಾಗೋರ್ ಕುಟುಂಬವು ಬಂಗಾಳದ ಪ್ರಸಿದ್ಧ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕುಟುಂಬವಾಗಿತ್ತು. ಸತ್ಯೇಂದ್ರನಾಥ ಅವರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಾರೆ.

1863ರಲ್ಲಿ ಅಂದರೆ ತಮ್ಮ 21ನೇ ವಯಸ್ಸಿನಲ್ಲಿ ಲಂಡನ್ನಲ್ಲಿ ನಡೆದ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1864ರಲ್ಲಿ ಸೇವೆಗೆ ಸೇರುತ್ತಾರೆ. ಸತ್ಯೇಂದ್ರನಾಥ ಟ್ಯಾಗೋರ್ ಅವರ ಸಾಧನೆಯು ಬಹಳ ವಿಶೇಷವಾಗಿತ್ತು. ಬ್ರಿಟೀಷರ ಕಾಲದಲ್ಲಿ ಭಾರತೀಯರಿಗೆ ಅತ್ಯಂತ ಕಠಿಣ ಪರೀಕ್ಷೆಯಾಗಿದ್ದ, ಐಸಿಎಸ್ನಲ್ಲಿ ಭಾರತೀಯರಿಗೆ ಅವಕಾಶಗಳಿರಲಿಲ್ಲ. ಬಹುತೇಕ ಐಸಿಎಸ್ ಪದವಿಗಳು ಬ್ರಿಟೀಷರಿಗೆ ಮಾತ್ರ ಮೀಸಲಾಗಿದ್ದವು.

ಸತ್ಯೇಂದ್ರನಾಥ ಟ್ಯಾಗೋರ್ ಅವರ ಸಾಧನೆಯು ಭಾರತೀಯರಲ್ಲಿ ದೊಡ್ಡ ಸ್ಫೂರ್ತಿ ನೀಡಿತು. ಅವರ ಬಳಿಕ ಅನೇಕ ಭಾರತೀಯರು ಐಸಿಎಸ್ ಪರೀಕ್ಷೆಗೆ ಸಿದ್ಧರಾಗಲು ಪ್ರೇರೇಪಿಸಿತು. ವೃತ್ತಿ ಜೀವನ ವಿವಿಧ ಜಿಲ್ಲೆಗಳಲ್ಲಿ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸತ್ಯೇಂದ್ರನಾಥ ಟ್ಯಾಗೋರ್ ಅವರ ಸಾಧನೆಯು ಬ್ರಿಟಿಷ್ ಕಾಲದಲ್ಲಿ ಭಾರತೀಯರ ಸಾಮರ್ಥ್ಯವನ್ನು ಪ್ರಪಂಚಕ್ಕೆ ತೋರಿಸಿತು. ಅವರು ಆಡಳಿತ, ಸಾಹಿತ್ಯ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಸಮತೋಲನ ಕಾಯ್ದುಕೊಂಡು, ಭಾರತೀಯ ನಾಗರಿಕ ಸೇವೆಯಲ್ಲಿ ರಾಷ್ಟ್ರೀಯ ಗೌರವವನ್ನು ಹೆಚ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.