ಹಾರೋಹಳ್ಳಿ: ಜಗತ್ತಿನ ಅನೇಕ ರಾಷ್ಟ್ರಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳನ್ನು ಅಧ್ಯಯನ ಮಾಡಿದಾಗ ಭಾರತದ ಸಂವಿಧಾನ ಸುಮಾರು ಐವತ್ತು ವರ್ಷಗಳ ಮುಂದಿನ ಯೋಜನೆಗಳನ್ನು ಹೊಂದಿರುವಂತೆ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ್ದಾರೆ. ಭಾರತ ತನ್ನ ಶ್ರೇಷ್ಠತೆಯಿಂದ ಜಗತ್ತಿಗೆ ಮಾದರಿಯಾಗಿದೆ ಎಂದು ರಾಜ್ಯ ಪ್ರಶಸ್ತಿ ವಿಜೇತ ಕೀರಣಗೆರೆ ಜಗದೀಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಚಿಕ್ಕದೇವರಹಳ್ಳಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

‘ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಒಂದು ದಿನದ ಊಟ ಇಲ್ಲದಿದ್ದರೂ ಮಕ್ಕಳ ಶಿಕ್ಷಣಕ್ಕೆ ಭದ್ರ ಅಡಿಪಾಯ ಹಾಕಬೇಕು’ ಎಂದು ತಿಳಿಸಿದರು.

‘ಜ್ಞಾನಕ್ಕಿಂತ ದೊಡ್ಡ ಆಯುಧವಿಲ್ಲ. ಎದುರಾಳಿಗಳು ನಮ್ಮ ಜ್ಞಾನಕ್ಕೆ ಹೆದರುತ್ತಾರೆ. ಆಯುಧಗಳಿಗಲ್ಲ ಎಂಬುದನ್ನು ಅರಿತಿದ್ದ ಡಾ.ಅಂಬೇಡ್ಕರ್, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮನೋಭಾವನೆಯಿಂದ ಜಗತ್ತನ್ನು ಗೆಲ್ಲಬಹುದು ಎಂದು ಮನಗಂಡು ವಿಶ್ವದ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ’ ಎಂದರು.

ಕಿದ್ವಾಯಿ ಆಸ್ಪತ್ರೆ ನಿವೃತ್ತ ಫಾರ್ಮಾಲಿಸ್ಟ್ ಯಶೋಧ, ಮಾದಕ ವ್ಯಸನ ಮತ್ತು ಮದ್ಯಪಾನ ಕುರಿತು ಆಪ್ತಸಮಾಲೋಚನೆ ನೀಡಿದರು. ಗ್ರಾಮದ ಗಿರಾಣಿ ಅಂಗಡಿಗಳಲ್ಲಿಯೂ ಮದ್ಯ ಲಭ್ಯವಾಗುತ್ತಿದೆ. ಇದರಿಂದಾಗಿ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕುಟುಂಬಗಳಲ್ಲಿ ಕಲಹ, ಮಾನಸಿಕ ಕಿರಿಕಿರಿ ಮತ್ತು ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕೋಟೆ ಕುಮಾರ್, ದುರ್ಗೆಗೌಡ, ರಾಮಚಂದ್ರು, ತಿಮ್ಮರಾಜು, ದೇವರಾಜು, ಕಿರಣ, ಡಾ.ಎಂ.ವಿಜಯ್ ಕುಮಾರ್, ಮಹಾದೇವ, ಕೃಷ್ಣ, ಮೋಹನ್, ಭೀಮ ಬಳಗದ ಯುವಕರು, ಗ್ರಾಮದ ಮುಖಂಡರು, ಮಹಿಳೆಯರು ಮತ್ತು ಮಕ್ಕಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-14-1455727507

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.