ಕಾಗವಾಡ: ಮಹಾರಾಷ್ಟ್ರದ ಮಿರಜ್ ಪಟ್ಟಣದ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ತಂಬಾಕು ಮುಕ್ತ ಸಮಾಜ ರಚಿಸಲು ಶುಕ್ರವಾರ ಜಾಗೃತಿ ರ್ಯಾಲಿ ನಡೆಯಿತು.

ಜಾಗೃತಿ ರ್ಯಾಲಿಗೆ ಬೀದಿ ನಾಟಕ ಮತ್ತು ಪ್ರತಿಜ್ಞಾ ಬೋಧನೆಯೊಂದಿಗೆ ಚಾಲನೆ ನೀಡಲಾಯಿತು. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ನಿರ್ಮಲ್ ಆಸ್ಪತ್ರೆಯ ಸಿಬ್ಬಂದಿ ತಂಬಾಕು ಸೇವನೆಯಿಂದಾಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.

ಎಲ್ಲರೂ ತಂಬಾಕು ಮುಕ್ತ ಜೀವನ ನಡೆಸುವ ಪ್ರತಿಜ್ಞೆಯನ್ನು ಸ್ವೀಕರಿಸಿದರು. ವಿನಾಯಕ ಕವಡೆ, ಡಾ.ಶ್ರದ್ಧಾ ಗಾಯಕವಾಡ, ಡಾ.ಅನಿತಾ ಖರಾತ, ಡಾ.ಪ್ರಿಯಾಂಕಾ ಸಚದೇವ, ಲಕ್ಷ್ಮಿ ಭಂಡಾರೆ, ಸೇಜಲ ಬನಸೋಡೆ, ಸಚೀನ ಪಾಟೀಲ, ಇಮ್ರಾನ ಮುಲಾನಿ, ಅಮೀರ ಶರಿಕಮಸಲತ, ಅಜೀಂ ತಾಂಬೋಳಿ, ರಾಹುಲ ಲೋಹಾರ, ಸ್ವರೂಪ ರಾಯನಾಡೆ, ಹರೀಶ ಲೋಹಾರ, ಸಚೀನ ಪೇಟಕರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-21-1526498818

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.