ಕಡಬ: ‘ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ’ ಎಂದು ನಿವೃತ್ತ ಶಿಕ್ಷಕ ರಾಮ ಭಟ್ ಹೇಳಿದರು.

ತಾಲ್ಲೂಕಿನ ಪುಣ್ಚಪ್ಪಾಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ 7ನೇ ವರ್ಷದ ಬೇಸಿಗೆ ಶಿಬಿರ ‘ಬಣ್ಣಾಯಣ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಇಂಥ ಶಿಬಿರ ಆಯೋಜಿ ಸಿರುವುದು ಶ್ಲಾಘನೀಯ ಎಂದರು.

ಮಣ್ಣಿನಲ್ಲಿ ಅಕ್ಷರಗಳಿಗೆ ಬಣ್ಣ ಹಚ್ಚುವ ಮೂಲಕ ‘ಬಣ್ಣಾಯನ’ ಉದ್ಘಾಟಿಸಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಡಿ. ಕೃಷ್ಣಕುಮಾರ್ ರೈ ಮಾತನಾಡಿದರು.

ಸಮಾಜ ಸೇವಕ, ಪ್ರಗತಿಪರ ಕೃಷಿಕ ಗಿರಿಶಂಕರ ಸುಲಾಯ, ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್ ವೈ. ಮಾತನಾಡಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾ ಮಾತನಾಡಿ, ಮಕ್ಕಳ ಸರ್ವಾಂಗೀಣ ಪ್ರಗತಿಗೆ ಇಂತಹ ಕಲಿಕಾ ಶಿಬಿರಗಳು ಮುಖ್ಯ ಎಂದರು.

ರಂಗ ನಿರ್ದೇಶಕ, ಕಾಸರಗೋಡಿನ ಶಿಕ್ಷಕ ಉದಯ ಸಾರಂಗ್ ಅವರು ರಂಗದಾಟದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ದಾನಿ ಕೃಷ್ಣ ಕುಮಾರ್ ರೈ ಪಿ.ಡಿ, ಎಸ್ಡಿಎಂಸಿ ಅಧ್ಯಕ್ಷ ವಿಜಯ ಕುಚ್ಚೆಜಾಲು, ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮುಖ್ಯಶಿಕ್ಷಕಿ ರಶ್ಮಿತಾ ಜೈನ್ ನರಿಮೊಗರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶೋಭಾ ಕೆ. ವಂದಿಸಿದರು. ಶಿಕ್ಷಕರಾದ ಭಾಗೀರಥಿ, ಲೀಲಾವತಿ, ಭವಾನಿ ಕೆ. ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-29-815474324

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.