ಕಡೂರು: ‘ವಿದ್ಯೆ ಎನ್ನುವುದು ಯಾರೂ ಅಪಹರಿಸಲಾಗದ ಸಂಪತ್ತಾಗಿದ್ದು, ಉಪ್ಪಾರ ಸಮಾಜವೂ ಸೇರಿದಂತೆ ಹಿಂದುಳಿದ ವರ್ಗಗಳು ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಉಳಿತಾಯದ ಹಾದಿ ಅನುಸರಿಸಬೇಕು. ಅನಕ್ಷರತೆ, ಮೌಢ್ಯ, ಬಡತನದಿಂದ ಹೊರ ಬರಬೇಕು’ ಎಂದು ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ಶ್ರೀಲಕ್ಷ್ಮೀವೆಂಕಟೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಚಿಕ್ಕಮಗಳೂರು ಜಿಲ್ಲಾ ಉಪ್ಪಾರ ಸಂಘ, ಉಪ್ಪಾರ ನೌಕರರ ಸಂಘ, ಕಡೂರು, ತರೀಕೆರೆ, ಅಜ್ಜಂಪುರ ತಾಲ್ಲೂಕು ಉಪ್ಪಾರ ಸಂಘಗಳು ಜಿಲ್ಲಾಡಳಿತದ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಭಗೀರಥ ಜಯಂತ್ಯುಂತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮೇಲ್ವರ್ಗದವರು ಎನಿಸಿಕೊಂಡ ವರು ಎಲ್ಲ ರಂಗಗಳಲ್ಲಿ ಸಾಧಕರಾಗಿರುವುದು ಶಿಕ್ಷಣದ ಬಲದಿಂದಲೇ ಎನ್ನುವುದನ್ನು ಅರಿಯಬೇಕು. ನಮ್ಮ ಯುವಜನರು ಮಹತ್ವಾಕಾಂಕ್ಷೆ ಹೊಂದಿದ್ದರೂ ದುಶ್ಚಟಗಳ ದಾಸರಾಗಿ ಪಾಶ್ಚಾತ್ಯ ಸಂಸ್ಕೃತಿ ಅನುಸರಿಸುತ್ತಿರುವುದು ನಾವು ಹಿಂದುಳಿಯಲು ಕಾರಣವಾಗಿದೆ. ಶಿಕ್ಷಣದ ಮಹತ್ವ ಅರಿಯುವ ಜತೆಗೆ ಸಂಸ್ಕಾರದ ಮೂಲಕ ಸಾಕ್ಷರರಾಗಬೇಕೇ ಹೊರತು ರಾಕ್ಷಸರಾಗಬಾರದು. ಉಪ್ಪಾರ ಸಮುದಾಯವನ್ನು ಎಸ್ಟಿ ಗುಂಪಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಶಾಸಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ಹೇಳಿದರು.

ಚಿಂತಕ ವೈ.ಎಸ್.ವಿ. ದತ್ತ ಮಾತನಾಡಿ, ‘ಕಡೂರಿನಲ್ಲಿ ನಾನು ಎರಡು ದಶಕಗಳ ಹಿಂದೆ ರಾಜಕೀಯವಾಗಿ ಹೆಜ್ಜೆ ಇಟ್ಟಾಗಿನಿಂದ ನನ್ನ ಬೆನ್ನಿಗೆ ನಿಂತ ಉಪ್ಪಾರ ಸಮುದಾಯವನ್ನು ಸ್ವಾಭಿಮಾನಿಯಾಗಿಸಿ, ಸಂಘಟಿಸಿ ಎಲ್ಲ ಸಮಾಜದವರೂ ನಿಮ್ಮನ್ನು ತಿರುಗಿ ನೋಡುವಂತೆ ರೂಪಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಭಾವಿಸಿದ್ದೇನೆ. ನಿಮ್ಮೊಂದಿಗೆ ನನ್ನ ಒಡನಾಟ ‘ಉಪ್ಪಿಗಿಂತ ರುಚಿಯಿಲ್ಲ, ಉಪ್ಪಾರರಿಗಿಂತ ನೆಂಟಸ್ಥರಿಲ್ಲ’ ಎನ್ನುವಂತೆ ರೂಪುಗೊಂಡಿದೆ’ ಎಂದರು.

ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಅವರು ಉಪನ್ಯಾಸ ನೀಡಿದರು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ‘ಆತ್ಮವಿಶ್ವಾಸದ ಪ್ರತೀಕವಾಗಿರುವ ಉಪ್ಪಾರರು ಹಿಂದೂ ಸಂಸ್ಕೃತಿಯ ಪ್ರತಿಪಾದಕರಾಗಿದ್ದು, ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ಅಸಮಾನತೆ ಬೇಡ, ಅಭಿಮಾನ ಅಹಂಕಾರವಾಗದಿರಲಿ’ ಎಂದು ಹಾರೈಸಿದರು.

ಟಿ.ಆರ್. ಲಕ್ಕಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬೆಳ್ಳಿಪ್ರಕಾಶ್, ಜಿಲ್ಲಾ ಉಪ್ಪಾರ ನೌಕರರ ಸಂಘದ ಅಧ್ಯಕ್ಷ ವೈ.ಎಂ. ತಿಪ್ಪೇಶ್, ವನಿತಾ ಮಧು, ಮೋಹನ್ಕುಮಾರ್, ಹಾಸನ ವಿಶ್ವ ವಿದ್ಯಾಲಯದ ಕುಲಸಚಿವ ಎನ್. ನಾಗರಾಜ್, ಜಿಗಣೇಹಳ್ಳಿ ನೀಲಕಂಠಪ್ಪ, ಉಪ್ಪಾರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್. ಲೋಕೇಶ್ಬಾಬು, ಜಿ. ಸತೀಶ್ ಮಾತನಾಡಿದರು. ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಮಲ್ನಾಡ್ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ದೇವರಾಜು, ಸಪ್ತಕೋಟಿ ಧನಂಜಯ, ಬಿ.ಆನಂದಪ್ಪ, ಸಿ.ಆರ್. ಅನಂತಪ್ಪ, ಎಚ್.ಟಿ. ಅಶೋಕ್, ಎಂ.ಕೆ. ಮಹೇಶ್ವರಪ್ಪ, ಎನ್. ಸೋಮಶೇಖರ್, ಮಂಜುನಾಥ್, ವಿರೂಪಾಕ್ಷಪ್ಪ, ನಿಂಗಪ್ಪ ಇದ್ದರು.

2024- 25ನೇ ಸಾಲಿನ 120, 2025-26ನೇ ಸಾಲಿನ 150 ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಿಕ್ಷಕ ಬ್ಯಾಗಡೆಹಳ್ಳಿ ಬಸವರಾಜ್ ಭಗೀರಥ ಮಹರ್ಷಿಯ ವೇಷ ಧರಿಸಿ ಗಮನ ಸೆಳೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-126-1898826834

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.