ಜೇವರ್ಗಿ: ‘ಪ್ರತಿಯೊಬ್ಬರಿಗೂ ಘನತೆ, ಗೌರವ, ಸ್ವಾಭಿಮಾನದಿಂದ ಬದುಕಲು ಕಲಿಸಿದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಈ ದೇಶಕಲ್ಲ ವರ್ಲ್ಡ್ (ಜಗತ್ತಿಗೆ) ಚಾಂಪಿಯನ್’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಾಂತಾ ಅಷ್ಠಿಗೆ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಶನಿವಾರ ಅಂಬೇಡ್ಕರ್ ಜಯಂತ್ಯೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ‘ಅಂಬೇಡ್ಕರ್ ಅರಿವು ಉತ್ಸವ–2026’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

‘ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮೂಲಕ ಜಗತ್ತಿಗೆ ಜ್ಞಾನ ನೀಡಿದ ಮಹಾನ್ ಚಿಂತಕ. ಬಸವಣ್ಣ ಲಿಂಗಾಯತ, ಅಂಬೇಡ್ಕರರು ದಲಿತ ಎಂಬ ಸಂಕುಚಿತ ಮನೋಭಾವ ತೊರೆಯಬೇಕು. ಇದು ಅಂಬೇಡ್ಕರ್ವಾದ ಅಲ್ಲ. ಅಪಾರ ಜ್ಞಾನ ಸಂಪನ್ನರಾಗಿದ್ದ ಅಂಬೇಡ್ಕರ್ ಅವರು ಅಪ್ರತಿಮ ಪಂಡಿತರಾಗಿದ್ದರು’ ಎಂದು ಹೇಳಿದರು.

‘ಬಡತನದ ಹಿನ್ನೆಲೆಯಿಂದ ಬಂದ ಅಂಬೇಡ್ಕರರು ನಿಶ್ಚಿತ ಗುರಿಯೊಂದಿಗೆ ಅಧ್ಯಯನಶೀಲರಾಗಿ ಜಗತ್ತಿಗೆ ಮಾದರಿಯಾಗಬಲ್ಲ ಸಂವಿಧಾನ ರಚಿಸಿದರು. ಅವರು ರಚಿಸಿರುವ ಸಂವಿಧಾನ ಇಂದು ಜಗತ್ತಿನ ಹಲವು ರಾಷ್ಟ್ರಗಳ ಸಂವಿಧಾನಗಳಿಗೆ ಪ್ರೇರಣೆಯಾಗಿದೆ’ ಎಂದು ತಿಳಿಸಿದರು.

ಆಳಂದ ಬಿಆರ್ಸಿ ಚಂದ್ರಶೇಖರ ಕಟ್ಟಿಮನಿ ಮಾತನಾಡಿ, ‘ಒಂದೊಂದು ವಿಷಯದಲ್ಲಿ ಪರಿಣಿತಿ ಪಡೆದವರು ಇದ್ದಾರೆ. ಆದರೆ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಕಾನೂನು ಶಾಸ್ತ್ರ, ರಾಜಕೀಯ ಹೀಗೆ ವಿವಿಧ ವಿಷಯಗಳಲ್ಲಿ ಪರಿಣಿತಿ ಪಡೆದ ಭಾರತದ ಏಕೈಕ ವ್ಯಕ್ತಿ ಅಂಬೇಡ್ಕರ್ ಅವರು ಒಬ್ಬರೆ’ ಎಂದರು.

ಸೊನ್ನ ವಿರಕ್ತ ಮಠದ ಶಿವಾನಂದ ಸ್ವಾಮೀಜಿ, ಯಡ್ರಾಮಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ, ಚಿಗರಳ್ಳಿ ಸಿದ್ದಕಬೀರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮರೆಪ್ಪ ಬಡಿಗೇರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪುಂಡಲೀಕ ಗಾಯಕವಾಡ ಅಧ್ಯಕ್ಷತೆ ವಹಿಸಿದ್ದರು.

ಜೆಡಿಎಸ್ ಮುಖಂಡರಾದ ರಮೇಶ ಬಾಬು ವಕೀಲ, ದಂಡಪ್ಪ ಸಾಹು ಕುಳಗೇರಾ, ಬಸವರಾಜ ಪಾಟೀಲ ನರಿಬೋಳ, ರುಕುಂ ಪಟೇಲ್ ಇಜೇರಿ, ಎಸ್.ಎಸ್.ಹುಲ್ಲೂರ, ದಾನಪ್ಪಗೌಡ ಹಳಿಮನಿ, ಷಣ್ಮುಖಪ್ಪ ಹಿರೇಗೌಡ, ಷಣ್ಮುಖಪ್ಪ ಸಾಹು ಗೋಗಿ, ಬೈಲಪ್ಪ ನೆಲೋಗಿ, ಶೌಕತ್ ಅಲಿ ಆಲೂರ, ಪ್ರಭು ಜಾಧವ, ಮಲ್ಲಣ್ಣ ಕೊಡಚಿ, ರಾಯಪ್ಪ ಬಾರಿಗಿಡ, ಸಿದ್ರಾಮ ಯಳಸಂಗಿ, ದೊಡ್ಡೇಶ ಕೊಂಬಿನ್ ಅತಿಥಿಗಳಾಗಿ ಆಗಮಿಸಿದ್ದರು.

ಇದೇ ವೇಳೆ ಸಾಹಿತ್ಯ ಹಾಗೂ ಸಮಾಜ ಸೇವಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಶಿವಶರಣ ಮಾರಡಗಿ ಸ್ವಾಗತಿಸಿದರು. ಸಿದ್ದು ಕೆರೂರ ನಿರೂಪಿಸಿದರು. ಮಹೇಶ ಕೋಕಿಲೆ ವಂದಿಸಿದರು.

ಧಮ್ಮ ಶಾಂತಿ ಯಾತ್ರೆ: ಪಟ್ಟಣದ ಬುದ್ಧ ನಗರದಿಂದ ಡಾ.ಅಂಬೇಡ್ಕರ್ ಪುತ್ಥಳಿವರೆಗೆ ಧಮ್ಮ ಶಾಂತಿ ಯಾತ್ರೆ ಜರುಗಿತು. ಜಿ.ಪಂ ಮಾಜಿ ಸದಸ್ಯರಾದ ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಭೀಮರಾಯ ನಗನೂರ, ಶಾಂತಪ್ಪ ಯಲಗೋಡ, ಸುಭಾಷ ಚನ್ನೂರ, ಬೆಣ್ಣೆಪ್ಪ ಕೊಂಬಿನ್, ರಾಜಶೇಖರ ಶಿಲ್ಪಿ, ಶ್ರೀಹರಿ ಕರಕಿಹಳ್ಳಿ, ರವಿ ಕುರಳಗೇರಾ, ಸಿದ್ರಾಮ ಕಟ್ಟಿ, ಸೇರಿದಂತೆ ಅನೇಕರು ಇಒರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-31-1295437869

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.