ಕಲಬುರಗಿ: ‘48 ವರ್ಷದ ರೋಗಿಯೊಬ್ಬರು ಈ ಹಿಂದೆ ಬೇರೆ ಆಸ್ಪತ್ರೆಯಲ್ಲಿ ಕಿಡ್ನಿ ಕ್ಯಾನ್ಸರ್ ಚಿಕಿತ್ಸೆ ಪಡೆದಿದ್ದರು. ಅವರಿಗೆ ಮತ್ತೆ ಕಿಡ್ನಿ ಕ್ಯಾನ್ಸರ್ ರೋಗ ಕಾಣಿಸಿಕೊಂಡಿತ್ತು. ಕ್ಯಾನ್ಸರ್ ಇಡೀ ಕಿಡ್ನಿ ಮತ್ತು ಸುತ್ತಲಿನ ರಕ್ತನಾಳಕ್ಕೆ ಹರಡಿತ್ತು. ಅತ್ಯಂತ ಸಂಕೀರ್ಣವಾದ ಮರುಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ’ ಎಂದು ಬೆಂಗಳೂರು ಮಣಿಪಾಲ ಆಸ್ಪತ್ರೆಯ ಮೂತ್ರಶಾಸ್ತ್ರ ಮತ್ತು ರೊಬೊಟಿಕ್ ಸರ್ಜರಿ ತಜ್ಞ ಡಾ.ಮೊಹಮ್ಮದ್ ಶಾಹಿದ್ ಅಲಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಚಿಕಿತ್ಸೆಯ ನಂತರ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಕಳೆದ ಐದು ವರ್ಷಗಳಿಂದ ಕ್ಯಾನ್ಸರ್ ಮುಕ್ತವಾಗಿದ್ದು, ಆರೋಗ್ಯವಾಗಿದ್ದಾರೆ. ನಿಖರವಾದ ಶಸ್ತ್ರಚಿಕಿತ್ಸೆಯನ್ನು ಮಾಡಿದರೆ ರೋಗಿಗಳನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ’ ಎಂದರು.

ಆಸ್ಪತ್ರೆಯ ನೆಫ್ರಾಲಜಿ ಮತ್ತು ಕಿಡ್ನಿ ಕಸಿ ತಜ್ಞ ಡಾ.ಮೊಹಮ್ಮದ್ ಫಹಾದ್ಖಾನ್ ಮಾತನಾಡಿ, ‘ಮಧುಮೇಹ ಹಾಗೂ ಬಿಪಿಯಿಂದ ಬಳಲುತ್ತಿದ್ದ ಕಲಬುರಗಿಯ ರೋಗಿಯೊಬ್ಬರಿಗೆ ಕಿಡ್ನಿ ವೈಪಲ್ಯವಾಗಿತ್ತು. ಅವರಿಗೆ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ಬಳಿಕ ರೊಬೊಟಿಕ್ ತಂತ್ರಜ್ಞಾನದ ಮೂಲಕ ಅವರ ಪತ್ನಿ ನೀಡಿದ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಈಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ’ ಎಂದು ಹೇಳಿದರು.

‘ಬದಲಾದ ಜೀವನ ಶೈಲಿಯಿಂದಾಗಿ ಮಧುಮೇಹ, ರಕ್ತದ ಒತ್ತಡ, ಅಧಿಕ ಬಿಸಿಲು ಹಾಗೂ ನಿರ್ಜಲೀಕರಣ ಉಂಟಾಗಿ ಕಿಡ್ನಿ ಕಾಯಿಲೆಗಳು ಉಂಟಾಗುತ್ತಿವೆ. ಸರಿಯಾದ ಸಮಯಲ್ಲಿ ಬಿಪಿ, ಶುಗರ್ ಮತ್ತು ರಕ್ತ ತಪಾಸಣೆ ಮಾಡಬೇಕು. ಪರಿಸರ ಮಾಲಿನ್ಯ ಕೆಲಸದ ಸ್ಥಳಗಳಲ್ಲಿ ಎದುರಾಗುವ ಹಾನಿಕಾರಕ ಅಂಶಗಳು ಕೂಡ ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತಿವೆ. ಆದ್ದರಿಂದ ಜನರು ಜಾಗೃತಗೊಂಡು ಕಾಯಿಲೆ ಆರಂಭದಲ್ಲಿಯೇ ಚಿಕಿತ್ಸೆ ಪಡೆಯಬೇಕು’ ಎಂದು ಹೇಳಿದರು.

ಕಿಡ್ನಿ ಕಸಿ ಮಾಡಿಸಿಕೊಂಡ ಸುಭಾಷ್ ಅವರು ಮಾತನಾಡಿ, ‘ಕಿಡ್ನಿ ವೈಫಲ್ಯದಿಂದಾಗಿ ವಿಪರೀತ ಸುಸ್ತು, ದೇಹದ ಊತವಾಗುತ್ತಿತ್ತು. ಸುಮಾರು ವರ್ಷಗಳ ಕಾಲ ಡಯಾಲಿಸಿಸ್ ಮಾಡಿ, ಸಾಧ್ಯವಾಗದೇ ಇದ್ದಾಗ ಮಣಿಪಾಲ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡೆ. ಈಗ ಆರೋಗ್ಯ ಚೆನ್ನಾಗಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-34-146857840

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.