ಕಲಬುರಗಿ: ‘ಸರ್ವೇಂದ್ರಿಯನಾಮ್ ನಯನಂ ಪ್ರಧಾನಂ’ ಎಂಬ ಮಾತಿದೆ. ಇದು ನಮ್ಮ ನಿತ್ಯದ ಬದುಕಿನಲ್ಲಿ ಕಣ್ಣುಗಳ ಮಹತ್ವ ಸಾರುತ್ತದೆ. ಅಂಥ ಕಣ್ಣುಗಳ ಆರೋಗ್ಯದ ಮೇಲೆ ಕಲ್ಯಾಣ ಕರ್ನಾಟಕ ಭಾಗದ ಕುದಿ ಬಿಸಿಲು ಪರಿಣಾಮ ಬೀರುತ್ತದೆ. ಈ ಭಾಗದಲ್ಲಿ ಬೀಸುವ ಅತಿಉಷ್ಣ ಹಾಗೂ ಶುಷ್ಕ ಮಾರುತಗಳು ದೇಹದ ಅತ್ಯಂತ ನಾಜೂಕಿನ ಅಂಗವಾದ ಕಣ್ಣುಗಳಿಗೆ ಹಾನಿ ಮಾಡಬಲ್ಲವು. ಚರ್ಮದಷ್ಟೇ ಕಾಳಜಿ, ಪ್ರಾಮುಖ್ಯವನ್ನು ನಾವು ಕಣ್ಣುಗಳಿಗೂ ನೀಡಬೇಕಿದೆ. ಕಲಬುರಗಿಯಂತಹ ಕಡು ಬಿಸಿಲಿನ ಪ್ರದೇಶದಲ್ಲಿ ಕಣ್ಣಿನ ಆರೈಕೆ ಕೇವಲ ಆಯ್ಕೆಯಲ್ಲ, ಅದು ಅನಿವಾರ್ಯ ಎನ್ನುತ್ತಾರೆ ಕಲಬುರಗಿಯ ಸಿದ್ಧರಾಮೇಶ್ವರ ನೇತ್ರಾಲಯದ ಹಿರಿಯ ನೇತ್ರತಜ್ಞೆ ಡಾ.ರಾಜಶ್ರೀ ವಿ.ರೆಡ್ಡಿ.

l ಬೇಸಿಗೆಯಲ್ಲಿ ಕಣ್ಣುಗಳು ಹೆಚ್ಚು ಸಂವೇದನಾಶೀಲ ಆಗುವುದೇಕೆ?

ಉತ್ತರ: ಕಲಬುರಗಿ ಪ್ರಾಂತ್ಯದಲ್ಲಿ ಬೇಸಿಗೆಯಲ್ಲಿ ಕಣ್ಣುಗಳು ನಿರಂತರವಾಗಿ ತೀವ್ರವಾದ ಸೂರ್ಯನ ಬೆಳಕು, ನೇರಳಾತೀತ (ಯುವಿ) ಕಿರಣಗಳು, ದೂಳು, ಶಾಖ ಮತ್ತು ಒಣ ಹವೆಗೆ ತೆರೆದುಕೊಳ್ಳುತ್ತವೆ. ಅದರಿಂದ ಕಣ್ಣಿನ ಶುಷ್ಕತೆ, ಕಿರಿಕಿರಿ, ಅಲರ್ಜಿ ಮತ್ತು ಸೋಂಕು ಉಂಟಾಗಬಹುದು.l ಬೇಸಿಗೆಯಲ್ಲಿ ಕಾಡುವ ಕಣ್ಣಿನ ಸಮಸ್ಯೆಗಳು ಯಾವುವು?

ಉತ್ತರ: ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಣ್ಣಿನ ಶುಷ್ಕತೆ ಕಾಡಬಹುದು. ಬಿಸಿ ಗಾಳಿ, ದೇಹದಲ್ಲಿನ ನೀರಿನಾಂಶ ಕೊರತೆಯಿಂದ ಕಣ್ಣುಗಳಲ್ಲಿ ಉರಿ ಮತ್ತು ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ದೂಳು ಮತ್ತು ಮಾಲಿನ್ಯದಿಂದ ಕಣ್ಣು ಕೆಂಪಾಗುವಿಕೆ, ತುರಿಕೆ ಕಾಣಿಸಬಹುದು. ಕಣ್ಣು ಬೇನೆಯೂ ಕಾಡಬಹುದು.

