ಕಲಬುರಗಿ: ‘ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವುದನ್ನು ಮನೆಯಿಂದಲೇ ಪ್ರಾರಂಭಿಸಬೇಕು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ’ ಎಂದು ಖ್ಯಾತ ಜ್ಯೋತಿಷಿ ಚಂಪಾರಾಣಿ ಕಲ್ಯಾಣರಾವ ಕುಂಬಾರ ಹೇಳಿದರು.

ಇಲ್ಲಿನ ಜಯನಗರ ಶಿವಮಂದಿರದಲ್ಲಿ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮಕ್ಕಳ ವಿಕಾಸಕ್ಕೆ ಹಾಗೂ ಉತ್ತಮ ಜೀವನಕ್ಕೆ ‘ಸಂಸ್ಕಾರ ಮತ್ತು ಸಂಸ್ಕೃತಿ’ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳಿಗೆ ಸಂಸ್ಕಾರ ಅವಶ್ಯ. ಮಕ್ಕಳಿಗೆ ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಸಂಸ್ಕಾರ ಜೀವನದಲ್ಲಿ ಉನ್ನತ ಸ್ಥಾನ ಹೊಂದಲು ಸಹಕಾರಿಯಾಗಲಿದೆ’ ಎಂದರು.

ಸಾಹಿತಿ ಜಿ.ಜಿ.ವಣಿಕ್ಯಾಳ ಮಾತನಾಡಿದರು.

ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ಹಿರಿಯ ಸದಸ್ಯ ಹಾಗೂ ಶಿಬಿರ ಸಂಯೋಜಕ ಎಂ.ಡಿ.ಮಠಪತಿ, ಸಂಸ್ಕೃತ ಪಂಡಿತ ಶಿವರುದ್ರಯ್ಯ ಮಠಪತಿ ಮಾತನಾಡಿದರು.ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ, ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ, ಸಹ ಕಾರ್ಯದರ್ಶಿ ಮನೋಹರ ಬಡಶೇಷಿ, ಕೋಶಾಧ್ಯಕ್ಷ ಬಸವರಾಜ ಮಾಗಿ, ಮಲ್ಲಯ್ಯಸ್ವಾಮಿ ಗಂಗಾಧರಮಠ, ಗುರುಪಾದಪ್ಪ ಕಾಂತಾ, ಬಸವರಾಜ ಅನ್ವರಕರ್, ಬಸವರಾಜ ಪುರ್ಮಾ, ನಾಗರಾಜ ಖೂಬಾ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-34-1891686044

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.