ಕಲಬುರಗಿ: ‘ಗುಲಬರ್ಗಾ ವಿಶ್ವವಿದ್ಯಾಲಯ ಹೊರ ಗುತ್ತಿಗೆ ನೌಕರರ ವೇತನಕ್ಕಾಗಿ ಸಂಚಿತ ನಿಧಿ ಕಾಯ್ದಿರಿಸಿ, ವಿಶ್ವವಿದ್ಯಾಲಯದಿಂದಲೇ ನೇರವಾಗಿ ವೇತನ ಪಾವತಿಸಬೇಕು’ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಗುತ್ತಿಗೆ ನೌಕರರ ಕಲ್ಯಾಣ ಸಂಘವು ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದೆ.

ವಿಶ್ವವಿದ್ಯಾಲಯದ ಕಾರ್ಯಸೌಧ ಎದುರು ತಾತ್ಕಾಲಿಕ ಟೆಂಟ್ ಹೊಡೆದು ಧರಣಿ ನಡೆಸುತ್ತಿದ್ದು, ವಿಶ್ವವಿದ್ಯಾಲಯದ ಹೊರ ಗುತ್ತಿಗೆ ಆಧಾರಿತ 281 ನೌಕರರು ಬುಧವಾರ ಕೆಲಸದಿಂದ ದೂರವುಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

‘ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಾನವ ಸಂಪನ್ಮೂಲ ಒದಗಿಸುವ ಟೆಂಡರ್ ಪದ್ಧತಿ ರದ್ದುಪಡಿಸಬೇಕು. ಕಾರ್ಮಿಕ ಇಲಾಖೆಯು 2024ರ ಸೆಪ್ಟೆಂಬರ್ 14 ಹಾಗೂ ಅಕ್ಟೋಬರ್ 19ರಂದು ನೀಡಿದ ಆದೇಶದಂತೆ ಗುತ್ತಿಗೆ ನೌಕರರ ವೇತನ ವ್ಯತ್ಯಾಸದ ಮೊತ್ತ ಹಾಗೂ ವೇತನ ಪಾವತಿ ಮಾಡುವಲ್ಲಿ ವಿಳಂಬ ಮಾಡಿದ್ದಕ್ಕಾಗಿ 2026ರ ಫೆಬ್ರುವರಿ 3ರಂದು ವಿಧಿಸಿದ ದಂಡ ಶುಲ್ಕ ಪಾವತಿಸಬೇಕು’ ಎಂದು ಪ್ರತಿಭಟನನಿರತರು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಶೀಲಪ್ರಕಾಶ ದೊಡ್ಡಮನಿ ಮಾತನಾಡಿ, ‘ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಬಹುತೇಕ ಕಾಯಂ ನೌಕರರು ನಿವೃತ್ತಿ ಹೊಂದುತ್ತಿದ್ದಾರೆ. ಕೆಲಸದ ಹೆಚ್ಚಿನ ಹೊರೆ ಹೊರಗುತ್ತಿಗೆ ನೌಕರರೇ ನಿಭಾಯಿಸುತ್ತಿದ್ದಾರೆ. 15–20 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ, ಉದ್ಯೋಗ ಭದ್ರತೆಯೇ ಇಲ್ಲ’ ಎಂದು ಬೇಸರಿಸಿದರು.

‘ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಹೊರಗುತ್ತಿಗೆ ನೌಕರರಿಗೆ ಸಂಚಿತ ವೇತನ ಜಾರಿಗೊಳಿಸಿ ನೇರವಾಗಿ ವೇತನ ಪಾವತಿ ಜಾರಿಗೊಳಿಸಲಾಗಿದೆ. ಗುಲಬರ್ಗಾ ವಿವಿ ಕೂಡ ಹೊರಗುತ್ತಿಗೆ ನೌಕರರಿಗೆ ನೇರವಾಗಿ ವೇತನ ಪಾವತಿ ಮಾಡಬೇಕು. ಈ ಕುರಿತು ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾವ ಮಂಡಿಸಿ, ಬಿಡ್ ನೌಕರರಿಗೆ ಸಂಚಿತ ವೇತನವನ್ನು ಜಾರಿಗೊಳಿಸಿ ವೇತನವನ್ನು ಪಾವತಿಸಲು ಅನುಮೋದಿಸಬೇಕು. ಕಾರ್ಮಿಕ ಕಾಯ್ದೆ ಅನುಸಾರ ವೇತನವನ್ನು ಪ್ರತಿ ತಿಂಗಳು 7ನೇ ದಿನಾಂಕದೊಳಗೆ ಕಡ್ಡಾಯವಾಗಿ ಪಾವತಿಸಬೇಕು ಮತ್ತು ಕಾರ್ಮಿಕ ಇಲಾಖೆಯು ಜಾರಿಗೊಳಿಸಿರುವ 2025–26 ಹಾಗೂ 2026–27ನೇ ಸಾಲಿನ ತುಟಿಭತ್ಯೆ ಜೊತೆಗೆ ಬಾಕಿ ಇರುವ 2026ರ ಫೆಬ್ರುವರಿ, ಮಾರ್ಚ್ ತಿಂಗಳ ವೇತನ ಪಾವತಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ವಿಜಯಕುಮಾರ ಕೆಂಗಲ್, ಕಾರ್ಯದರ್ಶಿ ಚಂದ್ರಶಾ ಎಸ್.ಎಂ. ಸೇರಿದಂತೆ ಹೊರ ಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-34-2032730081

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.