ಆಳಂದ: ‘ಪ್ರಸ್ತುತ ಶೈಕ್ಷಣಿಕ ಅವಕಾಶಗಳು ಎಲ್ಲಡೆ ದೊರೆಯುತ್ತಿದ್ದು, ಇದರ ಸದ್ಬಳಕೆ ಮೂಲಕ ಜ್ಞಾನದ ಹಸಿವು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಬೇಕು’ ಎಂದು ಕಲಬುರಗಿಯ ಶರಣಬಸವೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಸುರೇಶ ನಂದಗಾಂವ ತಿಳಿಸಿದರು.

ಪಟ್ಟಣದ ಎ.ವಿ.ಪಾಟೀಲ ಪದವಿ ಕಾಲೇಜಿನಲ್ಲಿ ಶುಕ್ರವಾರ ಪ್ರಸಕ್ತ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಎಸ್.ಎಚ್.ಹೊಸಮನಿ ಮಾತನಾಡಿ, ‘ಯುವಕರಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಅಧ್ಯಯನಶೀಲತೆ ಗುಣ ಬೆಳೆಸಿಕೊಂಡಾಗ ಮಾತ್ರ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವಿದೆ. ಕಳೆದ 5 ದಶಕದಲ್ಲಿ ನಮ್ಮ ಕಾಲೇಜು ತಾಲ್ಲೂಕಿನ ಪ್ರಗತಿಗೆ ತನ್ನದೆಯಾದ ಕೊಡುಗೆ ನೀಡಿದೆ’ ಎಂದು ಹೇಳಿದರು.

ಹಿರಿಯ ಪ್ರಾಧ್ಯಾಪಕರಾದ ಎಸ್.ಎಸ್.ಕಮ್ಮಾರ, ರಮೇಶ ಮಸರೋಬಾ ಮಾತನಾಡಿದರು. ಪ್ರಾಧ್ಯಾಪಕ ರಾಜಶೇಖರ ಬಾಬನೂರೆ, ವೆಂಕಟೇಶ ಜಿ, ಜೈಪ್ರಕಾಶ ಬಾವಿಮನಿ, ಶ್ರೀಮಂತ ಎಸ್., ಬಸವರಾಜ ಡಿ.ಪಾಟೀಲ, ಟೀಕಪ್ಪ ಎಂ., ಸಿದ್ದರಾಮ ಮಾಶಾಳ, ಬಬ್ರುವಾಹನ, ಬಸವರಾಜ ಶ್ರೇಂಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮತ್ತು ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-31-97181029

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.