ಕಲಬುರಗಿ: ‘ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ. ಅದನ್ನು ಪಡೆಯುವ ಹಕ್ಕು ಎಲ್ಲರಿಗೂ ಇದೆ’ ಎಂದು ಕೆಬಿಎನ್ ವಿವಿಯ ಕ್ಯಾಂಪಸ್ ನಿರ್ದೇಶಕ ಸೈಯದ್ ಮುಸ್ತಫಾ ಅಲ್ ಹುಸೇನಿ ಪ್ರತಿಪಾದಿಸಿದರು.

ನಗರದಲ್ಲಿ ಬುಧವಾರ ನಡೆದ ಕೆಬಿಎನ್ ಸಂಸ್ಥೆಯ ಸೈಯದ್ ಅಕ್ಬರ್ ಹುಸೇನಿ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಿಯುಸಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಲುವಾಗಿ ಕಲಬುರಗಿಯ ವಿದ್ಯಾರ್ಥಿಗಳು ಬೇರೆ ಊರಿಗೆ ಹೋಗುವ ಅಗತ್ಯವಿಲ್ಲ. ಕಲಬುರಗಿಯಲ್ಲೇ ನಮ್ಮ ಅಕಾಡೆಮಿಯು ಪಿಯುಸಿ ಆರಂಭದಿಂದಲೇ ಕೆ–ಸಿಇಟಿ, ಜೆಇಇ ಹಾಗೂ ನೀಟ್ ತರಬೇತಿ ಅತ್ಯಂತ ಕಡಿಮೆ ದರದಲ್ಲಿ ನೀಡಲಿದೆ’ ಎಂದರು.

‘ಎಸ್ಎಸ್ಎಲ್ಸಿಯಲ್ಲಿ ಶೇ95ಕ್ಕೂ ಹೆಚ್ಚಿನ ಅಂಕ ಪಡೆದಲ್ಲಿ ಶೇ100ರಷ್ಟು ವಿದ್ಯಾರ್ಥಿವೇತನ ಹಾಗೂ ಶೇ90ರಿಂದ ಶೇ94ರಷ್ಟು ಅಂಕ ಸಾಧನೆ ಮಾಡಿದವರಿಗೆ ಶೇ50ರಷ್ಟು ರಿಯಾಯಿತಿ ಇದೆ’ ಎಂದರು.

ಕೆಬಿಎನ್ ವಿವಿಯ ಉಪಕುಲಪತಿ ಪ್ರೊ.ಅಲಿ ರಜಾ ಮೂಸ್ವಿ, ಸಮ ಉಪಕುಲಪತಿ ಪ್ರೊ.ಅಶ್ಫಾಕ್ ಅಹ್ಮದ್, ಖಾಜಾ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎ.ಎಂ.ಪಠಾಣ, ಪ್ರಾಚಾರ್ಯ ಫಿರೋಜ್ ಮಾತನಾಡಿದರು.

ಅಧಿಕೃತ ಉದ್ಘಾಟನೆ: ಕೆಬಿಎನ್ ವಿಶ್ವವಿದ್ಯಾಲಯದ ಕುಲಾಧಿಪತಿ ಸೈಯದ್ ಮುಹಮ್ಮದ್ ಅಲಿ ಅಲ್-ಹುಸೇನಿ ಅವರು ತರಬೇತಿ ಅಕಾಡೆಮಿಯ ಪರೀಕ್ಷೆ ವಿಭಾಗದ ಅತ್ಯಾಧುನಿಕ ಕಟ್ಟಡವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಬಳಿಕ ಸುತ್ತು ಪರಿಶೀಲನೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-34-759251755

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.