ಕಲಬುರಗಿ: ‘ಕನ್ನಡ ಬರೀ ಭಾಷೆಯಲ್ಲ. ಅದು ನಮ್ಮ ಸಂಸ್ಕೃತಿಯ ಬೇರು, ತಾಯ್ನುಡಿ, ತಾಯ್ನೆಲ ಎಲ್ಲವೂ ಆಗಿದೆ. ಕನ್ನಡ ನಮ್ಮ ಜೀವನದ ಅವಿಭಾಜ್ಯ ಅಂಗ’ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಬಣ್ಣಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮಗ್ಯಾರಿಗೂ ಇಂಗ್ಲಿಷ್ನಲ್ಲಿ ಕನಸು ಬೀಳಲ್ಲ; ಕನಸು ಬೀಳುವಂಥದ್ದು, ನಾವೆಲ್ಲ ಕನಸುಗಳನ್ನು ಕಟ್ಟುವಂಥದ್ದೆಲ್ಲವೂ ಕನ್ನಡದಲ್ಲೇ. ಆದರೆ, ಕಾಂಕ್ರೀಟ್ ನಗರಿ ಎನಿಸಿರುವ ಬೆಂಗಳೂರಿನಲ್ಲಿ ಇತ್ತೀಚೆಗೆ ಕನ್ನಡ ಭಾಷೆ ಬೆಳೆಸುವುದು ಕಷ್ಟವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋದರೆ ಕನ್ನಡ ಬಲ್ಲವರನ್ನು ಹೋಟೆಲ್ಗಳಲ್ಲೂ ಹುಡುಕಾಡುವ ಸ್ಥಿತಿಯಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಬೆಂಗಳೂರು ಬಿಟ್ಟು ರಾಜ್ಯದ ಇತರೆಡೆಗೆ ಕನ್ನಡದ ಬೇರುಗಳು ಗಟ್ಟಿಯಾಗಿವೆ. ಅದರ ಫಲವಾಗಿ ಕನ್ನಡ ಹಸಿರಾಗಿ, ಸಮೃದ್ಧವಾಗಿ ನಳನಳಿಸಲು ಸಾಧ್ಯವಾಗಿದೆ. ಇಂಗ್ಲಿಷ್, ಹಿಂದಿ ಸೇರಿದಂತೆ ಬೇರೆ ಭಾಷೆಗಳನ್ನು ಕಲಿಯಲು ಅಡ್ಡಿಯಿಲ್ಲ. ಆದರೆ, ಮಾತೃಭಾಷೆ ಕನ್ನಡಕ್ಕೆ ನಾವೆಲ್ಲ ನಮ್ಮ ತಾಯಿಗೆ ನೀಡುವಂಥ ಎತ್ತರದ ಗೌರವ ನೀಡಬೇಕು. ಇದರಲ್ಲಿ ನಿರ್ಲಕ್ಷ್ಯ ಸಲ್ಲದು’ ಎಂದರು.

‘ನಾವೆಲ್ಲ ಅಂಟಾರ್ಟಿಕದಲ್ಲೋ, ಉಗಾಂಡಾದಲ್ಲೋ ಬದುಕಲಾಗದು. ನಮ್ಮ ಬದುಕು ಇರೋದೇ ಕನ್ನಡ ನಾಡು, ಕನ್ನಡ ಭಾಷೆಯಲ್ಲಿ. ಹೀಗಾಗಿ ಕನ್ನಡ ಭಾಷೆಯನ್ನು ಸಮೃದ್ಧಗೊಳಿಸಬೇಕಿದೆ. ನಾವೆಲ್ಲ ಕನ್ನಡದ ಕಟ್ಟಾಭಿಮಾನಿಗಳಾಗಬೇಕು’ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೆಕೆಆರ್ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಇತ್ತೀಚೆಗೆ ನಾವೆಲ್ಲ ನೆಲ, ಜಲ, ಭಾಷೆಯ ವಿಚಾರವಾಗಿ ಅತಿಕ್ರಮಣ ಕಾಣುತ್ತಿದ್ದೇವೆ. ಇದನ್ನು ಅರಿತವರಂತೆ ನಮ್ಮ ಹಿರಿಯರು 112 ವರ್ಷಗಳ ಹಿಂದೆಯೇ ಕನ್ನಡ ಭಾಷೆ, ನೆಲ, ಜಲ ರಕ್ಷಿಸಲು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದ್ದು ಗಮನಾರ್ಹ. ರಾಜ್ಯದಲ್ಲಿ ಕನ್ನಡ ಏನಾದರೂ ಉಳಿದು, ಬೆಳೆದಿದ್ದರೆ, ಅದರ ಶ್ರೇಯಸ್ಸು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲಬೇಕು’ ಎಂದರು.

‘ಕನ್ನಡ ಸಾಹಿತ್ಯ, ಕನ್ನಡ ಭಾಷೆಗೆ ಕಲ್ಯಾಣ ಕರ್ನಾಟಕ ನೆಲದ ಬಸವಾದಿ ಶರಣರ ಕೊಡುಗೆ ಅಪಾರ. ಅಂಥ ನೆಲವು ಇಂದು ತಲಾವಾರು ಆದಾಯ, ಎಸ್ಎಸ್ಎಲ್ಸಿ– ಪಿಯುಸಿ ಫಲಿತಾಂಶ, ಗಾಳಿಯ ಗುಣಮಟ್ಟ ಎಲ್ಲದರಲ್ಲೂ ಹಿಂದೆ ಬಿದ್ದಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರಗಳಿದ್ದರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಸಾಹಿತಿ ಮುಡುಬಿ ಗುಂಡೇರಾವ ಮಾತನಾಡಿದರು. ವೈದ್ಯೆ ಡಾ.ನಾಗವೇಣಿ ಪಾಟೀಲ, ಮಹಾದೇವ ಬೆಳಮಗಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-34-895798388

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.