ಕಲಬುರಗಿ: ‘ವಾಸ್ತುಶಿಲ್ಪವೆಂದರೆ ಕೇವಲ ಕಟ್ಟಡಗಳನ್ನು ನಿರ್ಮಿಸುವ ಮತ್ತು ಸ್ಥಳಗಳನ್ನು ವಿನ್ಯಾಸಗೊಳಿಸುವ ಕ್ರಿಯೆಯಲ್ಲ. ಕಲ್ಪನೆ, ಭಾವನೆ, ಅನುಭವಗಳ ಸಮ್ಮಿಲನದಿಂದ ಉತ್ತಮ ಸಮಾಜವನ್ನು ರೂಪಿಸುವ ಶಕ್ತಿ ವಾಸ್ತುಶಿಲ್ಪಕ್ಕೆ ಇದೆ’ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ ಎಸ್.ಚಿಂಚೋಳಿ ಹೇಳಿದರು.

ನಗರದ ಪಿಡಿಎ ಸ್ಯಾಕ್ ಸಭಾಂಗಣದಲ್ಲಿ ಶುಕ್ರವಾರ ಎಚ್ಕೆಇ ಸಂಸ್ಥೆಯ ಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ನ ‘ರಚನ ರಂಗ’ ತಾಂತ್ರಿಕ–ಸಾಂಸ್ಕೃತಿಕ ಉತ್ಸವ–2026 ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸೃಜನಶೀಲ, ಸಂಸ್ಕೃತಿ, ನಾವೀನ್ಯತೆ ಬಗೆಗಿನ ಮತ್ತು ಯುವಶಕ್ತಿಯ ಆಚರಣೆಯಾದ ರಚನ ರಂಗ ಉತ್ಸವ ಕೇವಲ ಒಂದು ಕಾರ್ಯಕ್ರಮವಾಗಿರದೆ, ಪ್ರತಿಭೆಯನ್ನು ಅನಾವರಣಗೊಳಿಸಲು, ಕಲ್ಪನೆಯನ್ನು ಅಭಿವ್ಯಕ್ತಿಗೊಳಿಸಲು ತರಗತಿ ಆಚೆಗಿನ ಒಂದು ವೇದಿಕೆಯಾಗಿದೆ’ ಎಂದರು.

ಎಚ್ಕೆಇ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಡಾ. ಶರಣಬಸಪ್ಪ ಆರ್.ಹರವಾಳ ಮಾತನಾಡಿ, ‘ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಂಸ್ಕೃತಿಕ ಉತ್ಸವ, ಸ್ಪರ್ಧೆಗಳಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸೋಲು–ಗೆಲುವು ಇಲ್ಲಿ ಮುಖ್ಯವಲ್ಲ. ಗೆದ್ದರೆ ಮುಂದಿನ ಹಂತಕ್ಕೆ ತಲುಪುತ್ತೀರಿ. ಸೋತರೆ ಗೆಲ್ಲುವುದು ಹೇಗೆ ಎಂಬುದನ್ನು ಕಲಿಯುತ್ತೀರಿ’ ಎಂದು ಹೇಳಿದರು.

‘ನಾವು ತಂತ್ರಜ್ಞಾನದ ಮುಂದುವರಿದ ಕ್ಷೇತ್ರದಲ್ಲಿದ್ದೇವೆ. ಇಲ್ಲಿ ಎಐ ಸಹ ಮುಖ್ಯವಾಗಿದೆ. ವಿದ್ಯಾರ್ಥಿಗಳು ಉತ್ತಮ ಜ್ಞಾನ ಮತ್ತು ಕೌಶಲಗಳನ್ನು ಹೊಂದಿದ್ದರೆ ಹೆಚ್ಚಿನದನ್ನು ಸಾಧಿಸಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ಸೃಷ್ಟಿ ಅಸೋಸಿಯೇಟ್ಸ್ನ ವೆಂಕಟ್ ಎಂ.ರಾವ್ ಮಾತನಾಡಿ, ‘ನಾವು ಹೆಚ್ಚಾಗಿ ಶೈಕ್ಷಣಿಕ ಸಾಧನೆಗಳ ಮೇಲೆ ಗಮನ ಹರಿಸುತ್ತೇವೆ. ಆದರೆ, ಮುಂದೆ ನಿಮ್ಮ ಸೃಜನಶೀಲತೆ, ಆತ್ಮವಿಶ್ವಾಸ ನಿಮ್ಮನ್ನು ಪ್ರತ್ಯೇಕಿಸುತ್ತದೆ. ಈ ರೀತಿಯ ಉತ್ಸವದಲ್ಲಿ ಭಾಗವಹಿಸಲು ಸಮರ್ಪಣೆ, ಗಂಟೆಗಳ ಅಭ್ಯಾಸ ಮತ್ತು ವೇದಿಕೆಯಲ್ಲಿ ಪ್ರದರ್ಶನ ನೀಡುವ ಧೈರ್ಯದ ಅಗತ್ಯವಿದೆ’ ಎಂದು ಹೇಳಿದರು.

ದೇವರಮನಿ ಅಸೋಸಿಯೇಟ್ಸ್ನ ಮಲ್ಲಿನಾಥ ದೇವರಮನಿ, ಎಚ್ಕೆಇ ಸಂಸ್ಥೆಯ ಉಪಾಧ್ಯಕ್ಷ ರಾಜಾ ಬಿ.ಭೀಮಳ್ಳಿ, ಸದಸ್ಯರಾದ ನಾಗಣ್ಣ ಎಸ್.ಘಂಟಿ, ರಜನೀಶ್ ಎಸ್.ವಾಲಿ ಉಪಸ್ಥಿತರಿದ್ದರು.

ಪ್ರಿಯಾ ಭರತನಾಟ್ಯ ಪ್ರದರ್ಶಿಸಿದರು. ಪಿಎಚ್.ಡಿ ಪೂರ್ಣಗೊಳಿಸಿದ ಅಂಜುಕುಮಾರಿ ವಂಟಿ ಅವರನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಪ್ರೊ.ಸಂಜ್ಯೋತ್ ಶಾಹ್ ಸ್ವಾಗತಿಸಿದರು. ಸಪ್ನಾ ಇಂಗಿನಶೆಟ್ಟಿ, ಪ್ರಿಯಾಂಕಾ ಅತಿಥಿ ಪರಿಚಯಿಸಿದರು. ಪ್ರಿಯಾ ಹರವಾಳ, ಕೀರ್ತಿ ಹಾಲಕೈ ನಿರೂಪಿಸಿದರು. ಯಶ್ ನಾನಾವಟಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-34-1629506600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.