ಕಲಬುರಗಿ: ಪ್ರಶ್ನೆ ಮಾಡದಿದ್ದರೆ ನಮಗೆ ಈಗಿರುವ ಅಲ್ಪಸ್ವಲ್ಪ ಹಕ್ಕುಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದಂತೆ ನಮಗೆ ಆದ ಅನ್ಯಾಯವನ್ನು ಪ್ರಶ್ನಿಸುವ, ಪ್ರತಿರೋಧಿಸುವ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಚಿಂತಕಿ ಕವಿತಾ ರೆಡ್ಡಿ ಅಭಿಪ್ರಾಯಪಟ್ಟರು.

ನಗರದ ಹೀರಾಪುರ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ‘ಡಾ.ಅಂಬೇಡ್ಕರ್ ಅರಿವು ಉತ್ಸವ’ದಲ್ಲಿ ಸೋಮವಾರ ಅವರು ಮಾತನಾಡಿದರು.

‘ಉನ್ನತ ಶಿಕ್ಷಣದ ಕೋಟಾದಲ್ಲಿ ಮ್ಯಾನೇಜ್ಮೆಂಟ್ ಕೋಟಾ ಶೇ 15, ಆರ್ಥಿಕವಾಗಿ ಹಿಂದುಳಿದವರ ಕೋಟಾ ಶೇ 10 ಹಾಗೂ ಜನರಲ್ ಕೋಟಾ ಶೇ 20.5ರಷ್ಟು ಸೀಟುಗಳನ್ನು ಮೀಸಲಾಗಿಡಲಾಗುತ್ತದೆ. ಅಂದರೆ ಶೇ 7ರಷ್ಟಿರುವ ಜನರಿಗೆ ಶೇ 45ರಷ್ಟು ಸೀಟುಗಳು ಸಿಗುತ್ತವೆ. ಇವರು ಸುಲಭವಾಗಿ ಉನ್ನತ ಶಿಕ್ಷಣದಲ್ಲಿ ಸೀಟು ಪಡೆಯುತ್ತಾರೆ. ಆದರೆ, ದಲಿತರು, ಹಿಂದುಳಿದವರಿಗೆ ನಿಗದಿ ಮಾಡಿದಷ್ಟು ಶುಲ್ಕ ಪಾವತಿಸಲು ಆಗುವುದಿಲ್ಲ. ಹೀಗಾಗಿ, ಶಿಕ್ಷಣದಲ್ಲಿ ವಂಚಿತರಾಗುತ್ತಾರೆ. ನಾವು ಪ್ರಶ್ನೆ ಮಾಡದೇ ಇರುವುದರಿಂದ ನಮ್ಮ ಹಕ್ಕುಗಳು ಸಿಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಚಂದ್ರನ ಅಂಗಳಕ್ಕೆ ಕಾಲಿಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಚರಂಡಿಗಳಲ್ಲಿ ದಲಿತ ಸಮುದಾಯದವರನ್ನು ಇಳಿಸುವ ಬದಲು ಆ ಕೆಲಸವನ್ನು ಮಾಡುವ ಯಂತ್ರವನ್ನು ಆವಿಷ್ಕರಿಸಲು ಆಗಿಲ್ಲ. ಯಂತ್ರ ಆವಿಷ್ಕಾರ ದೊಡ್ಡ ವಿಷಯವಲ್ಲ. ಆದರೆ, ಆ ಸಮುದಾಯದವರು ಚರಂಡಿ ಸ್ವಚ್ಛ ಮಾಡುತ್ತಲೇ ಇರಬೇಕು ಎಂಬ ಮನಸ್ಥಿತಿಯೇ ಸುಧಾರಣಾ ಕ್ರಮಗಳಿಗೆ ಅಡ್ಡಿಯಾಗಿದೆ’ ಎಂದರು.

‘ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೂಲಕ ಬಂದ ಹಕ್ಕುಗಳು ಬರೀ ದಲಿತರಿಗೆ ಸೀಮಿತವಾಗಿಲ್ಲ. ನಮ್ಮಂತಹ ಮಹಿಳೆಯರಿಗೂ ಅನುಕೂಲ ಮಾಡಿಕೊಟ್ಟಿವೆ. ಆದ್ದರಿಂದಲೇ 2019ರಲ್ಲಿ ಬೆಂಗಳೂರಿನಿಂದ ಬೀದರ್ವರೆಗೆ 817 ಕಿ.ಮೀ. ದೂರವನ್ನು ಸೈಕಲ್ ಮೂಲಕ ಕ್ರಮಿಸಿದೆ’ ಎಂದು ಸ್ಮರಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಪರಿಣಾಮವಾಗಿಯೇ ಮಲ್ಲಿಕಾರ್ಜುನ ಖರ್ಗೆ ಅವರು 371 (ಜೆ) ಕಲಂ ತಿದ್ದುಪಡಿ ಮಾಡಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿದರು. ಸಂವಿಧಾನದಲ್ಲಿ ಸರ್ವರಿಗೂ ಸಮಾನ ಶಿಕ್ಷಣ ಹಕ್ಕು ನೀಡಿದ್ದರಿಂದಲೇ ಕಲಬುರಗಿಯಲ್ಲಿ ಶಾಲಾ ಕಾಲೇಜುಗಳು ಆರಂಭವಾಗಿ ಇಲ್ಲಿನವರಿಗೆ ಶಿಕ್ಷಣ ಸಿಗುವಂತಾಯಿತು. ನಾವು ಕಂದೀಲಿನ ಬೆಳಕಿನಲ್ಲಿ ಓದುತ್ತಿದ್ದೆವು. ಉನ್ನತ ಶಿಕ್ಷಣಕ್ಕೆ ಬೇರೆ ಜಿಲ್ಲೆಗಳಿಗೆ ಹೋಗಬೇಕಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಸ್ಥಾನಮಾನದ ಪರಿಣಾಮ ಸಾವಿರಾರು ವೈದ್ಯಕೀಯ, ಎಂಜಿನಿಯರಿಂಗ್ ಸೀಟುಗಳು ನಮ್ಮ ವಿದ್ಯಾರ್ಥಿಗಳಿಗೆ ಸಿಗುತ್ತಿವೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಬೀದರ್ ಜಿಲ್ಲೆ ಅಣದೂರಿನ ಭಂತೆ ಜ್ಞಾನಸಾಗರ ಅವರು ಬುದ್ಧ ನಮನ ಸಲ್ಲಿಸಿದರು. ಟಿಪ್ಪು ಸುಲ್ತಾನ್ ವಂಶಸ್ಥ ಸೈಯದ್ ಮನ್ಸೂರ್ ಅಲಿ ಶಾ, ಬಿಎಸ್ಐ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಪುಟ್ಟಮಣಿ ದೇವಿದಾಸ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹಣಮಂತ ಇಟಗಿ, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಅಮೀನ್ ಮುಕ್ತಾರ್ ಅಹ್ಮದ್, ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ ಇತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-34-1025014611

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.