ಕಲಬುರಗಿ: ‘ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಅವ್ವ ಪ್ರಶಸ್ತಿಯ ಮೂಲಕ ನನಗೆ ನಮ್ಮ ಅಮ್ಮನ ಪ್ರೀತಿ ದೊರಕಿದೆ. ಅವ್ವ ಎನ್ನುವ ಈ ಎರಡಕ್ಷರಗಳಲ್ಲಿ ಇಡೀ ಬ್ರಹ್ಮಾಂಡವೇ ಅಡಗಿದೆ’ ಎಂದು ಸಮಾಜ ಸೇವಕಿ, ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ ಹೇಳಿದರು.

ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದ ಶರಣಬಸವಪ್ಪ ಅಪ್ಪ ಅನುಭವ ಮಂಟಪದಲ್ಲಿ ಶನಿವಾರ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಕಲಾವಾಣಿ ವಿದ್ಯಾರ್ಥಿ ಸಂಘದ ಸಮಾರೋಪ ಮತ್ತು 2025–26ನೇ ಸಾಲಿನ ‘ಅವ್ವ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ನಾವೆಲ್ಲ ಕಲ್ಯಾಣ ಕರ್ನಾಟಕದವರು. ಬಸವಾದಿ ಶರಣರ ಪಾದಸ್ಪರ್ಶದಿಂದ ಪುನೀತವಾದ ಮಣ್ಣಿನಲ್ಲಿ ಹುಟ್ಟಿಬೆಳೆದವರು. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ನಾವೆಲ್ಲರೂ ದುಡಿಯಬೇಕು. ದುಡಿದು ಗಳಿಸಬೇಕು. ಗಳಿಸಿ ಉಳಿಸಬೇಕು. ಉಳಿಸಿದ್ದನ್ನು ಈ ಸಮಾಜಕ್ಕೆ ಮರಳಿ ನೀಡಬೇಕು. ಆಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಇದನ್ನೇ ಹಿರಿಯರು ಹೇಳಿದ್ದಾರೆ’ ಎಂದರು.

‘ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಲಿಂ.ಶರಣಬಸವಪ್ಪ ಅಪ್ಪ ಅವರು ಹಲವು ಶಿಕ್ಷಣ ಸಂಸ್ಥೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಡಾ.ಅಪ್ಪ ಅವರು ಕಟ್ಟಿಬೆಳೆಸಿದ ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಅವ್ವ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಸೌಭಾಗ್ಯ’ ಎಂದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ದಾಕ್ಷಾಯಣಿ ಎಸ್.ಅಪ್ಪ ಮಾತನಾಡಿ, ‘ವಿದ್ಯಾರ್ಥಿಗಳು ನಿರಂತರ ಅಭ್ಯಾಸದ ಮೂಲಕ ಯಶಸ್ಸು ಕಾಣಬೇಕು. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುವ ಮೂಲಕ ತಂದೆ–ತಾಯಿ ಜೊತೆಗೆ ಕಾಲೇಜಿಗೆ ಹೆಸರು ತರಬೇಕು. ಜೀವನದಲ್ಲಿ ಬರುವ ಕಷ್ಟಗಳನ್ನು ಮೀರಿ ಬೆಳೆಯಬೇಕು. ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಲೋಕಮಾನ್ಯ ಭೀಮಣ್ಣ ಖಂಡ್ರೆ ಅವರ ಸೊಸೆಯಾಗಿ, ಸಚಿವ ಈಶ್ವರ ಖಂಡ್ರೆ ಅವರ ಪತ್ನಿಯಾಗಿ, ಸಂಸದ ಸಾಗರ ಖಂಡ್ರೆ ಅವರ ತಾಯಿಯಾಗಿ ಅವರೆಲ್ಲರ ಹಿಂದಿನ ಶಕ್ತಿಯಾಗಿರುವ ಡಾ.ಗೀತಾ ಖಂಡ್ರೆ ಅವರಿಗೆ ಅವ್ವ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ. ಅವರ ಅವಿರತ ಸಾಧನೆ, ಸಮಾಜ ಸೇವೆ ಮಹಿಳೆಯರಿಗೆ ಮಾದರಿ’ ಎಂದರು.

ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವೈದ್ಯೆ ಡಾ.ಉಮಾದೇವಿ ದೇಶಮುಖ, ಶರಣಬಸವೇಶ್ವರ ಸಂಸ್ಥಾನದ ಭವಾನಿ ಎಸ್.ಅಪ್ಪ, ದೇವಸ್ಥಾನ ಆವರಣದ ಶಾಲಾ–ಕಾಲೇಜುಗಳ ನಿರ್ದೇಶಕಿ ನೀಲಾಂಬಿಕಾ ಶೇರಿಕಾರ ಮಾತನಾಡಿದರು.

ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್.ಅಪ್ಪ, ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ದೇಶಮುಖ, ಶರಣಬಸವ ವಿವಿಯ ಕುಲಸಚಿವೆ ಲಕ್ಷ್ಮೀ ಪಾಟೀಲ ಮಾಕಾ, ಉಮಾಕಾಂತ ಪಾಟೀಲ, ಶಶಿಕಾಂತ ದುರ್ಗೆ ಉಪಸ್ಥಿತರಿದ್ದರು.

ಮಹಾವಿದ್ಯಾಲಯದ ಪ್ರಾಚಾರ್ಯೆ ಸೀಮಾ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ವಿಭಾಗದವರು ಪ್ರಾರ್ಥಿಸಿದರು. ಪ್ರಾಧ್ಯಾಪಕ ಪ್ರಸಾದ ಅಷ್ಟಗೀಕರ್ ನಿರೂಪಿಸಿದರು. ಶ್ವೇತಾ ಜಿ. ಪರಿಚಯಿಸಿದರು. ಪ್ರತಿಭಾ ಪಾಟೀಲ ವಾರ್ಷಿಕ ವರದಿ ಓದಿದರು. ಸಾಧಕ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-34-1309346351

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.