ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸೇನೆ: ಎಂಜಿನಿಯರಿಂಗ್‌ ಪದವೀಧರರಿಂದ ಗ್ರ್ಯಾಜುಯೇಟ್‌ ಕೋರ್ಸ್‌ಗೆ ಅರ್ಜಿ

Last Updated 19 ಆಗಸ್ಟ್ 2021, 10:11 IST
ಅಕ್ಷರ ಗಾತ್ರ

ಭಾರತೀಯ ಮಿಲಿಟರಿಯಲ್ಲಿ 2022ರ ಜನವರಿಯಿಂದ ಆರಂಭವಾಗುವ ಟೆಕ್ನಿಕಲ್‌ಗ್ರ್ಯಾಜುಯೇಟ್‌ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಭಾರತೀಯ ಸೇನೆಯು 2022ರ ಸಾಲಿಗೆ ಎಂಜಿನಿಯರಿಂಗ್‌ ಪದವೀಧರರಿಂದಟೆಕ್ನಿಕಲ್‌ಗ್ರ್ಯಾಜುಯೇಟ್‌ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಕೋರ್ಸ್‌ 2022ರ ಜನವರಿಯಿಂದ ಆರಂಭವಾಗಲಿದೆ.

ಎಂಜಿನಿಯರಿಂಗ್ ಪಾಸಾದ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಕೋರ್ಸ್‌ಗೆ 134 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಕೋರ್ಸ್‌ ಮುಗಿದ ಬಳಿಕ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಉದ್ಯೋಗ ನೀಡಲಾಗುವುದು.

ಹುದ್ದೆಗಳ ಸಂಖ್ಯೆ: 134

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿಎಂಜಿನಿಯರಿಂಗ್‌ ಪದವಿಯನ್ನು ಪಡೆದಿರಬೇಕು.

ವಯಸ್ಸು:ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ, ಗರಿಷ್ಠ 27 ವರ್ಷ ಮೀರಿರಬಾರದು.

ಆಯ್ಕೆ ವಿಧಾನ: ದೈಹಿಕ ಕ್ಷಮತೆ ಹಾಗೂ ಲಿಖಿತ ಪರೀಕ್ಷೆ ಮೂಲಕ ಕೋರ್ಸ್‌ಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಭಾರತೀಯ ಸೇನೆಯ ವೆಬ್‌ಸೈಟ್‌ ಮೂಲಕ ಮಾಹಿತಿಯನ್ನು ಪಡೆಯಬಹುದು.

ಅರ್ಜಿ ಸಲ್ಲಿಸುವ ಕೊನೆ ದಿನಾಂಕ: 15-09-2021

ವೆಬ್‌ಸೈಟ್‌:https://joinindianarmy.nic.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT