ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ದೇವಾಲಯಗಳ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಸಾರ್ವಜನಿಕ ನೀತಿ: ಆಡಳಿತ, ಜೀವನೋಪಾಯಗಳು ಮತ್ತು ಸ್ಥಿರ ಪ್ರಾದೇಶಿಕ ಅಭಿವೃದ್ಧಿ’ ವಿಷಯದ ಕುರಿತು ಆಗಸ್ಟ್ 5ರಿಂದ 7ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನದ ಕರಪತ್ರವನ್ನು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಬಿಡುಗಡೆ ಮಾಡಿದರು.

ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಪ್ರೊ. ಪಾಂಡುರಂಗಾ ವಿ., ಜಿ.ಮಹೇಂದ್ರ ರೆಡ್ಡಿ, ಪ್ರೊ. ಪುಷ್ಪಾ ಸವದತ್ತಿ, ಎಸ್. ಲಿಂಗಮೂರ್ತಿ, ಪ್ರೊ. ದೇವರಾಜ ಉಪಸ್ಥಿತರಿದ್ದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ ಆಶ್ರಯದಲ್ಲಿ ಸಿಯುಕೆ ಆವರಣದಲ್ಲಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ದೇವಾಲಯಗಳ ಆರ್ಥಿಕ, ಸಾಮಾಜಿಕ ಹಾಗೂ ಸಾರ್ವಜನಿಕ ನೀತಿ ಸಂಬಂಧಿತ ಆಯಾಮಗಳ ಕುರಿತು ಪ್ರಬಂಧ ಮಂಡನೆ, ಚರ್ಚೆ ಮತ್ತು ಸಂವಾದಗಳು ನಡೆಯಲಿವೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ತಜ್ಞರು, ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ವಿವಿಧ ದೇವಾಲಯಗಳ ಆಡಳಿತಾಧಿಕಾರಿಗಳು ಭಾಗವಹಿಸಲಿದ್ದಾರೆ.

ಆಸಕ್ತರು ದೇವಾಲಯ ಆರ್ಥಿಕತೆ ಮತ್ತು ಅದರ ಆರ್ಥಿಕ ಪರಿಣಾಮ, ಆಡಳಿತ ಮತ್ತು ಕಾನೂನು ಚೌಕಟ್ಟುಗಳು, ಸ್ಥಿರ ಪ್ರವಾಸೋದ್ಯಮ, ಪರಂಪರೆ ಮತ್ತು ಸಾಂಸ್ಕೃತಿಕ ಸಂಪತ್ತು, ದೇವಾಲಯ ನಿರ್ವಹಣೆಯಲ್ಲಿ ಡಿಜಿಟಲ್ ನವೀಕರಣ ಮತ್ತು ಕೃತಕ ಬುದ್ಧಿಮತ್ತೆ ಕುರಿತು ಪ್ರಬಂಧ ಮಂಡನೆ ಮಾಡಬಹುದಾಗಿದೆ. ಸಂಕ್ಷಿಪ್ತ ಪ್ರಬಂಧ ಸಲ್ಲಿಕೆಗೆ ಜೂನ್ 15 ಕೊನೆಯ ದಿನವಾಗಿದ್ದು, ಜುಲೈ 15ರೊಳಗೆ ಸಂಪೂರ್ಣ ಪ್ರಬಂಧ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿ.ಮಹೇಂದ್ರ ರೆಡ್ಡಿ ಮೊ.96668 51851 ಮತ್ತು ಎಸ್.ಲಿಂಗಮೂರ್ತಿ 90140 30809 ಸಂಪರ್ಕಿಸಬಹುದಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-34-929989208

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.