ಕಡರನಾಯ್ಕನಹಳ್ಳಿ: ‘ದುಶ್ಚಟಗಳಿಂದ ಮುಕ್ತವಾದ ಸಮಾಜ ಮೌಲ್ಯಾಧಾರಿತವಾಗಿದೆ. ಸಮಾಜವನ್ನು ನಿಕೋಟಿನ್, ತಂಬಾಕು ಸೇವನೆಯಿಂದ ಮುಕ್ತವಾಗಿಸಲು ಆರೋಗ್ಯ ಇಲಾಖೆ ಜೊತೆ ಸಾರ್ವಜನಿಕರು ಕೈಜೋಡಿಸಿ’ ಎಂದು ಡಾ. ಆಶಾ ಸಲಹೆ ನೀಡಿದರು.

ಸಮೀಪದ ಬಿಳಸನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹರಿಹರ ತಾಲ್ಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ನಿಕೋಟಿನ್ ಮತ್ತು ತಂಬಾಕು ಸೇವನೆ ಯುವ ಸಮೂಹವನ್ನು ಆಕರ್ಷಿಸುತ್ತಿರುವುದು ವಿಪರ್ಯಾಸ. ಕಂಪನಿಗಳ ಆಕರ್ಷಕ ಜಾಹೀರಾತು ಸಹ ಇದಕ್ಕೆ ಕಾರಣವಾಗಿದೆ’ ಎಂದು ತಾಲ್ಲೂಕಿನ ಹಿರಿಯ ಆರೋಗ್ಯ ನಿರೀಕ್ಷಕ ಎಂ. ಉಮ್ಮಣ್ಣ ಹೇಳಿದರು.

‘ತಂಬಾಕು ಮತ್ತು ನಿಕೋಟಿನ್ ದುಷ್ಪರಿಣಾಮಗಳನ್ನು ಮನವರಿಕೆ ಮಾಡಿಕೊಡುವುದು ನಮ್ಮ ಉದ್ದೇಶ. ಬಿಳಸನೂರು ವ್ಯಾಪ್ತಿಯ ತಿಮ್ಮಾಪುರ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವಾಗಿಸಲು ಮತ್ತು ಘೋಷಿಸಲು ಎಲ್ಲ ರೀತಿಯ ಕಾರ್ಯಾಚರಣೆ ಹಮ್ಮಿಕೊಂಡಿದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದು ಡಾ.ಉಷಾ ಹೇಳಿದರು.

ಎಂ. ಮಂಜುನಾಥ್, ಬಸವರಾಜ್ ಎರೆಸೀಮೆ, ನಾಗರತ್ನ, ಪುಷ್ಪಾ, ರೇಣುಕಾ, ನಾಗಮ್ಮ, ಆಸ್ಮಾ, ನಾದಾಫ್ ರಮ್ಯಾ, ಫಾರ್ಮಸಿ ಅಧಿಕಾರಿ ಮಂಜುನಾಥ, ಕಿರಿಯ ಪ್ರಯೋಗಶಾಲೆ ತಂತ್ರಜ್ಞ ದೇವರಾಜ್, ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-43-706450386

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.