ಕಲಬುರಗಿ: ‘ನಮ್ಮೂರ ಶಾಲೆ ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದಾಗಲಿ, ಬೇರೆ ಊರಿಗೆ ನಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ’ ಎಂದು ತಾಲ್ಲೂಕಿನ ಹುಣಸಿ ಹಡಗಿಲ ಗ್ರಾಮದ ಪೋಷಕರು, ಗ್ರಾಮಸ್ಥರು, ‘ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ’ಯ ಸದಸ್ಯರು ಹಾಗೂ ಎಐಡಿಎಸ್ಒ ಕಾರ್ಯಕರ್ತರು ಶಾಲೆಯ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

‘ನಮ್ಮೂರ ಶಾಲೆ ನಮ್ಮ ಕಣ್ಮಣಿ’ ಎಂಬ ಬ್ಯಾನರ್ ಶಾಲೆಯ ಮುಂಭಾಗದಲ್ಲಿ ಕಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಸ್. ಎಂ. ಶರ್ಮಾ ಮಾತನಾಡಿ, ‘ರಾಜ್ಯ ಸರ್ಕಾರ ತನ್ನ ಹಠಮಾರಿತನದಿಂದ ಸಾರ್ವಜನಿಕರ ಪ್ರತಿರೋಧದ ನಡುವೆಯೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿ ಮಾಡಿ, ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಈಗಾಗಲೇ ರಾಮನಗರ ಜಿಲ್ಲೆಯಲ್ಲಿ 3 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳೊಂದಿಗೆ 40 ಶಾಲೆಗಳನ್ನು ವಿಲೀನ ಕೆಲಸ ಪ್ರಾರಂಭವಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಅನೇಕ ಹಳ್ಳಿಗಳ ಶಾಲೆಗಳನ್ನು ವಿಲೀನಗೊಳಿಸುವ ಅಧಿಕೃತ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.

‘ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಜನರಿಗೆ ಹಸಿ ಸುಳ್ಳುಗಳನ್ನು ಹೇಳಿ ರಾಜ್ಯ ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದೆ. ರಾಜ್ಯದಾದ್ಯಂತ ಸಾವಿರಾರು ಪೋಷಕರು ಬೀದಿಗಿಳಿದು ಹೋರಾಟದ ಧ್ವನಿ ಎತ್ತುತ್ತಿದ್ದಾರೆ. ಸರ್ಕಾರವು ಬಡ ವಿದ್ಯಾರ್ಥಿಗಳ ಶಿಕ್ಷಣದ ಜೊತೆ ಚೆಲ್ಲಾಟವಾಡದೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷೆ ಪ್ರೀತಿ ದೊಡ್ಡಮನಿ, ಸದಸ್ಯರಾದ ಬಾಬು ಪವಾರ್, ಗ್ರಾಮಸ್ಥರಾದ ಗುಂಡಪ್ಪ ಪೋತೆಕರ್, ಬಸವರಾಜ್ ನಾಯ್ಕೋಡಿ, ಸೋಮಲಿಂಗ್ ಸಿಂಧೆ, ಬುದ್ಧಪ್ಪ ನಾಯ್ಕೋಡಿ, ಶರಣಪ್ಪ ನಾಯ್ಕೋಡಿ, ಮಲ್ಲೇಶ್ ನಾಯ್ಕೋಡಿ, ಬಾಬುರಾವ್ ನಾಯ್ಕೋಡಿ, ಚಂದ್ರಕಾಂತ್ ನಾಯ್ಕೋಡಿ, ಸಂಗೀತ ನಾಯ್ಕೋಡಿ, ಗುರುಬಾಯಿ ಮಡ್ಡಿ ಹಾಗೂ ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-34-83359876

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.