ಹರಿಹರ: ‘ಆರ್ಥಿಕವಾಗಿ 6ನೇ ಸ್ಥಾನ ಹಾಗೂ ಖರೀದಿ ಸಾಮರ್ಥ್ಯದಲ್ಲಿ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಪ್ರತಿ ನಿಮಿಷಕ್ಕೆ 51 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವುದು ವಿಪರ್ಯಾಸ’ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಹಾಗೂ ಸಮಾಜ ನಿಕಾಯದ ಡೀನ್ ಎಚ್.ಡಿ. ಪ್ರಶಾಂತ್ ಕಳವಳ ವ್ಯಕ್ತಪಡಿಸಿದರು.

ನಗರದ ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಿಳಾ ಸಬಲೀಕರಣ: ಸಮಕಾಲೀನ ಸವಾಲುಗಳು ಮತ್ತು ಮುಂದಣ ಹಾದಿ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ನಿರ್ಭಯಾ ಪ್ರಕರಣದ ನಂತರ ಮಹಿಳಾ ಸಂರಕ್ಷಣಾ ಕಾನೂನುಗಳು ಬಲಗೊಂಡರೂ ದೌರ್ಜನ್ಯಗಳು ಕಡಿಮೆಯಾಗಿಲ್ಲ. ಜಾತಿ, ಧರ್ಮ, ಅಧಿಕಾರ ಮತ್ತು ಆರ್ಥಿಕ ಅಸಮಾನತೆಗಳು ಸ್ತ್ರೀ ದೌರ್ಜನ್ಯಕ್ಕೆ ಪ್ರಮುಖ ಕಾರಣವಾಗುತ್ತಿವೆ. ವಿಶೇಷವಾಗಿ ಅಸಂಘಟಿತ ವಲಯದ ಮಹಿಳೆಯರು ಆರ್ಥಿಕ ಭದ್ರತೆ ಇಲ್ಲದೆ ಶೋಷಣೆಗೆ ಒಳಗಾಗುತ್ತಿದ್ದಾರೆ. ಶಾಲೆಗಳಲ್ಲಿಯೇ ನಡೆಯುವ ಲೈಂಗಿಕ ದೌರ್ಜನ್ಯಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಸುರಕ್ಷತೆಯನ್ನೇ ಪ್ರಶ್ನಿಸುವಂತಿವೆ’ ಎಂದರು.

‘ಬಿ.ಆರ್. ಅಂಬೇಡ್ಕರ್ ಹೇಳಿದಂತೆ ರಚನಾತ್ಮಕ ಸಾಮಾಜಿಕ ಬದಲಾವಣೆಯೇ ನಿಜವಾದ ಮಹಿಳಾ ಸಬಲೀಕರಣ. ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿ ಆತ್ಮವಿಶ್ವಾಸದಿಂದ ಬದುಕಬೇಕು. ಗ್ರಾಮೀಣ ಮಹಿಳೆಯರ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವಾಗಬೇಕು’ ಎಂದು ಕಿವಿಮಾತು ಹೇಳಿದರು.

ವಿಚಾರ ಸಂಕಿರಣದಲ್ಲಿ ಮಹಿಳಾ ಹಕ್ಕುಗಳು, ಸಾಮಾಜಿಕ ಅಸಮಾನತೆ, ಉದ್ಯೋಗಾವಕಾಶ, ಆರೋಗ್ಯ ಹಾಗೂ ಕಾನೂನು ಅರಿವಿನ ಕುರಿತು ತಜ್ಞರು ವಿಷಯ ಮಂಡಿಸಿದರು. ವಿದ್ಯಾರ್ಥಿನಿಯರಿಂದ ಪ್ರಬಂಧ ಮಂಡನೆ ಹಾಗೂ ಪ್ರಶ್ನೋತ್ತರ ಸಂವಾದ ನಡೆಯಿತು.

ಪೌರಕಾರ್ಮಿಕ ಮಹಿಳೆಯರಾದ ನೇತ್ರಾವತಿ ಹಾಗೂ ಹುಚ್ಚಂಗೆಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಶ್ರೀನಿವಾಸ ಆಜೂರ ಅಧ್ಯಕ್ಷತೆ ವಹಿಸಿದ್ದರು. ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸುನಿಲ್ ಕುಮಾರ್ ಬಿ.ಎನ್., ಕಾಲೇಜು ಆಡಳಿತ ಮಂಡಳಿ, ಜನಸ್ಪಂದನ ಟ್ರಸ್ಟ್ ಹಾಗೂ ಸುದ್ದಿ ಪಬ್ಲಿಕೇಷನ್ಸ್ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೌರ ಸೇವಾ ಸಮಿತಿ ಅಧ್ಯಕ್ಷ ಜಿ.ಎಂ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ್, ನಿರ್ದೇಶಕರಾದ ಆರ್.ವಿ. ಬಲರಾಮ ಶ್ರೇಷ್ಠಿ, ಪರಮೇಶ್ವರಪ್ಪ, ಆರ್.ವಿ. ಕೃಷ್ಣಮೂರ್ತಿ, ಅತಿಥಿಗಳಾದ ಯಶೋಧ ಸಿ.ವೈ., ಅನಸೂಯ ಕಾಂಬಳೆ, ಸುಜಾತ ಟಿ.ಡಿ., ತಿಮ್ಮಪ್ಪ ಎ.ಕೆ., ಗೌರಮ್ಮ, ಐಕ್ಯೂಎಸಿ ಸಂಚಾಲಕಿ ವೀಣಾ ಎಚ್.ಎಂ., ಬಾಹುಬಲಿ ವನಕುದರಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-43-800996352

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.