ಕಲಬುರಗಿ: ‘ಯಥಾಸ್ಥಿತಿವಾದಿ ವ್ಯವಸ್ಥೆಯೇ ಬಡಜನರು, ಅಲೆಮಾರಿಗಳ ಪಾಲಿಗೆ ದೊಡ್ಡ ಶತ್ರು. ಅಂಥ ಯಥಾಸ್ಥಿತಿವಾದಿ ಸರ್ಕಾರಗಳೂ ಅಪಾಯಕಾರಿ’ ಎಂದು ಚಿತ್ರನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರತಿಪಾದಿಸಿದರು.

ನಗರದ ರಿಂಗ್ ರಸ್ತೆಯ ಕಾಕಡೆ ಚೌಕ ಸಮೀಪದ ರಾಮನಗರ ವ್ಯಾಪ್ತಿಯ ಬಯಲಿನಲ್ಲಿ ನೆಲೆಸಿರುವ ವಿವಿಧ ಸಮುದಾಯಗಳ ಅಲೆಮಾರಿಗಳ ಅಹವಾಲುಗಳನ್ನು ಭಾನುವಾರ ಆಲಿಸಿ ಅವರು ಮಾತನಾಡಿದರು.

‘1982ರಿಂದ ಅಲೆಮಾರಿ ಕುಟುಂಬಗಳು ಇಲ್ಲಿ ನೆಲೆಸಿವೆ. ಇಂದಿಗೂ ಮೂಲಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ಗಾಗಿ ಪರದಾಡುತ್ತಿವೆ. 43 ವರ್ಷಗಳಲ್ಲಿ ಎಷ್ಟೋ ಸರ್ಕಾರಗಳು ಬಂದು ಹೋಗಿವೆ. ಆದರೆ, ಇವರ ಬವಣೆ ಮಾತ್ರ ತೀರಿಲ್ಲ. ಯಥಾಸ್ಥಿತಿವಾದಿ ವ್ಯವಸ್ಥೆಯಲ್ಲಿ ಬಡವರು ಹೀಗೆ ಕನಿಷ್ಠವಾಗಿ ಬದುಕುತ್ತಿರುತ್ತಾರೆ. ಉಳ್ಳವರು, ಅದಾನಿ–ಅಂಬಾನಿಯಂಥ ಶ್ರೀಮಂತರ ಲಾಭವು ಎರಡು, ಮೂರು, ನಾಲ್ಕು ಪಟ್ಟು ಹೆಚ್ಚುತ್ತಿರುತ್ತದೆ’ ಎಂದರು.

‘ಯಥಾಸ್ಥಿತಿವಾದಿ ಎಂಬುದು ಅನ್ಯಾಯದ ವ್ಯವಸ್ಥೆ. ಅದನ್ನು ಸರಿಪಡಿಸ ಬೇಕು. ಬಡವರು, ಅಲೆಮಾರಿಗಳ ಸಮಸ್ಯೆ ಗಳನ್ನು ಪರಿಹರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ. ಇದಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಅಗತ್ಯ’ ಎಂದರು.

‘ಕಲ್ಯಾಣ ಕರ್ನಾಟಕ ಭಾಗದ ಅಲೆಮಾರಿಗಳ ಶ್ರೇಯೋಭಿವೃದ್ಧಿಗೆ ನಮ್ಮ ತಂಡ ಹಲವು ವರ್ಷಗಳಿಂದ ಶ್ರಮಿಸುತ್ತಿದೆ. ರಾಮನಗರದ ಅಲೆಮಾರಿಗಳ ಸ್ಥಿತಿಗತಿ ಪರಿಶೀಲಿಸಿದೆ. 42–43 ವರ್ಷಗಳಿಂದ ಈ ಕುಟುಂಬ ಗಳು ಜೀವನಾವಶ್ಯಕ ಸೌಕರ್ಯಗಳೂ ಇಲ್ಲದೇ ಬದುಕುತ್ತಿದ್ದಾರೆ. ಇವರೆಲ್ಲ ಶೋಷಿತರು, ಬಹಳ ಬಡತನದಲ್ಲಿದ್ದಾರೆ. ನಾವೆಲ್ಲ 21ನೇ ಶತಮಾನದಲ್ಲಿ ಬುಲೆಟ್ ರೈಲು ಓಡಿಸುವ ಹಾಗೂ ಟೌನ್ಶಿಪ್ಗಳನ್ನು ನಿರ್ಮಿಸುವ ಬಗೆಗೆ ಮಾತನಾಡುತ್ತೇವೆ. ಅದರ ಬದಲು ಇಂಥ ಕಡುಬಡವರಿಗೆ ಮೂಲಸೌಕರ್ಯ ಒದಗಿಸಿ ಬದುಕು ಕಟ್ಟಿಕೊಳ್ಳಲು ಸರ್ಕಾರಗಳು ನೆರವಾಗಬೇಕು. ಅಂದಾಗ ಮಾತ್ರವೇ ಗಟ್ಟಿಯಾದ ಕರ್ನಾಟಕ ರೂಪಿಸಲು ಸಾಧ್ಯ’ ಎಂದರು.

ಕಾಕ್ರೋಚ್ ಪಾರ್ಟಿ: ‘ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಟ್ರೆಂಡ್ನಲ್ಲಿರುವ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಮಾಜದ ಜನಾಕ್ರೋಶ, ರಾಜಕೀಯ ಪ್ರಜ್ಞೆಗೆ ನಿದರ್ಶನ. ಅದಾಗ್ಯೂ, ಅದು ರಾಜಕೀಯ ವಿಡಂಬನೆಯಷ್ಟೇ ಆಗಿದೆ. ಬರೀ ಸಾಮಾಜಿಕ ಜಾಲತಾಣಗಳಲ್ಲಿನ ಆಕ್ರೋಶದಿಂದ ಬದಲಾವಣೆ ಅಸಾಧ್ಯ. ಅದು ಅಸಮಾನತೆಯ ವಿರುದ್ಧದ ಗಟ್ಟಿ ಶಕ್ತಿಯಾಗಿ ಹೊರಹೊಮ್ಮಬೇಕಿದೆ’ ಎಂದು ಚೇತನ್ ಅಹಿಂಸಾ ಹೇಳಿದರು.

ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಕಲಬುರಗಿ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ ಸೇರಿದಂತೆ ಹಲವರು ಚೇತನ್ ಅಹಿಂಸಾ ಅವರಿಗೆ ಸಾಥ್ ನೀಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-34-1712643389

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.