ಜೇವರ್ಗಿ: ‘ಓದಿದವರು ಲೀಡರ್, ಓದದವರು ಡೀಲರ್. ಹೀಗಾಗಿ ಡಾ.ಬಾಬಾಸಾಹೇಬ ಅವರು ಕಂಡ ಕನಸಿನಂತೆ ಪ್ರತಿಯೊಬ್ಬರು ಗುಣಮಟ್ಟದ ಶಿಕ್ಷಣ ಪಡೆದು ಡೀಲರ್ಗಳಾಗದೇ ದೇಶದ ಉತ್ತಮ ಲೀಡರ್ಗಳಾಗಿ’ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ಡಾ.ಅಂಬೇಡ್ಕರ್ ಭವನದ ಆವರಣದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ನಿಮಿತ್ತ ಅರಿವು ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ‘ಡಾ.ಅಂಬೇಡ್ಕರ್ ಭಾರತದ ಅಂತಃಕರಣದ ಶಿಖರ. ನಮಗೆ ಮೆರವಣಿಗೆಯ ಅಂಬೇಡ್ಕರ್ ಬೇಕಾಗಿಲ್ಲ, ಬರವಣಿಗೆಯ ಅಂಬೇಡ್ಕರ್ ಬೇಕಾಗಿದೆ’ ಎಂದರು.

‘ಈ ದೇಶದ ದೇವಸ್ಥಾನಗಳು ನಿಮ್ಮ ಕಣ್ಣುಗಳನ್ನು ಮುಚ್ಚಿದರೇ ಗ್ರಂಥಾಲಯಗಳು ಕಣ್ಣು ತೆರೆಸುತ್ತವೆ. ಶೋಷಿತ ಸಮುದಾಯಗಳ ಅಭ್ಯುದಯಕ್ಕೆ ಹಾಗೂ ಸ್ವಾಭಿಮಾನದ ಬದುಕಿಗೆ ಇಡೀ ಜೀವನವನ್ನೇ ಮುಡಿಪಿಟ್ಟ ಅಂಬೇಡ್ಕರ್ ಋಣವನ್ನು ತೀರಿಸಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಅಂಬೇಡ್ಕರ್ ಜೀವಂತವಾಗಿರುವುದು ಶಿಕ್ಷಣದಲ್ಲಿ ಎಂಬ ಸತ್ಯವನ್ನು ಅರಿಯಬೇಕು. ಪೋಷಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದರೆ ಉನ್ನತ ಹುದ್ದೆಗಳನ್ನು ಅಲಂಕರಿಸಲಿದ್ದಾರೆ. ಸಮುದಾಯ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತದೆ’ ಎಂದು ಹೇಳಿದರು.

ಬೀದರ್ ಆಣದೂರಿನ ಭಂತೆ ವರಜ್ಯೋತಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಚಿಂತಕ ರಾಜರತ್ನ ಅಂಬೇಡ್ಕರ್ ಸಮಾರಂಭ ಉದ್ಘಾಟಿಸಿದರು. ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ‘ಡಾ.ಅಂಬೇಡ್ಕರ್ ವಾಣಿ’ ಪುಸ್ತಕ ಬಿಡುಗಡೆಗೊಳಿಸಿದರು. ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಪುಂಡಲೀಕ ಗಾಯಕವಾಡ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಕೇದಾರಲಿಂಗಯ್ಯ ಹಿರೇಮಠ, ಶಿವರಾಜ ಪಾಟೀಲ ರದ್ದೇವಾಡಗಿ, ಶೋಭಾ ಬಾಣಿ, ಪ್ರತಾಪ ಕಟ್ಟಿ, ಶಾಂತಪ್ಪ ಯಲಗೋಡ, ರಮೇಶ ಬಾಬು ವಕೀಲ, ಸಿದ್ದು ಅಂಗಡಿ, ಶಿವರೆಡ್ಡಿ ಐನಾಪುರ, ಶರಣು ಗುತ್ತೇದಾರ, ಸಂಗಣ್ಣ ಹೂಗಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ದೌಲಪ್ಪ ಮದನ ಸ್ವಾಗತಿಸಿದರು. ಸಿದ್ರಾಮ ಕಟ್ಟಿ ನಿರೂಪಿಸಿದರು. ಶ್ರೀಹರಿ ಕರಕಿಹಳ್ಳಿ ವಂದಿಸಿದರು.

ಅದ್ದೂರಿ ಮೆರವಣಿಗೆ: ಪಟ್ಟಣದ ಬಸವೇಶ್ವರ ಸರ್ಕಲ್ದಿಂದ ಡಾ.ಅಂಬೇಡ್ಕರ್, ಗೌತಮ ಬುದ್ಧರ ಮೂರ್ತಿಗಳ ಭವ್ಯ ಮೆರವಣಿಗೆ ನಡೆಸಲಾಯಿತು. ಡಿಜೆ ಬದಲು ವಿವಿಧ ಕಲಾತಂಡಗಳ ವೈಭವದೊಂದಿಗೆ ವಿವಿಧ ಸರ್ಕಲ್ಗಳ ಮೂಲಕ ಅಂಬೇಡ್ಕರ್ ಭವನದವರೆಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಜಿ.ಪಂ ಮಾಜಿ ಸದಸ್ಯರಾದ ಚಂದ್ರಶೇಖರ ಹರನಾಳ, ಮರೆಪ್ಪ ಬಡಿಗೇರ, ಶಾಂತಪ್ಪ ಕೂಡಲಗಿ, ಸುಭಾಷ ಚನ್ನೂರ, ಭೀಮರಾಯ ನಗನೂರ, ಮಲ್ಲಣ ಕೊಡಚಿ, ಮಹಾದೇವ ಕೋಳಕೂರ, ಮಲ್ಲಮ್ಮ ಕೊಬ್ಬಿನ್, ರವಿ ಕುರಳಗೇರಾ, ರಾಜಶೇಖರ ಶಿಲ್ಪಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-31-1137479716

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.