ಕಲಬುರಗಿ: ‘ಕಳೆದ ವರ್ಷ ಸಂವಿಧಾನ ದಿನದಂದು ಯುನೆಸ್ಕೊ ತನ್ನ ಮುಖ್ಯ ಕಚೇರಿ ಇರುವ ಪ್ಯಾರಿಸ್ನಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣ ಮಾಡಿತು. ನೂರಕ್ಕಿಂತ ಹೆಚ್ಚು ದೇಶಗಳು ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿವೆ. ಹೀಗೆ ಬಾಬಾ ಸಾಹೇಬ ಅಂಬೇಡ್ಕರ್ ಜಾಗತಿಕ ಚಿಂತಕರಾಗಿ ಗಮನಸೆಳೆಯುತ್ತಿದ್ದಾರೆ. ಅಂಬೇಡ್ಕರ್ ಪಡೆದ ಶಿಕ್ಷಣ ಮತ್ತು ಜ್ಞಾನವನ್ನು ಇಂದು ಜಗತ್ತು ಗೌರವಿಸುತ್ತಿದೆ’ ಎಂದು ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕೆ.ಪಂಡಿತ್ ಹೇಳಿದರು.

ನಗರದ ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ವಿಜ್ಞಾನ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಸಂಚಾಲಕ ಅರುಣ್ ಜೋಳದಕೂಡ್ಲಿಗಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಅಂಬೇಡ್ಕರ್ ಅವರ ಕೊನೆಯ ಹೋರಾಟ ಭೂ ಹೋರಾಟವಾಗಿತ್ತು. ಅಂಬೇಡ್ಕರ್ ಮಹಾಪರಿನಿರ್ವಾಣ ಹೊಂದಿದ ನಂತರ ಅವರ ಶಿಷ್ಯರಾಗಿದ್ದ ಬಿ.ಕೆ.ಗಾಯಕವಾಡ್ ಅವರ ನಾಯಕತ್ವದಲ್ಲಿ ನಡೆಸಿದ ಭೂ ಹೋರಾಟದಲ್ಲಿ ದೇಶವ್ಯಾಪಿ ದಲಿತರಿಗೆ ಒಂದು ಲಕ್ಷದ ಐವತ್ತು ಸಾವಿರ ಎಕರೆ ಭೂಮಿ ಸಿಕ್ಕಿದೆ. ಇದು ಇಡೀ ದೇಶದಲ್ಲಿ ಬಹುದೊಡ್ಡ ರೈತ ಹೋರಾಟವಾಗಿದೆ. ಇಂದು ಅಂಬೇಡ್ಕರ್ ಅವರನ್ನು ಜಾಗತಿಕ ಚಳವಳಿಗಾರರು ಮತ್ತು ವಿದ್ವತ್ ಲೋಕ ಸ್ಮರಿಸಿಕೊಳ್ಳುತ್ತ ಅಧ್ಯಯನ ಮಾಡುತ್ತಿದೆ’ ಎಂದು ಹೇಳಿದರು.

ಡಾ.ಅಂಬೇಡ್ಕರ್ ಜಯಂತ್ಯುತ್ಸವದ ಪ್ರಯುಕ್ತ ಕಾಲೇಜಿನಲ್ಲಿ ಅಂಬೇಡ್ಕರ್ ಕುರಿತು ಪ್ರಬಂಧ, ಭಾಷಣ, ಆಶುಭಾಷಣ, ಅಂಬೇಡ್ಕರ್ ಪರ ಗೀತೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕೆ.ಪಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಪ್ರಶಸ್ತಿ ಪ್ರದಾನ ಮಾಡಿದರು.

ಕೆ.ಪಿ.ಇ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ್ ಶೀಲವಂತ ಮಾತನಾಡಿದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕ ಸಿದ್ದಾರ್ಥ ಮದನಕರ್, ಪ್ರಾಧ್ಯಾಪಕಿ ನಿರ್ಮಲಾ ಶಿರಗಾಪುರ, ಪ್ರಾಂಶುಪಾಲ ಸಿದ್ದಪ್ಪ ಎಸ್. ಕಾಂತ, ಕಾಲೇಜಿನ ಪ್ರಾಧ್ಯಾಪಕರಾದ ಡಾ.ಗಾಂಧೀಜಿ ಮೋಳಕೆರೆ, ಹರ್ಷವರ್ಧನ್, ದತ್ತುರಾಯ, ಅರುಣ್ ಕುಮಾರ್, ಶಿಲ್ಪಾ, ಗ್ರಂಥಪಾಲಕರಾದ ರಮೇಶ ಜಾಬನೂರು, ಶಿವಕುಮಾರ್, ಕರಿಬಸಪ್ಪ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ವಸಂತ ನಾಶಿ ನಿರೂಪಿಸಿದರು. ಸುದರ್ಶನ್ ಮದನಕರ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-34-1591068038

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.