ಹಿರಿಯೂರು: ‘ಕೆಪಿಎಸ್ ಶಾಲೆ ಆರಂಭಿಸುವ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಅವಕಾಶ ಕೊಡುವುದಿಲ್ಲ. ನಮ್ಮೂರಿನ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ತಾಲ್ಲೂಕಿನ ಕಕ್ಕಯ್ಯನಹಟ್ಟಿ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಎಚ್ಚರಿಸಿದರು.

ಊರಿನ ಸರ್ಕಾರಿ ಶಾಲೆ ಮುಚ್ಚುವುದರ ವಿರುದ್ಧ ಗುರುವಾರ ಎಐಡಿಎಸ್ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಶಾಲೆ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.

‘ನಮ್ಮೂರ ಶಾಲೆ, ನಮ್ಮಯ ಕಣ್ಮಣಿ’ ಎಂಬ ಬ್ಯಾನರ್ ಕಟ್ಟಿ ಶಾಲೆ ಮುಚ್ಚುವ ಸರ್ಕಾರದ ಯೋಜನೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.

‘ಬಡವರ ಮಕ್ಕಳಿಗೆ ಶಿಕ್ಷಣ ಖಾತರಿಪಡಿಸಬೇಕಿದ್ದ ಸರ್ಕಾರವೇ ಶಿಕ್ಷಣದ ವ್ಯಾಪಾರಕ್ಕೆ ನಿಂತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಹಳ್ಳಿಯ ಶಾಲೆಗಳನ್ನು ಒಂದೊಂದಾಗಿ ಮುಚ್ಚುತ್ತಿದೆ. ಕೆಪಿಎಸ್ ಶಾಲೆಗಳ ಮೇಲುಸ್ತುವಾರಿಯನ್ನು ಹೊರಗುತ್ತಿಗೆ ಕೊಡುವುದರ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಹಂತ-ಹಂತವಾಗಿ ಖಾಸಗಿ ಕಂಪನಿಗಳಿಗೆ ಧಾರೆ ಎರೆಯುವ ಹುನ್ನಾರ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ರಾಮನಗರ ಮತ್ತು ಅರಸೀಕೆರೆ ತಾಲ್ಲೂಕುಗಳಲ್ಲಿ ಊರಿನ ಜನರಿಗೆ ಮೋಸ ಮಾಡಿ ಶಾಲೆ ಮುಚ್ಚಲು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿಸಲಾಗಿದೆ. ಈ ಕುರಿತು ಗ್ರಾಮಸ್ಥರು ಎಚ್ಚರವಾಗಿರ ಬೇಕು. ಸರ್ಕಾರದ ಮೋಸಗಳಿಗೆ ಬಲಿ ಯಾಗದೆ ಊರಿನ ಶಾಲೆ ಉಳಿಸಲು ಹೋರಾಡ ಬೇಕು’ ಎಂದು ಎಐಡಿಎಸ್ಒ ರಾಜ್ಯ ಘಟಕದ ಕಾರ್ಯದರ್ಶಿ ಮಹಾಂತೇಶ್ ಬಿಳೂರ್ ಮನವಿ ಮಾಡಿದರು.

‘ನಮ್ಮ ಬದುಕಿಗೆ ಕೂಲಿಯೇ ಆಧಾರ. ನಮ್ಮೂರು ಎಂದೂ ಬಸ್ ಕಂಡಿಲ್ಲ. ಬೆಳಿಗ್ಗೆ ಇದ್ದದ್ದನ್ನು ತಿಂದು ಮನೆ ಬಿಟ್ಟರೆ ಸಂಜೆಗೇ ಕೂಲಿಯಿಂದ ಮರಳುವುದು. ವಾಣಿವಿಲಾಸಪುರ ನಮ್ಮ ಊರಿಂದ 5 ಕಿ.ಮೀ. ದೂರದಲ್ಲಿದೆ. ನಿತ್ಯ 10 ಕಿ.ಮೀ. ಹೋಗಿ ಬರುವುದು ಮಕ್ಕಳಿಗೆ ಕಷ್ಟ. ಕೂಲಿ ಬಿಟ್ಟು ಮಕ್ಕಳನ್ನು ನಿತ್ಯ ಶಾಲೆಗೆ ಕಳಿಸಿ– ಕರೆ ತರುವುದು ಆಗದ ಮಾತು. ನಮ್ಮೂರಿನ ಶಾಲೆಯಲ್ಲಿಯೇ ನಮ್ಮ ಮಕ್ಕಳಿಗೆ ಕಲಿಸಬೇಕು. ಯಾವುದೇ ಕಾರಣಕ್ಕೂ, ಯಾರೇ ಬಂದ್ರೂ ನಾವು ಊರಿನ ಶಾಲೆ ಬಾಗಿಲು ಹಾಕಲು ಬಿಡುವುದಿಲ್ಲ’ ಎಂದು ಪೋಷಕರಾದ ತಿಮ್ಮಕ್ಕ ಎಚ್ಚರಿಕೆ ನೀಡಿದರು.

‘ನಮ್ಮೂರಲ್ಲಿ ಇರುವವರೆಲ್ಲ ಕೃಷಿಕರು ಮತ್ತು ಕೂಲಿಕಾರರು. ನಮಗೆ ಕೆಪಿಎಸ್ ಯೋಜನೆ ಬೇಡ. ನಾನು, ನನ್ನಪ್ಪ ಕಲಿತದ್ದು ಇದೇ ಶಾಲೆಯಲ್ಲಿ. ನಮ್ಮ ಮಕ್ಕಳಿಗೂ ಇದೇ ಶಾಲೆ ಬೇಕು. ನಮ್ಮೂರ ಶಾಲೆಯೇ ನಮ್ಮ ದೊಡ್ಡ ಆಸ್ತಿ. ಸರ್ಕಾರಕ್ಕೆ ಸೌಲಭ್ಯ ಕೊಡಬೇಕೆಂಬ ಇಚ್ಛಾಶಕ್ತಿ ಇದ್ದರೆ ನಮ್ಮೂರಿನ ಶಾಲೆಗೆ ಒದಗಿಸಲಿ’ ಎಂದು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯ ಜಯಣ್ಣ ಆಗ್ರಹಿಸಿದರು.

‘ಯಾವುದೇ ಒತ್ತಡ ಬಂದರೂ ಊರಿನ ಶಾಲೆ ಮುಚ್ಚದಂತೆ ನೋಡಿಕೊಳ್ಳೋಣ. ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಶಾಲೆ ರಕ್ಷಿಸಿಕೊಳ್ಳೋಣ’ ಎಂಬ ಒಂದು ಸಾಲಿನ ನಿರ್ಣಯವನ್ನು ಒಕ್ಕೊರಲಿನಿಂದ ಕೈಗೊಳ್ಳಲಾಯಿತು.

ಎಐಡಿಎಸ್ಒದ ಕೆ.ಈರಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಕಣುಮಪ್ಪ, ಕೆಂಚಪ್ಪ, ಕಿರಣಗೌಡ, ತಿಮ್ಮಕ್ಕ, ಸುಜಾತಾ, ಶಿವಲಿಂಗಮ್ಮ, ಪೋಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-44-297274605

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.