ಕಲಬುರಗಿ: ‘ಬದುಕಿನ ಮೌಲ್ಯಗಳನ್ನು ಭಾಷಣಗಳಿಂದ ಕಲಿಸಲು ಸಾಧ್ಯವಿಲ್ಲ; ಅವುಗಳನ್ನು ನಾವೇ ಪಾಲಿಸಿ ತೋರಿಸುವುದು ಅನಿವಾರ್ಯ’ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಪ್ರತಿಪಾದಿಸಿದರು.

ನಗರದ ಎನ್.ವಿ ಸೊಸೈಟಿಯ ಸತ್ಯಪ್ರಮೋದ ತೀರ್ಥ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮಕ್ಕಳ ಪಾಲನಾ ಕಲೆ’ ಕುರಿತು ಅವರು ಉಪನ್ಯಾಸ ನೀಡಿದರು.

‘ಮನಶಾಸ್ತ್ರಜ್ಞರ ಪ್ರಕಾರ ಜಗತ್ತಿನಲ್ಲಿ ಮೂರು ಬಗೆಯ ಪಾಲಕರಿದ್ದಾರೆ. ಮಕ್ಕಳನ್ನು ಅತಿ ಪ್ರೀತಿ ಮಾಡುವ ಪಾಲಕರು, ಅನಾದರ ಮಾಡುವ ಪಾಲಕರು ಹಾಗೂ ಅತಿಯಾದ ಶಿಸ್ತು ರೂಢಿಸುವ ಪಾಲಕರು. ಈ ಮೂರು ಬಗೆಯ ಪೋಷಕತ್ವ ಮಕ್ಕಳ ಪ್ರಗತಿಗೆ ಮಾರಕ’ ಎಂದರು.

‘ಇತ್ತೀಚೆಗೆ ಮಕ್ಕಳನ್ನು ನಾವೆಲ್ಲ ದುರ್ಬೀನು ಹಿಡಿದು ಬೆಳೆಸುತ್ತಿದ್ದೇವೆ. ಮಕ್ಕಳಿಗೆ ನೆಗಡಿ ಬಂದರೆ ಎಂಬಿಬಿಎಸ್ ವೈದ್ಯರು ಸಾಲದು; ಸ್ಪೆಷಾಲಿಸ್ಟೇ ಆಗಿರಬೇಕು ಎನ್ನುತ್ತೇವೆ. ಅತಿಯಾದ ಮುದ್ದು ಒಳ್ಳೆಯದಲ್ಲ. ಮಕ್ಕಳಿಗೆ ವಸ್ತು, ಸಮಯ, ಸಂಬಂಧಗಳ ಬೆಲೆ ತಿಳಿಸಿಕೊಡಬೇಕು. ಮಕ್ಕಳಿಗೆ ಸಮಯ ಕೊಡಬೇಕು. ಅವರನ್ನು ಪ್ರೀತಿಸಬೇಕು. ಆಟಿಕೆ, ಗ್ಯಾಜೆಟ್ಗಳು ಪಾಲಕರ ಪ್ರೀತಿಗೆ ಸಮವಾಗಲ್ಲ; ಚಟವಾಗಿ ಬದಲಾಗಬಹುದು’ ಎಂದು ಎಚ್ಚರಿಸಿದರು.

‘2ನೇ ವಿಧದ ಪಾಲಕರು ಮಕ್ಕಳ ಬಗೆಗೆ ಅನಾದರ ತೋರುತ್ತಾರೆ. ಶಾಲೆಗಳನ್ನು ಲಾಂಡ್ರಿಗಳಂತೆ ಭಾವಿಸುತ್ತಾರೆ. ಅಡ್ಮಿಷನ್ ಮಾಡಿ ಕೈತೊಳೆದುಕೊಳ್ಳುತ್ತಾರೆ. ಮಕ್ಕಳು ಎಲ್ಲವೂ ಶಾಲೆಯಲ್ಲಿ ಕಲಿತು ಗುಣಸಂಪನ್ನರಾಗುತ್ತಾರೆ ಎಂದು ಭಾವಿಸುತ್ತಾರೆ. ಇದು ತಪ್ಪು. ಶಾಲೆಯಲ್ಲಿ 40 ಮಕ್ಕಳಿರುತ್ತಾರೆ. ಮನೆಯಲ್ಲಿ ಒಂದೋ ಎರಡೋ ಮಕ್ಕಳಿರುತ್ತವೆ. ಹೀಗಾಗಿ ಪಾಲಕರು–ಶಿಕ್ಷಕರು ಜೊತೆಯಾಗಿ ಶ್ರಮಿಸಿದಾಗ ಮಾತ್ರ ಮಕ್ಕಳ ಅಭಿವೃದ್ಧಿ ಸಾಧ್ಯ’ ಎಂದರು.

