ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂದೇವಾಲದಲ್ಲಿರುವ ಇಂದಿರಾನಗರ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಜಾರ ಸಾಂಪ್ರದಾಯಿಕ ಗೀತೆಗಳು ಹಾಗೂ ಕಡಿ ಕಸಳಾತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಆಶ್ರಯದಲ್ಲಿ ಮೇ 27ರಿಂದ ಮೇ 29ರವರೆಗೂ ಬೆಳಿಗ್ಗೆ 10ರಿಂದ ಈ ತರಬೇತಿ ನಡೆಯಲಿದೆ.

ಮಹಿಳೆಯರಿಗೆ ಒಳಂಗ, ವದಾವ, ದಳವಾ ಧೋಕಾಯೆರೊ, ಸುರಗಿ ಗೀತೆ, ದೋರಣ ಛೋಡಾಯೇರ ಗೀತೆ, ಹವೇಲಿಯಂಥ ಬಂಜಾರ ಸಾಂಪ್ರದಾಯಿಕ ಗೀತೆಗಳನ್ನು ಕಲಿಸಲಾಗುವುದು. ಪುರುಷರಿಗೆ ಕಸಲಾತ ಕಡಿ, ಸಗಾಯಿರ ಕಡಿ, ವದಾಯಿರ ಕಡಿ, ಘೋಟಾರ ಕಡಿ, ಖಿಚಡಿರ ಕಡಿ, ಥಾಳಿ ಚೋಡಾಯರ ಕಡಿ, ಮರಣೇರ ಸಿಕವಾಡಿ, ವಿಂತಿ ಅರದಾಸ, ಹೋಳಿರ ವಾಂಜನಾ ಹಾಗೂ ದಸರಾವ ಆರತಿ– ಹೀಗೆ ಹಲವು ಬಂಜಾರ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ಅನುಭವಿ ಸಾಹಿತಿಗಳಿಂದ ತರಬೇತಿ ಕೊಡಿಸಲಾಗುವುದು. ತರಬೇತಿ ಅವಧಿಯಲ್ಲಿ ಊಟ, ವಸತಿ ಸೌಲಭ್ಯ ಇರಲಿದೆ ಎಂದು ಅಕಾಡೆಮಿಯ ಸದಸ್ಯ ಅಣ್ಣಾರಾಯ ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 99803 91235 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-34-426730920

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.