ಜೋಳದಹಾಳ್ (ಚನ್ನಗಿರಿ): ‘ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಇಂತಹ ಅವಕಾಶಗಳು ಸಿಗುವುದು ಅಪರೂಪ. ಈ ಗುಡ್ಡದ ಮಕ್ಕಳ ಬಣ್ಣದ ಬೇಸಿಗೆ ಶಿಬಿರವು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದು ಬಿಇಒ ಎಲ್. ಜಯಪ್ಪ ತಿಳಿಸಿದರು.

ತಾಲ್ಲೂಕಿನ ಜೋಳದಹಾಳ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಗುಡ್ಡದ ಮಕ್ಕಳ ಬಣ್ಣದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ಈ ಶಿಬಿರದಲ್ಲಿ ಮಕ್ಕಳಿಗೆ ಮಣ್ಣಿನ ಮಡಿಕೆ ತಯಾರಿ, ಮುಖವಾಡ ತಯಾರಿ, ಚಿತ್ರಕಲೆ, ರಂಗಾಟಗಳು, ಅಭಿನಯ ತರಗತಿಗಳು, ರಂಗಗೀತೆ ಮತ್ತು ಸ್ಪೋಕನ್ ಇಂಗ್ಲಿಷ್ ಸೇರಿದಂತೆ ಹಲವಾರು ಕೌಶಲ ಆಧಾರಿತ ತರಬೇತಿಗಳನ್ನು ರಂಗಶಿಕ್ಷಕ ಕೆ.ವೆಂಕಟೇಶ್ವರ ಹಾಗೂ ಶಿಕ್ಷಕರು ಕಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಚಟುವಟಿಕೆಯನ್ನು ಅನುಭವಾಧಾರಿತವಾಗಿ ರೂಪಿಸಲಾಗಿದ್ದು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದೇ ಸಾಕ್ಷಿ’ ಎಂದರು.

‘ಗ್ರಾಮೀಣ ಭಾಗದ ಮಕ್ಕಳಲ್ಲಿ ಸೃಜನಾತ್ಮಕತೆ, ಕಲೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಉದ್ದೇಶದಿಂದ ನಡೆದ ಗುಡ್ಡದ ಮಕ್ಕಳ ಬಣ್ಣದ ಬೇಸಿಗೆ ಶಿಬಿರ ವಿದ್ಯಾರ್ಥಿಗಳ ಪ್ರತಿಭೆಗೆ ಹೊಸ ದಾರಿ ತೋರಿದೆ. ನಾನು ಈ ಹಿಂದೆ ಮಾವಿನಕಟ್ಟೆ ಸರ್ಕಾರಿ ಶಾಲೆಯಲ್ಲಿದ್ದು ಅಲ್ಲಿ ಕೂಡಾ ವಿದ್ಯಾರ್ಥಿಗಳಿಂದ ವಿಜ್ಞಾನ ನಾಟಕವನ್ನು ಪ್ರದರ್ಶಿಸಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪಡೆಯಲಾಗಿತ್ತು. ಈಗ ಈ ಶಾಲೆಗೆ ವರ್ಗಾವಣೆಯಾಗಿದ್ದು ಇಲ್ಲಿಯೂ ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣವನ್ನು ನೀಡಲಾಗುತ್ತಿದೆ. ಹಾಗೆಯೇ ಈ ಶಿಬಿರದ ಸಂಚಾಲಕ ನಿಜಗುಣ ಶಿವಯೋಗಿ ಯಶಸ್ಸಿಗೆ ಶ್ರಮಿಸಿದ್ದಾರೆ’ ಎಂದು ರಂಗಶಿಕ್ಷಕ ಕೆ.ವೆಂಕಟೇಶ್ವರ ತಿಳಿಸಿದರು.

ಶಿಬಿರದ ವಿಶೇಷ ಆಕರ್ಷಣೆಯಾಗಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ‘ಧರಣಿ ಮಂಡಲ ಮಧ್ಯದೊಳಗೆ’ ನಾಟಕವನ್ನು ಕೆ. ವೆಂಕಟೇಶ್ವರ ನಿರ್ದೇಶನದಲ್ಲಿ ಹಾಗೂ ಉದಯ್ ಸೊರಬ ಅವರ ಸಹ ನಿರ್ದೇಶನದಲ್ಲಿ ಕೇವಲ 16 ದಿನಗಳಲ್ಲಿ ಕಲಿತು ಪ್ರದರ್ಶಿಸಿರುವುದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಸ್ಥರಾದ ಲೋಕೇಶ್, ಅಣ್ಣಪ್ಪ, ಪ್ರಕಾಶ್, ಸಿದ್ಧಲಿಂಗಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-43-1650568623

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.