ಕಲಬುರಗಿ: ‘ಮನಸ್ಸು ಪ್ರಶಾಂತವಾಗಿದ್ದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಹೇಳಿದರು.

ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ‘ಸರ್ವಜ್ಞ ಕೌನ್ಸೆಲಿಂಗ್ ಸೆಂಟರ್’ನಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕುರಿತ ಪ್ರೇರಣಾ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಧೈರ್ಯದಿಂದ, ಸಹನೆಯಿಂದ, ಸ್ವಾವಲಂಬಿಯಾಗಿ, ನೆಮ್ಮದಿಯಿಂದ ಬದುಕಬೇಕು. ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಬದುಕನ್ನು ಸುಂದರಗೊಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪೌಷ್ಟಿಕ ಆಹಾರದ ಕೊರತೆ, ಹಣಕಾಸಿನ ಏರುಪೇರು, ಸಂಬಂಧಗಳಲ್ಲಿ ಒಡಕು, ಉದ್ಯೋಗದಲ್ಲಿ ತೊಂದರೆ ಇಂತಹ ಸಮಸ್ಯೆಗಳು ಬರಲು ಕಾರಣವೆಂದರೆ ನಮ್ಮಲ್ಲಿ ಇರುವ ಕೀಳರಿಮೆ, ನಕಾರಾತ್ಮಕ ಆಲೋಚನೆ, ಒಂಟಿತನ, ಬೇರೆಯವರ ಆಸರೆ ಇಲ್ಲದೆ ಇರುವಿಕೆ, ಜ್ಞಾನ ತಿಳಿವಳಿಕೆ ಇಲ್ಲದಿರುವುದು. ಇಂತಹ ಸಂದರ್ಭದಲ್ಲಿ ನಮ್ಮ ಮನಸ್ಸು ಕೋಪ, ದುಃಖ, ಭಯ, ತಪ್ಪಿತಸ್ಥ ಭಾವನೆಯಿಂದ ಕೂಡಿರುತ್ತದೆ. ಅಂಥವರಿಗೆ ಸಾಂತ್ವನ, ಸಮಾಲೋಚನೆ ಅಗತ್ಯ’ ಎಂದರು.

ಸೈಕಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಆರ್.ವೆಂಕಟರಡ್ಡಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ ಮಾತನಾಡಿ, ‘ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದಿದ ಮಕ್ಕಳು ನಮ್ಮ ಕಾಲೇಜಿಗೆ ಬಂದು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡುತ್ತಿದ್ದಾರೆ. ಇದಕ್ಕೆ ಡಾ.ಸಿ.ಆರ್. ಚಂದ್ರಶೇಖರ, ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಅವರ ಪ್ರೇರಣಾದಾಯಕ ನುಡಿಗಳು ಕಾರಣ’ ಎಂದರು.

ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ, ವಿನುತ ಆರ್.ಬಿ., ಪ್ರಭುಗೌಡ ಸಿದ್ದಾರಡ್ಡಿ, ಪ್ರಭುದೇವ ಎಂ.ಎಸ್., ಕರುಣೇಶ್ ಹಿರೇಮಠ, ಗುರುರಾಜ್ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-34-1935157179

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.