ಉತ್ತರ: ಗುಣಮಟ್ಟದ ಸನ್ ಗ್ಲಾಸ್ ಬಳಸಬೇಕು. ನೇರಳಾತೀತ ಕಿರಣಗಳಿಂದ ಶೇ 100ರಷ್ಟು ರಕ್ಷಣೆ ನೀಡುವ ಕನ್ನಡಕ ಧರಿಸಿ. ಹೆಚ್ಚೆಚ್ಚು ನೀರು ಕುಡಿಯಿರಿ. ಕಣ್ಣುಗಳನ್ನು ಆಗಾಗ್ಗೆ ತಣ್ಣೀರಿನಿಂದ ಮೃದುವಾಗಿ ತೊಳೆಯಿರಿ. ಕಣ್ಣುಗಳನ್ನು ಕೈಯಿಂದ ಉಜ್ಜಬೇಡಿ. ಬಿಸಿಲು ಮತ್ತು ದೂಳಿನಿಂದ ರಕ್ಷಣೆ ಪಡೆಯಿರಿ. ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ಬಳಸುವಾಗ ಕಣ್ಣಿನ ಆಯಾಸ ತಡೆಯಲು ‘20-20-20’ (ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡ್ ಕನಿಷ್ಠ 20 ಅಡಿ ದೂರದ ವಸ್ತು ವೀಕ್ಷಿಸುವುದು) ನಿಯಮ ಪಾಲಿಸಿ. ಕಣ್ಣಿನ ಆರೋಗ್ಯಕ್ಕೆ ಸರಿಯಾದ ವಿಶ್ರಾಂತಿ ಹಾಗೂ ಆರೋಗ್ಯಕರ ನಿದ್ರೆಯೂ ಬಹಳ ಮುಖ್ಯ.

l ಮಕ್ಕಳ ಬಗ್ಗೆ ವಹಿಸಬೇಕಾದ ಕಾಳಜಿ ಏನು?

ಉತ್ತರ: ಅತಿ ಹೆಚ್ಚಿನ ಶಾಖವಿದ್ದರೂ ಮಕ್ಕಳು ಹೊರಗೆ ಆಟವಾಡಲು ಇಷ್ಟಪಡುತ್ತಾರೆ. ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ‘ಲೂ’ ಗಾಳಿ ತೀವ್ರವಾಗಿರುತ್ತದೆ. ಹೀಗಾಗಿ ಅವರನ್ನು ಮನೆಯೊಳಗೇ ಇರುವಂತೆ ನೋಡಿಕೊಳ್ಳಿ. ಹೊರಹೋಗುವಾಗ ಟೋಪಿ ಮತ್ತು ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಲು ಪ್ರೇರೇಪಿಸಿ.

l ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

ಉತ್ತರ: ಕಣ್ಣುಗಳಲ್ಲಿ ಸತತವಾಗಿ ನೋವು, ಕೆಂಪಾಗುವಿಕೆ, ಮಸುಕಾದ ದೃಷ್ಟಿ, ಅತಿಯಾದ ನೀರು ಬರುವುದು ಅಥವಾ ಬೆಳಕನ್ನು ನೋಡಲು ಕಷ್ಟವಾಗುತ್ತಿದ್ದರೆ ತಕ್ಷಣ ತಜ್ಞರನ್ನು ಸಂಪರ್ಕಿಸಬೇಕು.

l ಕಣ್ಣಿನ ಆರೋಗ್ಯದ ವಿಷಯದಲ್ಲಿ ಏನನ್ನು ತಪ್ಪಿಸಬೇಕು?

ಉತ್ತರ: ವೈದ್ಯರ ಸಲಹೆ ಇಲ್ಲದೆ ಔಷಧದ ಅಂಗಡಿಗಳಿಂದ ತಂದ ಆಯ್ ಡ್ರಾಪ್ಸ್ ಬಳಸಬಾರದು. ಇದು ಸಮಸ್ಯೆ ಪರಿಹರಿಸುವ ಬದಲು ಮತ್ತಷ್ಟು ಅನಾಹುತಕ್ಕೆ ಕಾರಣವಾಗಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-34-2131785750

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.