ಕಲಬುರಗಿ: ‘ಕ್ಯಾನ್ಸರ್ ಗುಣಪಡಿಸಬಲ್ಲ ರೋಗ. ಈ ಬಗ್ಗೆ ಭಯಬೇಡ. ಆದರೆ, ಜಾಗೃತಿ ಇರಲಿ’ ಎಂದು ಕ್ಯಾನ್ಸರ್ ತಜ್ಞ ಡಾ. ಶಾಂತಲಿಂಗ ನಿಗ್ಗುಡಗಿ ಸಲಹೆ ನೀಡಿದರು.

ಕಲಬುರಗಿ ಬಸವ ಸಮಿತಿಯಿಂದ ಅನುಭಾವ ಮಂಟ ಪದಲ್ಲಿ ದಾನಮ್ಮ ವೀರಪ್ಪ ಅನಂತಪುರ ಸ್ಮರಣಾರ್ಥ ಜರುಗಿದ ‘ಅರಿವಿನ ಮನೆ–895’ನೇ ದತ್ತಿ ಕಾರ್ಯಕ್ರಮದಲ್ಲಿ ‘ಆರೋಗ್ಯವೇ ಭಾಗ್ಯ’ ದತ್ತಿ ಉಪನ್ಯಾಸದಲ್ಲಿ ಅವರು ಕ್ಯಾನ್ಸರ್ ಕುರಿತು ಮಾತನಾಡಿದರು.

‘ಶರಣರ ಮಾರ್ಗದಲ್ಲಿ ನಡೆದರೆ ಯಾವುದೇ ರೋಗಗಳೇ ಬರುವುದಿಲ್ಲ. ನಾವು ನಮ್ಮ ದೇಹಕ್ಕೆ ಸಮತೋಲನದ ಆಹಾರ ಪೂರೈಸಿದರೆ ದೇಹದ ಎಲ್ಲಾ ಜೀವಕೋಶಗಳು ಆರೋಗ್ಯಕರವಾಗಿ ಇರುತ್ತವೆ’ ಎಂದರು.

‘ಶೇಕಡಾ 30ರಷ್ಟು ಮಂದಿಗೆ ಕ್ಯಾನ್ಸರ್ ರೋಗವು ತಂಬಾಕು ಮತ್ತು ಮದ್ಯಪಾನ ಸೇವನೆಯಿಂದ, ಶೇಕಡಾ 18ರಿಂದ 20ರಷ್ಟು ಜನರಿಗೆ ಹಾರ್ಮೋನ್ಗಳ ಅಸಮತೋಲನದಿಂದಲೂ, ಶೇಕಡ 30ರಿಂದ 35ರಷ್ಟು ಮಂದಿಗೆ ಆಹಾರ ಪದ್ಧತಿ ಸರಿಯಿಲ್ಲದೇ ಇರುವುದರಿಂದ ಬರುತ್ತದೆ’ ಎಂದರು.

‘ಪುರುಷರಲ್ಲಿ ಬಾಯಿ– ಗಂಟಲು– ಶ್ವಾಸಕೋಶದ ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಗರ್ಭಕೋಶ, ಸ್ತನ ಕ್ಯಾನ್ಸರ್ ಸಾಮಾನ್ಯ ಕಂಡು ಬರುತ್ತದೆ. ಹೆಣ್ಣುಮಕ್ಕಳು ತಿಂಗಳಿಗೊಮ್ಮೆ ತಮ್ಮ ಸ್ತನವನ್ನು ಮುಟ್ಟಿ ನೋಡಿಕೊಂಡು ಗೆಡ್ಡೆ ಆಗಿದಿಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಬೇಕು. ಗೆಡ್ಡೆ ಸಣ್ಣದಿದ್ದಾಗಲೇ ವೈದ್ಯರನ್ನು ಕಾಣಬೇಕು’ ಎಂದು ಸಲಹೆ ನೀಡಿದರು.

ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ವೀರಣ್ಣ ದಂಡೆ, ಜಯಶ್ರೀ ದಂಡೆ, ದತ್ತಿ ದಾಸೋಹಿ ಸಿದ್ದೇಶ್ವರ ಅನಂತಪುರ, ಉದ್ಯಮಿ ರಾಜೇಂದ್ರ ಖೂಬಾ, ಕಾರ್ಯದರ್ಶಿ ಆನಂದ ಪಾಟೀಲ ಸಿದ್ಧಾಮಣಿ , ಪ್ರಾಧ್ಯಾಪಕಿ ಜ್ಯೋತಿ ಅನಂತಪುರ, ಕೆ.ಎಸ್.ವಾಲಿ , ಶರಣಗೌಡ ಪಾಟೀಲ ಪಾಳಾ, ಉದ್ದಂಡಯ್ಯ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-34-587870400

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.