ಕಲಬುರಗಿ: ಶಿಕ್ಷಣದ ರೂವಾರಿ ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಕಾಳಗಿ ತಾಲ್ಲೂಕಿನ ವಚ್ಚಾ ಗ್ರಾಮದಲ್ಲಿ ಶನಿವಾರ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ವಚ್ಚಾ ಸ್ಥಳೀಯ ಸಮಿತಿ ವತಿಯಿಂದ ಒಂದು ದಿನದ ಮಕ್ಕಳ ಬೇಸಿಗೆ ಶಿಬಿರ ಮಾಡಲಾಯಿತು.

ಎಐಡಿಎಸ್ಒ ಜಿಲ್ಲಾ ಸಮಿತಿ ಸದಸ್ಯ ದೇವರಾಜ್ ಮಾತನಾಡಿ, ‘ಶೋಷಣೆ ವಿರುದ್ಧ ಶಿಕ್ಷಣದ ಕಿಡಿ ಹಚ್ಚಿದ ಜ್ಯೋತಿಬಾ ಫುಲೆ ಅವರು ಶತಮಾನಗಳ ಕಾಲ ಕವಿದಿದ್ದ ಅಂಧಕಾರವನ್ನು ಹೊಡೆದೋಡಿಸಿ ಜ್ಞಾನದ ಬೆಳಕು ನೀಡಲು ಶಾಲೆಗಳನ್ನು ಆರಂಭಿಸಿದರು. ಶಿಕ್ಷಣದಿಂದ ಮಾತ್ರವೇ ಮನುಷ್ಯರು ವಿಮರ್ಶಾತ್ಮಕ ಧೋರಣೆ ಮತ್ತು ಆತ್ಮಸ್ಥೈರ್ಯ ಹೊಂದಲು ಸಾಧ್ಯ ಎಂಬುದನ್ನು ಬಲವಾಗಿ ಹೇಳಿದರು. ಶಿಕ್ಷಣವು ಸಾರ್ವತ್ರಿಕವಾಗಿರಬೇಕು ಮತ್ತು ಎಲ್ಲರನ್ನೂ ತಲುಪುವಂತೆ ಇರಬೇಕು ಎಂದು ಹೋರಾಟಗಳನ್ನು ಕಟ್ಟಿದರು. ಅವರ ಹೋರಾಟದ ಪ್ರತಿಫಲವಾಗಿ ಇಂದು ಹೆಣ್ಣು ಮಕ್ಕಳು, ಕೆಳ ಸಮುದಾಯ ಸೇರಿದಂತೆ ಎಲ್ಲರೂ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದೇವೆ’ ಎಂದರು.

‘ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಬಡ–ಮಧ್ಯಮ ವರ್ಗದ ಮಕ್ಕಳನ್ನು ಸಂಪೂರ್ಣವಾಗಿ ಶಿಕ್ಷಣದಿಂದ ದೂರ ಮಾಡುತ್ತಿವೆ. ಇಂತಹ ವೇಳೆ ವಿದ್ಯಾರ್ಥಿ ಸಮುದಾಯ ಜ್ಯೋತಿಬಾ ಫುಲೆ ಅವರ ಸಾರ್ವತ್ರಿಕ ಶಿಕ್ಷಣದ ಕೂಗಿನೊಂದಿಗೆ ನಮ್ಮೂರ ಶಾಲೆ ಉಳಿಸಲು ಮುಂದೆ ಬರಬೇಕು’ ಎಂದರು.

ವಿದ್ಯಾರ್ಥಿನಿ ರಮಾ ದೊಡ್ಡಮನಿ ಮಾತನಾಡಿದರು.

ಶಿಬಿರದಲ್ಲಿ ಮಕ್ಕಳಿಗಾಗಿ ಕಥೆಗಳು, ಆಟೋಟಗಳು, ಹಾಡುಗಳು ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಚ್ಚಾ ಗ್ರಾಮದ ಎಸ್ಡಿಎಂಸಿ ಅಧ್ಯಕ್ಷ ಬಸವರಾಜ್ ಪೂಜಾರಿ, ಸಾರ್ವಜನಿಕ ಶಿಕ್ಷಣ ಉಳಿಸಿ ಸ್ಥಳೀಯ ಸಮಿತಿಯ ಅಧ್ಯಕ್ಷ ಶಿವಕುಮಾರ್ ಪೂಜಾರಿ, ಕಾರ್ಯದರ್ಶಿ ಸಂಜುಕುಮಾರ್ ದೊಡ್ಡಮನಿ, ಸದಸ್ಯರಾದ ಕಾಶಿನಾಥ್, ಶ್ರೀನಿವಾಸ್, ಎಐಡಿಎಸ್ಒ ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷ ಗೋವಿಂದ ಯಳವಾರ, ಸದಸ್ಯ ರಾಹುಲ್, ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-34-859157981

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.