‘3ನೇ ಬಗೆಯ ಪಾಲನೆಯೂ ಅಪಾಯಕಾರಿ. ಅತಿಯಾದ ಕಟ್ಟಪ್ಪಣೆ, ದರ್ಪದಲ್ಲಿ ಬೆಳೆಸಿದರೆ ಯಾವುದೇ ಮಗುವಿನಲ್ಲೂ ನಾಯಕತ್ವ ಬೆಳೆಯೊಲ್ಲ’ ಎಂದು ಎಚ್ಚರಿಸಿದರು.

‘ಮಕ್ಕಳ ಪಾಲನೆ ಹೇಗಿರಬೇಕು ಎಂಬುದನ್ನು ಸಂಸ್ಕೃತದ ಶ್ಲೋಕವೊಂದು ಹೀಗೆ ಹೇಳುತ್ತದೆ: ಲಾಲಯೇತ್ ಪಂಚ ವರ್ಷಾಣಿ, ದಶ ವರ್ಷಾಣಿ ತಾಡಯೇತ್, ಪ್ರಾಪ್ತೇಷು ಷೋಡಶೇ ವರ್ಷೇ ಪುತ್ರಂ ಮಿತ್ರ ವದಾಚ್ಜರೇತ್. ಮಗು ಹುಟ್ಟಿದ ಐದು ವರ್ಷಗಳ ತನಕ ಮುದ್ದು ಮಾಡಬೇಕು. ಹಾಗೆಯೇ ಮುಂದಿನ 10 ವರ್ಷಗಳ ಅವಧಿಯಲ್ಲಿ ಹೊಡೆದು ತಿದ್ದಿತೀಡಿ ಬುದ್ಧಿ ಹೇಳಬೇಕು. 16ನೇ ವರ್ಷದಿಂದ ಮಕ್ಕಳನ್ನು ಸ್ನೇಹಿತರನ್ನಾಗಿ ಕಾಣಬೇಕು ಎಂಬುದು ಇದರ ಅರ್ಥ’ ಎಂದು ಕರಜಗಿ ವಿವರಿಸಿದರು.

‘ಕುಂಬಾರ ತಿಗಡಿ ಮೇಲೆ ಮಡಕೆ ಮಾಡುವಾಗ ಒಂದು ಕೈಯಿಂದ ಹೊಡೆಯುತ್ತ, ಮತ್ತೊಂದು ಕೈಯಿಂದ ಒಳಭಾಗದಲ್ಲಿ ಅದಕ್ಕೆ ಬೆಂಬಲ ನೀಡುತ್ತಾನೆ. ಆಗ ಸುಂದರ ಮಡಕೆ ತಯಾರಾಗುತ್ತದೆ. ಅಂತೆಯೇ ಮಕ್ಕಳ ಪಾಲನೆಯೂ ಇರಬೇಕು. ಇತ್ತೀಚೆಗೆ ಮಕ್ಕಳು ರಿಯಲ್ ಜಗತ್ತಿನಿಂದ ಅಂತರ ಕಾಯ್ದುಕೊಂಡು ವರ್ಚುವಲ್ ವರ್ಲ್ಡ್ನಲ್ಲಿ ಕಳೆದು ಹೋಗುತ್ತಿದ್ದಾರೆ. ವರ್ಚುವಲ್ ವರ್ಲ್ಡ್ ಕಲ್ಪನಾಲೋಕ. ಅದರಿಂದ ಹೊರಬರದಿದ್ದರೆ, ಅಪಾಯ ತಪ್ಪಿದ್ದಲ್ಲ’ ಎಂದು ಎಚ್ಚರಿಸಿದರು. ಎನ್.ವಿ ಸೊಸೈಟಿ ಅಧ್ಯಕ್ಷ ಗೌತಮ ಜಾಹಗೀರದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ವಿ ಸಂಸ್ಥೆಯ ಕಾರ್ಯದರ್ಶಿ ಅಭಿಜಿತ್ ದೇಶಮುಖ, ಉಪಾಧ್ಯಕ್ಷರಾದ ಡಾ.ಎಸ್.ಎಸ್.ಸಿದ್ಧಪುರಕರ, ಬಿ.ಜಿ.ದೇಶಪಾಂಡೆ ಹಾಗೂ ಸುಧಾ ಕರಲಿ ಗಿಕರ್, ಪ್ರಾಚಾರ್ಯ ಪಂಕಜಕುಮಾರ ದಾಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-34-29160450

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.