ತಿಪಟೂರು: ‘ರಾಷ್ಟ್ರದ ಭದ್ರತೆಗೆ ಧಕ್ಕೆ ಉಂಟಾಗುವ ಸಂಭವ ಬಂದರೆ ನಾವೆಲ್ಲರೂ ಒಗ್ಗೂಡಿ ರಕ್ಷಣೆಗೆ ತೊಡಗಿಕೊಳ್ಳಬೇಕು’ ಎಂದು ಕ್ಯಾಪ್ಟನ್ ಬಿ.ಎಂ.ಹರಿಪ್ರಸಾದ್ ಹೇಳಿದರು.

ತಾಲ್ಲೂಕಿನ ಕಿಬ್ಬನಹಳ್ಳಿ ಕ್ರಾಸ್ ಬಳಿಯ ರಂಭಾಪುರಿ ಮಠದ ಆವರಣದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆಯ ಆರನೇ ದಿನದ ಕಾರ್ಯಕ್ರಮದಲ್ಲಿ ‘ದೇಶದ ರಕ್ಷಣೆಯಲ್ಲಿ ಯುವಕರ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡಿದರು.

‘ದೇಶದ ರಕ್ಷಣೆಯಲ್ಲಿ ಸೈನ್ಯಕ್ಕೆ ಎಷ್ಟು ಜವಾಬ್ದಾರಿ ಇರುತ್ತದೆಯೋ ಹಾಗೆಯೇ ಯುವಕರಿಗೆ ದೇಶದ ರಕ್ಷಣೆಯ ಜವಾಬ್ದಾರಿಯನ್ನು ಅರಿತು ನಡೆಯಬೇಕಾಗುತ್ತದೆ. ತಾವು ಬದಲಾದರೆ ದೇಶದ ಬದಲಾವಣೆ ಸಾಧ್ಯವಾಗುತ್ತದೆ’ ಎಂದರು.

ಸಂಪನ್ಮೂಲ ವ್ಯಕ್ತಿ ಡಾ.ವೆಂಕಟೇಶ್.ಎಲ್.ಎ ಮಾತನಾಡಿ, ‘ಯುವಕರು ಆಧುನಿಕ ಕೃಷಿಯನ್ನು ಹೊಸ ಹೊಸ ಅನ್ವೇಷಣೆ, ತಂತ್ರಜ್ಞಾನ, ಸಾಹಸಮಯ ಪ್ರವೃತ್ತಿ, ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತ ಕೃಷಿಯನ್ನು ಮಾದರಿ ಉದ್ಯಮವಾಗಿ ಪರಿವರ್ತಿಸಿಕೊಂಡು ಕೃಷಿಕರ ಬದುಕನ್ನು ಸುಧಾರಿಸಬೇಕು’ ಎಂದರು.

ಕಿರಣ್ ಸಿ.ಆರ್, ಮೋಹನಕುಮಾರ ಎಚ್.ಆರ್ ಮಾತನಾಡಿದರು. ವಿದ್ಯಾರ್ಥಿಗಳು ಕೆ.ಬಿ.ಕ್ರಾಸ್ನಲ್ಲಿ ನಡೆಯುವ ವಾರದ ಸಂತೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಶ್ರಮದಾನದಲ್ಲಿ ಪಾಲ್ಗೊಂಡರು.

ಪ್ರಾಂಶುಪಾಲ ಡಾ.ಶಶಿಕುಮಾರ್ ಎಚ್.ಸಿ, ಶಿಬಿರಾಧಿಕಾರಿ ತುಕಾರಾಮ.ವಿ, ಸ್ಮಿತಾ.ಎಚ್.ಎಸ್, ಜಾಯಿದಾಬಿ ಖಾನಬೋಗಿ, ವೇದಮೂರ್ತಿ, ಜ್ಯೋತಿ ಎಸ್., ಲಿಂಗರಾಜು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-17-1215164208

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.