ಕಲಬುರಗಿ: ‘ಇಡೀ ಜಗತ್ತು ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನವನ್ನು ಆಚರಿಸುತ್ತಿದೆ. ಅವರ ನೈಜ ಕನಸಿನ ಭಾರತ ನಿರ್ಮಿಸಲು ಅವರ ಜೀವನ ಮತ್ತು ಚಿಂತನೆಗಳನ್ನು ಅರ್ಥೈಸಿಕೊಳ್ಳಬೇಕು. ಅವರನ್ನು ಮರೆತರೆ ನಿಜವಾದ ಭಾರತೀಯರಾಗಲು ಸಾಧ್ಯವಿಲ್ಲ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನ ಸಂಸ್ಥೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಅವರು, ‘ಮೀಸಲಾತಿ ಮೂಲಕ ಉದ್ಯೋಗ, ಶಿಕ್ಷಣ ಅವಕಾಶ ಪಡೆಯಲಾಗಿದೆ. ಹೊಂದಾಣಿಕೆಗಿಂತ ಬದಲಾವಣೆಗೆ ಪ್ರಶ್ನಿಸುವಂತಾಗಬೇಕು. ಆತ್ಮಸಾಕ್ಷಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅರಿವು ಮತ್ತು ಅವರ ಚಿಂತನೆಗಳನ್ನು ಬೋಧಿಸಿ ಸಮಾಜ ಜಾಗೃತಗೊಳಿಸಬೇಕು. ಪ್ರಜಾಪ್ರಭುತ್ವ ಯಶಸ್ಸಿಗೆ ಭಾರತೀಯ ಸಂವಿಧಾನದ ಆಶಯ ಕಾರಣವಾಗಿದೆ. ವಿಶ್ವದ ಎಲ್ಲಾ ರಾಷ್ಟ್ರಗಳು ಡಾ. ಬಿ. ಆರ್. ಅಂಬೇಡ್ಕರ್ ಅವರ ಸಂವಿಧಾನ, ಅವರ ಕೊಡುಗೆಗಳನ್ನು ಗೌರವಿಸುತ್ತಿವೆ. ಅಂಬೇಡ್ಕರ್ ನೋವು ಅನುಭವಿಸಿದರೆ ನಾವೆಲ್ಲರೂ ಸಿಹಿ ಅನುಭವಿಸುತ್ತಿದ್ದೇವೆ. ಅವರನ್ನು ಮರೆತರೆ ಜೀವನ ಮುಕ್ತಿ ಸಾಧ್ಯವಿಲ್ಲ’ ಎಂದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಮುಕ್ತಿ ಒಕ್ಕೂಟದ ಸಂಚಾಲಕಿ ಬೃಂದಾ ಅಡಿಗೆ ಮಾತನಾಡಿ, ‘ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವು ಮೂಲಭೂತ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಿದೆ. ಶಿಕ್ಷಣವೆಂದರೆ ಪದವಿಯಲ್ಲ. ಜ್ಞಾನ, ವಿವೇಚನೆ ಅನ್ಯಾಯವನ್ನು ಪ್ರಶ್ನಿಸಿ ಅವಕಾಶ ಮತ್ತು ಸೌಲಭ್ಯ ಪಡೆಯುವ ಚಿಂತನಾ ಕ್ರಮ. ನನ್ನ ಹಕ್ಕು ನನಗಿದೆ, ನನ್ನ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಯಾರ ಬೆಂಬಲದ ಅವಶ್ಯಕತೆಯೂ ಇಲ್ಲ ಎಂಬ ಪ್ರಜ್ಞಾವಂತಿಕೆ, ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ವಿದ್ಯಾವಿಷಯಕ ಪರಿಷತ್ ಸದಸ್ಯೆ ಪ್ರತಿಮಾ ಮಠದ, ಕುಲಸಚಿವ (ಆಡಳಿತ) ಪ್ರೊ. ರಮೇಶ ಲಂಡನಕರ್, ಕುಲಸಚಿವ (ಮೌಲ್ಯಮಾಪನ) ನಿಂಗಣ್ಣ ಕಣ್ಣೂರ, ಹಣಕಾಸು ಅಧಿಕಾರಿ ಜಯಾಂಬಿಕ ಉಪಸ್ಥಿತರಿದ್ದರು.

ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ನಾಡಗೀತೆ ಹಾಡಿದರು. ಸಿದ್ಧಾರ್ಥ ಚಿಮ್ಮಾಇದಲಾಯಿ ಬಿ. ಆರ್. ಅಂಬೇಡ್ಕರ್ ಗೀತೆ ಪ್ರಸ್ತುತಪಡಿಸಿದರು. ಅಮಿತಾ ರಾಣಿ ಪರಿಚಯಿಸಿದರು. ಕಾಶಿನಾಥ ನೂಲಕರ್ ನಿರೂಪಿಸಿದರು. ಶಾಂತಪ್ಪ ಹೆಬಳಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-34-1979185064

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.