ಜಗಳೂರು: ‘ವಿದ್ಯಾರ್ಥಿಗಳು ಹಾಗೂ ಯುವಜನತೆ ಸಾಹಿತ್ಯದ ಓದು, ಬರವಣಿಗೆ ಮೂಲಕ ಸೃಜನಾತ್ಮಕ ಚಟುವ ಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾಖಾನ್ ಸಲಹೆ ನೀಡಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಹಾಗೂ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಕನ್ನಡ ಭಾಷೆ, ನಾಡು, ನುಡಿ, ನೆಲ, ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ವೃತ್ತಿ ಜೀವನದೊಂದಿಗೆ ಸಾಹಿತ್ಯ ಕ್ಷೇತ್ರವನ್ನೂ ಶ್ರೀಮಂತಗೊಳಿಸಬೇಕಿದೆ. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ, ಸಾಹಿತ್ಯದ ಓದು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕನ್ನಡ ಅನ್ನದ ಭಾಷೆಯಾಗಬೇಕು. ಪರಭಾಷಿಕರು ಸಿಕ್ಕಾಗ ಅವರ ಭಾಷೆಯಲ್ಲೇ ಮಾತನಾಡುವ ಮೂಲಕ ನಮ್ಮ ಭಾಷೆಯನ್ನು ಗೌಣವಾಗಿಸುವ ಪ್ರವೃತ್ತಿಯನ್ನು ಬಿಡಬೇಕು. ಅವರ ಬಳಿ ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕು’ ಎಂದು ಸಾಹಿತಿ ಎನ್.ಟಿ.ಎರ್ರಿಸ್ವಾಮಿ ಹೇಳಿದರು.

‘ಕನ್ನಡ ಎಂದರೆ ಅಮ್ಮನಂತೆ ಪ್ರೀತಿಸುವ ಭಾಷೆ. ಕನ್ನಡಿಗರು ವಿಶಾಲ ಹೃದಯ ವೈಶಾಲ್ಯತೆ ಇರುವವರು’ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಭಾರತಿ ಅಕ್ಕ ಅಭಿಪ್ರಾಯಪಟ್ಟರು.

‘112 ವರ್ಷಗಳ ಹಿಂದೆ ಕನ್ನಡಿಗರಿಗಾಗಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿತವಾಗಿದೆ. ಪ್ರತಿ ಕುಟುಂಬದಿಂದ ಒಬ್ಬರು ಆಜೀವ ಸದಸ್ಯರಾಗುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸಲು ಸಾಧ್ಯ’ ಎಂದು ಪತ್ರಕರ್ತ ಬಿ.ಪಿ. ಸುಭಾನ್ ಅಭಿಪ್ರಾಯಪಟ್ಟರು.

ಎಸ್ಎಸ್ಎಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೊಟ್ಟೂರಿನ ಬನಶಂಕರಿ ಮಹಿಳಾ ಮಂಡಳಿಯ ಸದಸ್ಯರು ವಚನ ಗಾಯನ ನಡೆಸಿಕೊಟ್ಟರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಸುಜಾತಮ್ಮ, ರಾಜು, ಸಾಹಿತಿ ಎನ್.ಎಂ. ರವಿಕುಮಾರ್, ಅರವಿಂದನ್, ಬೆಲ್ಲದ ಬಸವರಾಜ್, ನಾಗಲಿಂಗಪ್ಪ, ಎಂ. ರಾಜಪ್ಪ, ಕೆ.ಎಂ. ಜಗದೀಶ್, ಸೋಮನಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-43-771170305

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.