ಕಲಬುರಗಿ: ‘ಬರೀ ವಸ್ತ್ರ, ಕೇಶ ವಿನ್ಯಾಸದಿಂದ ಆಧುನಿಕರಾದರೆ ಸಾಲದು. ನಮ್ಮ ಆಲೋಚನೆಗಳು ಆಧುನಿಕಗೊಳ್ಳಬೇಕು. ಅಂದಾಗ ಡಾ.ಅಂಬೇಡ್ಕರ್ ಅವರ ಪ್ರಬುದ್ಧ ಭಾರತದ ಕನಸು ಸಾಕಾರಗೊಳ್ಳಲು ಸಾಧ್ಯ’ ಎಂದು ಗೋದುತಾಯಿ ಕಾಲೇಜಿನ ಪ್ರಾಚಾರ್ಯೆ ಪುಟ್ಟಮಣಿ ದೇವಿದಾಸ ಅಭಿಪ್ರಾಯಪಟ್ಟರು.

ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾ ಮಹಿಳಾ ಒಕ್ಕೂಟ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ಚಾರಿಟಬಲ್ ಟ್ರಸ್ಟ್ನಿಂದ ಸೋಮವಾರ ಹಮ್ಮಿಕೊಂಡಿದ್ದ ಮಹಿಳೆಯರ ಫ್ಯಾಷನ್ ಶೋ ‘ಕಲಬುರಗಿ ಕ್ವೀನ್’ ಹಾಗೂ ಹೆಣ್ಣು ಮಕ್ಕಳ ವಿವಿಧ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದು ಮಹಿಳೆಯರ ಫ್ಯಾಷನ್ ಶೋ ಹಮ್ಮಿಕೊಳ್ಳಲಾಗಿದೆ. ಇದು ಅಭಿನಂದನೀಯ. ಫ್ಯಾಷನ್ ಶೋ ಬಾಹ್ಯ ಆಧುನಿಕರಣ ಸಾರುತ್ತದೆ. ಅಂತೆಯೇ ನಮ್ಮೊಳಗಿನ ವಿಚಾರಗಳಲ್ಲಿ ಆಧುನಿಕತೆ ಬಂದಿದೆಯೇ? ಎಲ್ಲ ಜಾತಿ–ಧರ್ಮ–ಲಿಂಗ ತಾರತಮ್ಯಗಳನ್ನು ಮೀರಿ ಒಂದಾಗಿದ್ದೇವೆಯೇ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.

‘ಮಹಿಳೆಯರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ಬದಲಾವಣೆಗೆ ಪ್ರೇರೇಪಿಸಿದ, ಶ್ರೇಷ್ಠ–ಕನಿಷ್ಠ ಭೇದ ಬಿಡದಿದ್ದರೆ, ಹೆಚ್ಚು–ಕಮ್ಮಿ, ಬಡವ–ಶ್ರೀಮಂತ, ಮಾಲೀಕ–ನೌಕರ ಎಂಬ ಆಲೋಚನೆ ಹೋಗದಿದ್ದರೆ ನೀವು ಶಿಕ್ಷಿತರಲ್ಲ; ನೀವು ಅಕ್ಷರಸ್ಥರಷ್ಟೇ ಎಂದು ಅಂಬೇಡ್ಕರ್ ಹೇಳುತ್ತಾರೆ. ಅಂಥ ಶಿಕ್ಷಣವನ್ನು ತಾಯಂದಿರು ಮಕ್ಕಳಿಗೆ ಕೊಡಬೇಕಿದೆ’ ಎಂದರು.

‘ಎಲ್ಲಿಯ ತನಕ ನಮ್ಮಲ್ಲಿ ಬಾಬಾಸಾಹೇಬರು ಹೇಳಿದ ಮೈತ್ರಿ ಭಾವ, ಬುದ್ಧ–ಬಸವ–ಅಂಬೇಡ್ಕರ್ ಚಿಂತನೆಗಳು ನಮ್ಮಲ್ಲಿ ಬೆಳೆಯಲ್ಲವೋ ಅಲ್ಲಿಯ ತನಕ ಬಾಬಾಸಾಹೇಬರ ಜಯಂತಿ ಎಷ್ಟೇ ವಿಭಿನ್ನವಾಗಿ ಆಚರಿಸಿದರೂ ಅದಕ್ಕೆ ಅರ್ಥವೇ ಇರಲ್ಲ’ ಎಂದು ಅಭಿಪ್ರಾಯಪಟ್ಟರು.

ಶಾಸಕ ಎಂ.ವೈ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನಸೂಯಾ ಸುಲೇಕರ ಅಧ್ಯಕ್ಷತೆ ವಹಿಸಿದ್ದರು. ಡಾ.ಭಾಗ್ಯಶ್ರೀ ಪಾಟೀಲ, ಕಲಬುರಗಿಯ ಶಕ್ತಿನಗರ ಬುದ್ಧವಿಹಾರದ ಮಾತೆ ಸುಮನ್ ಆರಾಧ್ಯ, ಮುಂಬೈನ ರೂಪದರ್ಶಿ ಸೋನಲ್ ಹಜಾರೆ, ಲಚ್ಚಪ್ಪ ಜಮಾದಾರ, ಮಹಾಂತೇಶ ಕೌಲಗಿ, ಎಸ್.ಎಸ್.ತಾವಡೆ, ಯಲ್ಲಮ್ಮ ಬತಾಸೆ, ಗುರುಲಿಂಗಯ್ಯ ಸಾಲಿಮಠ, ಲತಾ ರಾಠೋಡ, ದಿಗಂಬರ ಬೆಳಮಗಿ, ಸಿದ್ಧಾರ್ಥ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಬಳಿಕ ಮಹಿಳೆಯರಿಂದ ಫ್ಯಾಷನ್ ಶೋ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-34-284138126

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.